ದತ್ತಾಂಶ ವಿಶ್ಲೇಷಕರಿಗೆ ಮರು-ಕಲಿಕೆ ಅತ್ಯವಶ್ಯ: ಗುರು

ಬೆಳಗಾವಿ 24: ನಿರಂತರ ಬದಲಾಗುತ್ತಿರುವ ತಾಂತ್ರಿಕ ಯುಗದಲ್ಲಿ ಅಂಕಿ, ಸಂಖ್ಯಾ ನಿರ್ವಹಣೆ ಸವಾಲಾಗಿ ಪರಿಣಮಿಸಿದ್ದರಿಂದ ದತ್ತಾಂಶ ವಿಶ್ಲೇಷಕರಿಗೆ ಕಲಿಕೆ ಹಾಗೂ ಮರು-ಕಲಿಕೆ ಅತ್ಯವಶ್ಯವಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯ ಇಂಟರನಲ್ ಕ್ವಾಲಿಟಿ ಅಶುವರನ್ಸ್ ಸೆಲ್ ನಿದರ್ೆಶಕ ಡಾ. ಡಿ. ಎಸ್. ಗುರು ಹೇಳಿದರು.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕನರ್ಾಟಕ ಸಕರ್ಾರದ ವಿಜನ್ ಗ್ರುಫ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಇವರ ಸಹಯೋಗದಿಂದ ದಿ. 24ರಂದು ಜ್ಞಾನ ಸಂಗಮದಲ್ಲಿ ಏರ್ಪಡಿಸಲಾದ ನಾಲ್ಕು ದಿನಗಳ ಪ್ಯಾಕಲ್ಟಿ ಡೆವಲಫ್ಮೆಂಟ್ ಪ್ರೊಗ್ರಾಂ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗುರು ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿತಾವಿ ಕುಲಪತಿಗಳಾದ ಡಾ. ಕರಿಸಿದ್ದಪ್ಪ ಅವರು ಮಾತನಾಡಿ "ಸಂಪತ್ತು ಮತ್ತು ಜ್ಞಾನದಲ್ಲಿ ನಮ್ಮ ದೇಶ ಅತ್ಯಂತ ಶ್ರೀಮಂತವಾಗಿದ್ದು, ಇಂದಿನ ಜ್ಞಾನ ಯುಗದಲ್ಲಿ ಅಂಕಿ, ಸಂಖ್ಯಾ ವಿಶ್ಲೇಷಣೆ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಸದರಿ ಕ್ಷೇತ್ರದಲ್ಲಿರುವ ತಜ್ಞರು ಸಾಮಾನ್ಯ ಜನರೊಂದಿಗೆ ಸ್ಪಂದಿಸಬೇಕೆಂದು ಹೇಳಿದರು.

ವಿತಾವಿ ಪರೀಕ್ಷಾ ವಿಭಾಗದ ಕುಲಸಚಿವ ಡಾ. ಸತೀಶ ಅಣ್ಣಿಗೇರಿ ಮಾತನಾಡಿ ತಜ್ಞರು ದತ್ತಾಂಶಗಳನ್ನು ನಕಾರಾತ್ಮಕವಾಗಿ ಉಪಯೋಗಿಸಬೇಕೆಂದು ಕರೆ ನೀಡಿದರು. ಡಾ. ರಶ್ಮಿ ರಚ್ಚ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಆನಂದ ವಿ. ಶಿವಾಪುರ ಸ್ವಾಗತಿಸಿದರು. ಡಾ. ವಿವೇಕ ರೆಡ್ಡಿ ವಂದಿಸಿದರು. ವಿತಾವಿ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕರು ಹಾಗೂ ವಿವಿಧ ತಾಂತ್ರಿಕ ಮಹಾವಿದ್ಯಾಲಯಗಳ ಪ್ರಾಧ್ಯಾಪಕರು ಸಮಾರಂಭದಲ್ಲಿ ಭಾಗವಹಿಸಿದ್ದರು.