ಲೋಕದರ್ಶನ ವರದಿ
ಯಲಬುಗರ್ಾ 27: ಭಾರತ ಮಾತೆಯ ಮಡಿಲಲ್ಲಿ ಬದುಕುತ್ತಿರುವ ನಾವೆಲ್ಲರೂ ದೇಶದ ಪ್ರಗತಿಗಾಗಿ ಶ್ರಮಿಸಲು ಕಟಿಬದ್ಧರಾಗಬೇಕು ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.
ಪಟ್ಟಣದ ಬಯಲು ರಂಗ ಮಂದಿರದಲ್ಲಿ ನಡೆದ 70ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು ಗಾಂಧೀಜಿ ನೆಹರೂ ವಲ್ಲಬಾಯಿ ಪಾಟೀಲ್ ಬಾಲ ಗಂಗಾದರ್ನಾಥ ತಿಲಕ್ ಸುಭಾಸ್ಚಂದ್ರ ಬೋಸ್ ಡಾ. ಬಿ. ಆರ್ ಅಂಬೇಡ್ಕರ್ ಮತ್ತು ಮೊದಲಾದ ಮಹಾನ್ ಚಿಂತಕರ ಪ್ರಯತ್ನದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು ಎಂದರು.
ಜಿಪಂ ಸದಸ್ಯೆ ಗಂಗಮ್ಮ ಗುಳ್ಳಗಣ್ಣನವರು ಮಾತನಾಡಿ ಡಾ. ಬಾಬು ರಾಜ್ರೇಂದ್ರ ಪ್ರಸಾದ್, ಮತ್ತು ಡಾ. ಬಿ. ಆರ್ ಅಬೇಂಡ್ಕರ. ಭಗತ್ಸಿಂಗ್ ನೇತೃತ್ವದಲ್ಲಿ ಅನೇಕ ಗಣ್ಯರು ಶ್ರಮದಿಂದ ವಿಶ್ವದಲ್ಲಿಯೇ ಅತ್ಯಂತ್ಯ ವ್ಯವಸ್ಥಿತವಾದ ಸಂವಿಧಾನವನ್ನು ನಮ್ಮ ದೇಶ ಹೊಂದಲು ಸಾಧ್ಯವಾಯಿತು ಹಾಗೂ ನಮಗೆ ಸಂವಿಧಾನದ ಕೊಡುಗೆಯನ್ನು ನೀಡಿ ನಮಗೆಲ್ಲರಿಗೂ ಉದಾತ್ತ ಜೀವನ ಕಲ್ಪಿಸಿಕೊಳ್ಳಲು ಅವಕಾಶ ನೀಡಿದವರು ಈ ಮಹಾನ್ ಚಿಂತಕರನ್ನು ಪೂಜ್ಯ ಭಾವದಿಂದ ಸ್ಮರಿಸುವುದು ಭಾರತೀಯರೆಲ್ಲರ ಕರ್ತವ್ಯವಾಗಬೇಕು ಸಂವಿಧಾನದ ಪೂರ್ವ ಪೀಠಿಕೆಯಲ್ಲಿ ಹೇಳಿರುವ ಎಲ್ಲ ಸಿದ್ಧಾಂತಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಎಲ್ಲರ ಬಾಳಿನಲ್ಲ ನೆಮ್ಮದಿ ತರುವುದು ಪ್ರತಿಯೊಬ್ಬ ಭಾರತೀಯರ ಚಿಂತನೆಯಾಗಬೇಕಾಗಿದೆ ಎಂದರು.
ತಹಶೀಲ್ದಾರ ರಮೇಶ ಅಳವಂಡಿಕರ್, ತಾಪಂ ಅಧ್ಯಕ್ಷೆ ಲಕ್ಷ್ಮೀ ದ್ಯಾಮನಗೌಡ್ರ, ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ, ಸ್ಥಾಯಿ ಸಮಿತಿ ಅದ್ಯಕ್ಷ ರುದ್ರಪ್ಪ ಮರಕಟ್, ಸದಸ್ಯರಾದ ಶರಣಪ್ಪ ಈಳಗೇರ, ರಾಮಣ್ಣ ಹೊಸಮನಿ, ಪಪಂ ಸದಸ್ಯರಾದ ಅಂದಯ್ಯ ಕಳ್ಳಿಮಠ, ವಸಂತ ಭಾವಿಮನಿ, ರೀಯಾಜ್ ಖಾಜಿ, ರೇವಣೆಪ್ಪ ಹಿರೇಕುರುಬರ, ಅಶೋಕ ಅರಕೇರಿ,ಕಳಕಪ್ಪ ತಳವಾರ, ಹನುಮಂತ ಭಜಂತ್ರಿ, ಕಲಾವತಿ ಮರದಡ್ಡಿ, ಬಸವ್ವ ಬಣಕಾರ, ಡಾ,ನಂದಿತಾ ದಾನರಡ್ಡಿ, ವಿಜಯಲಕ್ಷ್ಮೀ ಬೆಲೇರಿ, ಶಾಂತಾ ಮಾಟೂರು, ಶ್ರೀದೇವಿ ಗುರುವಿನ, ಮುಖಂಡರಾದ ಸಿ. ಎಚ್.ಪಾಟೀಲ್,ವೀರಣ್ಣ ಹುಬ್ಬಳ್ಳಿ, ಶಿವಶಂಕರಾವ್ ದೇಸಾಯಿ, ಈರಪ್ಪ ಕುಡಗುಂಟಿ, ಪಪಂ ಮುಖ್ಯಧಿಕಾರಿಗಳಾದ ನಾಗೇಶ,ಶರಣಪ್ಪ ವಟಗಲ್, ಶರಣಮ್ಮ ಕಾರನೂರು ಸೇರಿದಂತೆ ಅನೇಕ ಅಧಿಕಾರಿಗಳು, ಮುಖಂಡರು ಹಾಜರಿದ್ದರು.