ಲೋಕದರ್ಶನ ವರದಿ
ತಾಳಿಕೋಟೆ 22:ದಲಿತರು ಹಾಗೂ ಮುಸ್ಲಿಮ್ರು ಈ ಎರಡೂ ಸಮೂದಾಯದವರೂ ಅನೇಕ ತೊಂದರೆಗಳನ್ನು ಅನುಭವಿಸುತ್ತಾ ಸಾಗಿಬಂದಿದ್ದು ಇಂತಹ ಸಮಸ್ಯಗಳಿಗೆ ತೆರೆ ಎಳೆಯುವ ಕಾರ್ಯ ನಡೆಯದೇ ಇನಷ್ಟು ಕೆಳಮಟ್ಟಕ್ಕೊತ್ತುವ ಕಾರ್ಯ ನಡೆಯುತ್ತಲಿದೆ ಎಂದು ಬೆಂಗಳೂರಿನ ಪ್ರಗತಿಪರ ಚಿಂತಕರಾದ ಶ್ರೀಮತಿ ನಜ್ಮಾ ನಜೀರ ಚಿಕ್ಕನೆರಳೆ ಅವರು ನುಡಿದರು.
ಮಂಗಳವಾರರಂದು ಸ್ಥಳೀಯ ಶಾದಿ ಮಹಲ್ನಲ್ಲಿ ನಡೆದ ದಲಿತ ಮತ್ತು ಮುಸ್ಲಿಮ್ ಐಕ್ಯತಾ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಅನೇಕ ತೊಂದರೆಗಳನ್ನು ಈ ಹಿಂದಿನಿಂದಲೂ ಮುಸ್ಲಿಮ್ ಹಾಗೂ ದಲಿತ ಸಮೂದಾಯಗಳು ಅನುಭವಿಸುತ್ತಾ ಸಾಗಿಬಂದಿವೆ ಇಂತಹ ಕಾರ್ಯಕ್ಕೆ ಯಾವಗಲೂ ಮೇಲ್ಮಟ್ಟಕ್ಕೆತ್ತುವ ಕಾರ್ಯ ಈ ನಮ್ಮ ಜನಾಂಗದವರ ಕುರಿತು ನಡೆಯುತ್ತಿಲ್ಲವೆಂದರು. ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ರಚಿಸಿದ ಏನೆಂಬುದನ್ನು ಅಥರ್ೈಸಿಕೊಳ್ಳಲಾರದೇ ನಡೆಯುತ್ತಿರುವದು ಮುಂದುವರೆದಿದೆ ಎಂದು ರೀಜರ್ವೇಷನ್ದಲ್ಲಿ ಮುಸ್ಲಿಂ ಸಮೂದಾಯಕ್ಕೆ ಹಾಗೂ ದಲಿತ ಸಮೂದಾಯಕ್ಕೆ ಯಾವ ತರಹದ ದೊರೆಯಬೇಕಾದ ಸೌಲಭ್ಯಗಳು ದೊರೆಯುತ್ತಿಲ್ಲಾವೆಂದು ಎಲ್ಲ ಸಮೂದಾಯದವರ ರೀಜರ್ವೇಶನ್ದಲ್ಲಿಯ ಅಂಕಿ ಅಂಶಗಳ ಕುರಿತು ಪ್ರಸ್ಥಾಪಿಸಿದರು. ಮುಸಲ್ಮಾನರಿಗೆ ಕನರ್ಾಟಕದಲ್ಲಿ ಲೀಡರ್ ಶಿಫ್ ಅನ್ನುವಂತಹದ್ದನ್ನು ನೀಡದೇ ಇರುವದು ಕಂಡುಬರುತ್ತಿದೆ ಚುನಾವಣೆ ಸಮಯದಲ್ಲಿ ನೀಡಬೇಕಾದ ಸ್ಥಾನ ಮಾನ ಮುಸ್ಲಿಮ್ರಿಗೆ ದೊರೆಯುತ್ತಿಲ್ಲಾವೆಂದು ವಿಷಾದಿಸಿದರು. 28 ಕ್ಷೇತ್ರಗಳಲ್ಲಿ ಮುಸ್ಲಿಮ್ರಿಗೆ ಸ್ಪದರ್ಿಸುವ ಹಕ್ಕನ್ನು ಕೊಟ್ಟಿಲ್ಲಾವೆಂದು ಹೇಳಿದ ಅವರು ಜೋತಿಬಾ ಪುಲೆ, ಸಾವಿತ್ರಿಬಾಯಿ ಅವರ ತತ್ವ ಸಿದ್ದಾಂತಗಳನ್ನು ಅರೀತುಕೊಳ್ಳಬೇಕಾಗಿದೆ ಎಂದರು. ದಲಿತರು ಹಾಗೂ ಮುಸ್ಲಿಮ್ರು ಒಂದಾಗಿ ನಮ್ಮ ಶಕ್ತಿಯನ್ನು ಪ್ರದರ್ಶನ ಮಾಡಬೇಕಾಗಿದೆ ಎಂದ ಅವರು ಎಲ್ಲಯವರೆಗೆ ನಾವು ಈ ಎರಡೂ ಜನಾಂಗದವರು ಒಗ್ಗಟ್ಟಾಗುವದಿಲ್ಲವೋ ಅಲ್ಲಿಯ ವರೆಗೆ ನಾವು ಮೇಲ್ಮಟ್ಟಕ್ಕೇರಲು ಸಾಧ್ಯವಿಲ್ಲವೆಂದರು.
