ರ್ಮಲ್ಬೋರ್ನ್, ಡಿ 24 ನೆಟ್ಸ್‌ನಲ್ಲಿ
ಅಭ್ಯಾಸ ಮಾಡುವ ವೇಳೆ ಬೆರಳಿಗೆ ಚೆಂಡು ತಾಗಿದರೂ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ
ಆಸ್ಟ್ರೇಲಿಯಾ ತಂಡದ ಆರಂಭಿಕ ಡೇವಿಡ್ ವಾರ್ನರ್ ಲಭ್ಯರಿದ್ದಾರೆ.ಸೋಮವಾರ ಅಭ್ಯಾಸ ನಡೆಸುತ್ತಿದ್ದ
ವೇಳೆ ವಾರ್ನರ್ ಬ್ಯಾಟಿಂಗ್ ಮಾಡುವಾಗ ಹೆಬ್ಬೆರಳಿಗೆ ಚೆಂಡು ತಗುಲಿತ್ತು. ಇದರಿಂದಾಗಿ ಎರಡನೇ ಪಂದ್ಯಕ್ಕೆ
ವಾರ್ನರ್ ಬಗ್ಗೆ ಅನುಮಾನಗಳು ಎದ್ದಿದ್ದವು. ಆದರೆ, ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಮಂಗಳವಾರ
ವಾರ್ನರ್ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದ್ದಾರೆ ಎಂದು ಸ್ಪಷ್ಟತೆ ನೀಡಿದ್ದಾರೆ."ಚೆಂಡು
ತಗುಲಿಸಿಕೊಂಡು ಮತ್ತೆ ಅಂಗಳಕ್ಕೆ ಹೋಗಲಿದ್ದಾರೆ ಎಂಬ ಬಗ್ಗೆ ಯಾವುದೇ ಆತಂಕವಿಲ್ಲ. ಚೆಂಡು ತಗುಲಿದ್ದಾಗ
ಎರಡು ಸೆಕೆಂಡ್ ಚಿಂತೆಗೀಡಾಗಿದ್ದೆ. ಆದರೆ, ವಾರ್ನರ್ ವೈದ್ಯರನ್ನು ಭೇಟಿಯಾಗಿ ಮತ್ತೆ ಅಭ್ಯಾಸಕ್ಕೆ
ಹಿಂತಿರುಗಿದರು,'' ಎಂದು ಸುದ್ದಿಗಾರರಿಗೆ ಅವರು ತಿಳಿಸಿದ್ದಾರೆ."ಅವರು(ವಾರ್ನರ್) ಈ ಸಮಯದಲ್ಲಿ
ಎಷ್ಟು ಚೆನ್ನಾಗಿ ಆಡುತ್ತಿದ್ದಾರೆಂದು ನಮಗೆ ತಿಳಿದಿದೆ, ಎಲ್ಲಾ ಹುಡುಗರು ಟೆಸ್ಟ್ ಕ್ರಿಕೆಟ್ ಮತ್ತು
ಬಾಕ್ಸಿಂಗ್ ಡೇ ಕ್ರಿಕೆಟ್ ಆಡಲು ಎಷ್ಟು ಇಷ್ಟಪಡುತ್ತಾರೆಂದು ನಮಗೆ ತಿಳಿದಿದೆ ... ಆದ್ದರಿಂದ ವಾರ್ನರ್
ಕೂಡ ಪಂದ್ಯಕ್ಕೆ ಸಿದ್ಧರಿದ್ದಾರೆ," ಎಂದರು.ಜೇಮ್ಸ್
ಪ್ಯಾಟಿನ್ಸನ್ ಅವರು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿಲಿದ್ದಾರೆ. ಜೋಶ್
ಹೇಜಲ್‌ವುಡ್ ಗಾಯಗೊಂಡಿದ್ದರಿಂದ ಅವರ ಸ್ಥಾನಕ್ಕೆ ಇವರು ಆಯ್ಕೆಯಾಗಿದ್ದರು. ಅಂತಿಮ ೧೧ರಲ್ಲಿ ಕಾಣಿಸಿಕೊಳ್ಳಲಿದ್ದಾರೆಂದು
ಲ್ಯಾಂಗರ್ ಇದೇ ಸಮಯದಲ್ಲಿ ತಿಳಿಸಿದ್ದಾರೆ.