ರಾಮದುರ್ಗ 09: ದೇವಾಂಗ ಸಮಾಜ ಅನಾದಿಕಾಲದಿಂದಲೂ ಸಮಾಜದ ಜನತೆಯ ಜೀವನಾವಶ್ಯಕವಾದ ವಸ್ತ್ರ ಜೊತೆಗೆ ಉತ್ಕೃಷ್ಠವಾದ ಸಂಸ್ಕೃತಿ ಕೊಡುಗೆಯಾಗಿ ನೀಡುತ್ತಾ ಬಂದಿದೆ ಎಂದು ಗಾಯತ್ತಿ ಪೀಠಾಧ್ಯಕ್ಷರು ಹಾಗೂ ದೇವಾಂಗ ಸಮಾಜದ ಜಗದ್ಗುರುಗಳಾದ ದಯಾನಂದ ಪುರಿ ಮಹಾಸ್ವಾಮಿ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಬಾಣಕಾರ ಪೇಠೆಯ ಬನಶಂಕರಿ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ನಡೆದ ಬದಾಮಿ ಬನಶಂಕರಿ ದೇವಿಗೆ ಪೀತಾಂಬರ ಸಮರ್ಪಣೆ ಹಾಗೂ ಶಾಖಾ ಮಠದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬನಶಂಕರಿ ದೇವಿಯ ಅಪ್ಪಟ ಭಕ್ತಾಧಿಗಳಾದ ದೇವಾಂಗ ಸಮಾಜ ದೇವಿಗೆ ಪೀತಾಂಬರ ಉಡುಗರೆಯನ್ನು ಕಾಣಿಕೆಯಾಗಿ ನೀಡುತ್ತಿರುವುದು ಶ್ಲಾಘನೀಯ. ಬನಶಂಕರಿ ಜಾತ್ರೆಯಲ್ಲಿ ಎಲ್ಲರೂ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಕರೆ ನೀಡಿದರು.
ದೇವಾಂಗ ಸಮಾಜದ ಕಾರ್ಯದಶರ್ಿ ಹಾಗೂ ಬನಶಂಕರಿ ಪಾದಯಾತ್ರೆ ಸೇವಾ ಸಮಿತಿಯ ಅಧ್ಯಕ್ಷ ರವೀಂದ್ರ ಕಲಬುಗರ್ಿ ಮಾತನಾಡಿ, ದೈವಿಭಕ್ತಿಯ ಜೊತೆಗೆ ಎಲ್ಲರೂ ಸುಶಿಕ್ಷಿತರಾಗಿ ಸಮಾಜದ ಶ್ರಯೋಭಿವೃದ್ಧಿಗೆ ಕೊಡುಗೆ ನೀಡಬೇಕೆಂದರು.
ಶ್ರೀಗಳು ರಾಮದುರ್ಗ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಪಟ್ಟಣದ ಮಿನಿವಿಧಾಸೌಧದಿಂದ ಶ್ರೀಗಳನ್ನು ಮೆರವಣಿಗೆ ಮೂಲಕ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಕರೆ ತರಲಾಯಿತು. ಇದೇ ಸಂದರ್ಭದಲ್ಲಿ ತಾಲೂಕಿನ ದೇವಾಂಗ ಸಮಾಜದ ಪರವಾಗಿ ಶ್ರೀಗಳನ್ನು ಸತ್ಕರಿಸಲಾಯಿತು.
ಬನಶಂಕರಿ ದೇವಾಂಗ ಸಮಾಜದ ಅಧ್ಯಕ್ಷ ಶಂಕ್ರಣ್ಣ ಮುರುಡಿ ಮಾತನಾಡಿದರು. ದೇವಾಂಗ ಭವನ ನಿಮರ್ಾಣಕ್ಕೆ ತಲಾ 1.5 ಲಕ್ಷ ರೂ ಕಾಣಿಕೆ ನೀಡಿದ ನೇಕಾರ ಮುಖಂಡರಾದ ಏಕನಾಥ ಕೊಣ್ಣೂರ ಹಾಗೂ ಶಿವಾನಂದ ಜವಳಿ ಶಾಸ್ತ್ರೀಗಳನ್ನು ಸತ್ಕರಿಸಲಾಯಿತು.