ಸುಭಾಷ ಶೀಲವಂತ ಮಾತನಾಡಿ ಬುದ್ದ ಬಸವ ಅಂಬೇಡ್ಕರ್ ಜ್ಯೋತಿಬಾ ಪುಲೆ ಅಂತವರು ಹಾಕಿಕೊಟ್ಟ ಮಾರ್ಗವನ್ನು ನಾವೇಲ್ಲರೂ ಅನುಕರಣೆ ಮಾಡಬೇಕಾಗಿದೆ ಇಂದಿನ ದಿನಮಾನದಲ್ಲಿಯ ಸ್ಥಿತಿಗತಿಯನ್ನು ನೋಡಿದರೆ ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಇದೆಯೋ ಇಲ್ಲವೋ ಎನಿಸುತ್ತದೆ ಎಂದರು. ಶಿವಾಜಿ ಮಹಾರಾಜ ಹಾಗೂ ಟೀಪು ಸುಲ್ತಾನರಂತಹ ಮಹಾನ್ ಪುರುಷರು ಆಗಿ ಹೋಗಿದ್ದಾರೆ ಅವರೆಲ್ಲರೂ ದೇಶದ ಇತಿಹಾಸ ಕಾಪಾಡಿದವರಾಗಿದ್ದಾರೆಂದರು. 12 ನೇ 13 ನೇ ಶತಮಾನದಲ್ಲಿ ಸೋಪಿ ಸಂತರು ಭಾರತದಲ್ಲಿದ್ದವರಾಗಿದ್ದಾರೆ ಅವರು ಸಮತಾ, ಸ್ವತಂತ್ರತಾ, ಬಂದುತಾ, ನ್ಯಾಯ ಈ ಕುರಿತು ವಿಚಾರ ಮಾಡಿದವರಾಗಿದ್ದಾರೆಂದರು. ಎಸ್.ಸಿ.ಎಸ್.ಟಿ., ಓಬಿಸಿ ಇವರೂ ಸಹ ದೇಶದ ಮೂಲ ನಿವಾಸಿಗಳಾಗಿದ್ದಾರೆ ಯಾವುದೇ ದಂಗೆಗಳು ನಡೆದರೆ ಹಿಂದೂ-ಮುಸಲ್ಮಾನರೆಂಬ ಆರೋಪ ನೀಡಲಾಗುತ್ತದೆ ಇಂತಹ ವಿಚಾರಗಳ ಈ ವ್ಯವಸ್ಥೆ ಏನಿತ್ತು ಏನಾಗಿದೆ ಎಂಬುದನ್ನು ವಿಚಾರ ಮಾಡದೇ ಮಾದ್ಯಮಗಳು ವರಧಿ ಮಾಡುತ್ತವೆ ಎಂದರು.
ಉಪನ್ಯಾಸಕರಾಗಿ ಆಗಮಿಸಿದ ಬೆಂಗಳೂರ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಎಂ.ಕೆ.ಮ್ಹೇತ್ರಿ ಅವರು ಮಾತನಾಡಿ ಸಂವಿದಾನವೆಂಬುದನ್ನು ಸಂರಕ್ಷೀಸುವ ಕಾರ್ಯ ನಮ್ಮದಾಗಬೇಕು ನಾವು ಹೇಗಿರಬೇಕು ಎಂಬುದರ ಬಗ್ಗೆ ಉದರ್ುದಲ್ಲಿಯ ಶಾಹೀರ ಮೂಲಕ ವಿವರಿಸಿದ ಅವರು ಮುಸ್ಲಿಮ್ರನ್ನು ಗುಲಾಮರಂತೆ ನಡೆಸಿಕೊಂಡು ಬರಲಾಗುತ್ತಿದೆ ಯಾವ ಮುಸ್ಲಿಂರಿಗೂ ಲೀಡರ್ಶಿಫ್ ನೀಡಿಲ್ಲಾ ದಲಿತರು-ಮುಸ್ಲಿಮ್ರು ಹೀನಾಯ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ನಾಗಪೂರದಲ್ಲಿ ನಡೆದ ಮಹಿಳೆಯೊಬ್ಬಳ ಬೆತ್ತಲೆ ಪ್ರಕರ್ಣ ಕುರಿತು ಹಾಗೂ ಅನೇಕ ಅವಮಾನ ಪ್ರಕರ್ಣಗಳು ನಡೆಯುತ್ತಿರುವ ಕುರಿತು ವಿವರಿಸಿದ ನ್ಯಾಯವಾದಿ ಮ್ಹೇತ್ರಿ ಅವರು ಇಂತಹ ವ್ಯವಸ್ಥೆಯನ್ನು ನಾವು ಭಲವಾಗಿ ಖಂಡಿಸುತ್ತಾ ಸಾಗಿಬಂದಿದ್ದೇವೆ ಎಲ್ಲಿಯವರೆಗೆ ನಾವು ಕೀಳರಮೆಯನ್ನು ತೊರೆದು ದಲಿತರು ಮತ್ತು ಮುಸ್ಲಿಮ್ರು ಒಂದಾಗುವದಿಲ್ಲವೋ ಅಲ್ಲಿಯ ವರೆಗೆ ನಮ್ಮ ವ್ಯಕ್ತಿತ್ವ ನಮ್ಮ ವಿಚಾರಗಳು ಮೇಲ್ಮಟ್ಟಕ್ಕೆ ಬರುವದಿಲ್ಲಾವೆಂದರು.
