ಲೋಕದರ್ಶನ ವರದಿ
5 ಕ್ವಿಂಟಲ್ ದ್ರಾಕ್ಷಿ ಹಣ್ಣಿನಿಂದ ಖಿಳೇಗಾಂವ ಬಸವೇಶ್ವರನಿಗೆ ಅಲಂಕಾರ, ಪೂಜೆ
ಸಂಬರಗಿ 27: ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿರುವ ಲಕ್ಷಾಂತರ ಭಕ್ತರ ಭಾವೈಕ್ಯ ಆರಾಧ್ಯ ದೇವರಾದ ಖಿಳೇಗಾಂವ ಬಸವೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ನಿಮಿತ್ತವಾಗಿ ಭಕ್ತರಿಂದ 5 ಕ್ವಿಂಟಲ ದ್ರಾಕ್ಷಿ ಹಣ್ಣಿನಿಂದ ದೇವರಿಗೆ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು ಮಹಾಶಿವರಾತ್ರಿ ನಿಮಿತ್ಯವಾಗಿ ಗ್ರಾಮದ 25ಕ್ಕಿಂತ ಹೆಚ್ಚು ಜೋಡೆತ್ತಿನ ಬಂಡಿ ಮೂಲಕ ಕೃಷ್ಣಾ ನದಿಯಿಂದ ನೀರು ತಂದು ಪೂಜೆ ನಡೆಸಿ ದೇವರ ದರ್ಶನಕ್ಕೆ ಲಕ್ಷಾಂತರ ಭಕ್ತರ ತಂಡ ಹರಿದು ಬರುತ್ತಿದೆ.
ಮಹಾಶಿವರಾತ್ರಿ ನಿಮಿತ್ಯವಾಗಿ ಸಾವಿರಾರು ಭಕ್ತರು ತಮ್ಮ ಕಾಲ್ನಡಿಗೆ ಮೂಲಕ ನೀರು ತಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬುಧವಾರ ಬೆಳ್ಳಿಗೆಯಿಂದ ಗುರುವಾರ ಬೆಳ್ಳಿಗೆವರೆಗೆ 11 ಬೇಳೆ ಪೂಜೆ ಸಲ್ಲಿಸಿದರು. ಅಗ್ರಾಣಿ ತೀರದಲ್ಲಿ ಇರುವ ಸಂಗಮೇಶ್ವರದಿಂದ ಭಕ್ತರು ಪಲ್ಲಕ್ಕಿ ಮೆರವಣಿಗೆ ನಡೆಯಿತು. ರಾತ್ರಿ ಶಿವಭಜನೆ ಹಾಗೂ ವಿವಿಧ ಕಲಾ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ದೇವರ ದರ್ಶನಕ್ಕೆ ಬರುವ ಭಕ್ತರು ಸಾಲಿನಲ್ಲಿ ನಿಂತು ದರ್ಶನ ಪಡೆದುಕೊಂಡರು. ಭಕ್ತರಿಂದ ಸೇಬು ಹಣ್ಣು, ಬಾಳೆ ಹಣ್ಣು, ದ್ರಾಕ್ಷಿಯಿಂದ ಅಲಂಕರಿಸಿದರು. ಭಕ್ತರಿಗೆ ವಿಶೇಷವಾಗಿ ಮಹಾಪ್ರಸಾದವನ್ನು ಆಯೋಜಿಸಲಾಗಿತ್ತು.
ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಅಥಣಿ ಫಟಕದಿಂದ ವಿಶೇಷ ಬಸ್ ಸೇವೆ ಕಲ್ಪಿಸಿದರು. ಅದೆ ಪ್ರಕಾರ ಕವಟೆ ಮಹಾಂಕಾಳ ಜತ್ತ ಘಟಕದಿಂದ ಭಕ್ತರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಹಾಶಿವರಾತ್ರಿ ನಿಮಿತ್ಯವಾಗಿ ದೇವಸ್ಥಾನ ಕಮೀಟಿಯಿಂದ ಎಲ್ಲ ವ್ಯವಸ್ಥೆ ಸೌಲಭ್ಯ ಕಲ್ಪಿಸಲಾಯಿತು. ಕರ್ನಾಟಕ ಸರ್ಕಾರ ಮಹಿಳೆಯರಿಗೆ ಬಸ ಪ್ರಯಾಣ ಉಚಿತ ಇದ್ದ ಕಾರಣ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು. ವಿಶೇಷವಾಗಿ ಮಹಿಳೆಯರೆ ಹೆಚ್ಚಾಗಿ ಆಗಮಿಸಿದರು.