ಮುಂಡಗೋಡದಿಂದ ದಲೈಲಾಮಾ ನಿರ್ಗಮನ
ಮುಂಡಗೋಡ: ಟಿಬೆಟನ್ ಧರ್ಮಗುರು ನೊಬೆಲ್ ಶಾಂತಿ ಪ್ರಶಸ್ತಿ ವಿಜೇಯ ದಲೈಲಾಮಾ ಅವರು ಇಂದು ಬೆಳಿಗ್ಗೆ 7-30 ಗಂಟೆ ಸುಮಾರಿಗೆ ಮುಂಡಗೋಡ ಟಿಬೆಟಿಯನ್ ಕಾಲೋನಿಯಿಂದ ಹುಬ್ಬಳ್ಳಿ ಮಾರ್ಗವಾಗಿ ದೆಹಲಿಯ ಬೋಧಗಯಾಕ್ಕೆ ತೆರಳಿದರು.
ಹನ್ನೇರಡು ದಿನಗಳಿಂದ ಟಿಬೆಟಿಕಾಲೋನಿಗೆ ಬಂದುಳಿದ ದಲೈಲಾಮಾ ಅವರು ದ್ರೆಪುಂಗ್ ಗೊಮಾಂಗ್ ಚಚರ್ಾ ಸಭಾಂಗಣವನ್ನು ಉದ್ಘಾಟಿಸಿದರು. ಪದ್ಮಸಂಭವ ಮಂದಿರದ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು. ಆರ್ಯದೇವನ 400 ಮಹಾಕಾವ್ಯಗಳ ವಿಚಾರ ಸಂಕಿರಣದಲ್ಲಿ, ದೀಘರ್ಾಯುಷ್ಯ ಪೂಜಾ ಕಾರ್ಯಕ್ರಮದಲ್ಲಿ, ಬಿಕ್ಕುಗಳ ಚಚರ್ಾ ಶಿಕ್ಷಣ ಪರೀಕ್ಷೆಯಲ್ಲಿ, ಟಿಬೆಟನ್ ಬೌದ್ಧಗುರು ಜೆತ್ಸಾಂಗ ಖಪಾ ಅವರ ಜೀವನ ಮತ್ತು ಪರಂಪರೆ ಕುರಿತು ನಡೆದ ಸಮ್ಮೇಳನದಲ್ಲಿ, ಜೆತ್ಸಾಂಗ ಖಪಾ ಅವರ 600 ನೇ ಪರಿನಿವರ್ಾಣ ವಾಷರ್ಿಕೋತ್ಸವ ಸಮಾರಂಭದಲ್ಲಿ ದಲೈಲಾಮಾ ಅವರು ಪಾಲ್ಗೊಂಡಿದ್ದರು.
ಹಿರಿಯ ಬೌದ್ಧ ಸನ್ಯಾಸಿಗಳು, ಟಿಬೆಟಿಕಾಲೋನಿಯ ಎಲ್ಲಾ ಕ್ಯಾಂಪಿನ ಮುಖ್ಯಸ್ಥರು, ಬಿಕ್ಕುಗಳು, ದಲೈಲಾಮಾರ ಮುಂಡಗೋಡ ಪ್ರತಿನಿಧಿ ಲಾಗ್ಪಾ ತ್ಸಿರಿಂಗ್ ಅವರು ದಲೈಲಾಮಾ ಅವರನ್ನು ಸಾಂಪ್ರದಾಯಿಕವಾಗಿ ಬೀಳ್ಕೊಟ್ಟರು.