ಅಧ್ಯಕ್ಷತೆ ವಹಿಸಿದ ಈದ್ಗಾ ಶಾದಿ ಮಹಲ್ ಅಧ್ಯಕ್ಷರಾದ ಖಾಜಾ ಹುಸೇನ ಡೋಣಿ ಮಾತನಾಡಿ ದಲಿತ-ಮುಸ್ಲಿಮ್ ಒಂದಾಗುವ ಕಾರ್ಯ ನಮ್ಮದಾಗಬೇಕಿದೆ ಅವರವರ ತೊಂದರೆಗನುಗುಣವಾಗಿ ಸಹಾಯ ಹಸ್ತ ಕಲ್ಪಿಸುತ್ತಾ ಸಾಗಿಬಂದರೆ ಒಂದಾಗಲು ಸಾಧ್ಯವೆಂದರು. ಬೆಂಗಳೂರ ಡಿಎಂಎಸ್ ರಾಜ್ಯಾಧ್ಯಕ್ಷರಾದ ಶಿವರಾಜ ದೇಶಮುಖ ದಲಿತರು ಹಾಗೂ ಮುಸ್ಲಿಮ್ರು ಒಂದುಗೂಡುವ ಕುರಿತು ಚಿಂತನೆ ನಡೆಸುವ ಅಗತ್ಯವಿದೆ ಎಂದರು. ಕಾರ್ಯಕ್ರಮಕ್ಕೆ ಮೊದಲು ತುಮಕೂರಿನ ಸಿದ್ದಗಂಗಾ ಮಠದ ಶ್ರೀಗಳ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಗೈದು ಎರಡು ನಿಮಿಷ ಮೌನ ಆಚರಿಸುವದರೊಂದಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮವನ್ನು ಮುಸ್ಲಿಮ್ ಧರ್ಮಗುರುಗಳಾದ ಸೈಯದ ಶಕೀಲ್ಅಹ್ಮದ ಖಾಜಿ ಅವರು ಟೀಪು ಸುಲ್ತಾನ ಅವರ ಭಾವಚಿತ್ರಕ್ಕೆ ಹಾಗೂ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಕಟ್ಟಿಮನಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಹಾರ ಹಾಕಿ ಗೌರವಿಸುವ ಮೂಲಕ ಉದ್ಘಾಟಿಸಲಾಯಿತು.ಮೇರು ಬ್ಯಾಗವಾಟ ಪ್ರಾಸ್ಥಾವಿಕ ಮಾತನಾಡಿದರು.
ಈ ಸಮಯದಲ್ಲಿ ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಜಾಕ ಮನಗೂಳಿ, ಮುಸ್ಲಿ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ಆದಮ್ಮ ಅತ್ತಾರ, ರಾಮಣ್ಣ ಕಟ್ಟಿಮನಿ, ದ.ಸೇ.ತಾಲೂಕಾಧ್ಯಕ್ಷ ಬಸವರಾಜ ಗುಂಡಕನಾಳ, ಜಿಲ್ಲಾ ವಿದ್ಯಾಥರ್ಿ ಒಕ್ಕೂಟದ ಸಂಚಾಲಕ ನಾಗೇಶ ಕಟ್ಟಿಮನಿ, ಸಿದ್ದು ಬಾರಿಗಿಡದ, ಮೂಹಿಬೂಬ ಚೋರಗಸ್ತಿ, ಗೋಪಾಲ ವಿಜಾಪೂರ, ಮೋದಿನಸಾ ನಗಾಚರ್ಿ, ಮೊದಲಾದವರು ಉಪಸ್ಥಿತರಿದ್ದರು. ಮೈಹಿಬೂಬ ಸಿಂದಗಿಕರ ನಿರೂಪಿಸಿ ವಂದಿಸಿದರು.