ಲೋಕದರ್ಶನ ವರದಿ
ಕುಮಟಾ 28: ಕರ್ತವ್ಯದ ನಿಮಿತ್ತ ಮಂಗಳವಾರ ಡಿಡಿಎಲ್ಆರ್ ಕಚೇರಿಗೆ ತೆರಳಿದ್ದ ಕಾರವಾರ ವರದಿಗಾರ ಉದಯ ಬಗರ್ಿ ಅವರೊಂದಿಗೆ ಅನುಚಿತವಾಗಿ ವತರ್ಿಸಿದ ಡಿಡಿಎಲ್ಆರ್ ವೇಣುಗೋಪಾಲ್ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕನರ್ಾಟಕ ಜರ್ನಲಿಸ್ಟ ಯುನಿಯನ್ನ ಕುಮಟಾ ಘಟಕವು ಬುಧವಾರ ಉಪವಿಭಾಗಾಧಿಕಾರಿ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸುದ್ದಿ ಮತ್ತು ಮಾಹಿತಿಗಾಗಿ ಡಿಡಿಎಲ್ಆರ್ ಕಚೇರಿಗೆ ತೆರಳಿದ್ದ ವರದಿಗಾರ ಉದಯ ನಾಯ್ಕ ಬಗರ್ಿ ಅವರನ್ನು ನಿಂದಿಸಿದ ಡಿಡಿಎಲ್ಆರ್ ವೇಣುಗೋಪಾಲ್ ಅವರ ಅನುಚಿತ ವರ್ತನೆ ಖಂಡನೀಯ. ಮಾಧ್ಯವದ ಪ್ರತಿನಿಧಿ ಕಚೇರಿಯೊಳಕ್ಕೆ ಪ್ರವೇಶಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿಡಿಎಲ್ಆರ್ ವೇಣುಗೋಪಾಲ್ ಅವರು ಗೆಟ್ಔಟ್, ರ್ಯಾಸ್ಕಲ್ ಪದಗಳನ್ನು ಬಳಸಿರುವುದಲ್ಲದೆ ಮಾಧ್ಯಮಗಳನ್ನು ನಿಂದಿಸಿದ್ದಾರೆ.
ವೇಣುಗೋಪಾಲ ಅವರು ಕಚೇರಿಗೆ 15 ದಿನಗಳಿಗೆ ಒಮ್ಮೆ ಬಂದು, ಹಿಂದಿನ ಅನುಪಸ್ಥಿತಿಯ ದಿನಗಳನ್ನು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡುತ್ತಿರುವ ಆರೋಪ ವಿದೆ. ಅಲ್ಲದೆ ಹಿರಿಯ ಐಎಎಸ್ ಅಧಿಕಾರಿ ಅವರ ಮೇಲೆ ದೌರ್ಜನ್ಯ ನಡೆಸಿದ ಆರೋಪ ಸಹ ವಿದೆ. ಮಾಧ್ಯಮ ಪ್ರತಿನಿಧಿಯ ವಿರುದ್ಧ ದೌರ್ಜನ್ಯ ವೆಸಗಿದ ವೇಣುಗೋಪಾಲ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿಯನ್ನು ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್-2 ತಹಸೀಲ್ದಾರ್ ಬಿ ಎಚ್ ಗುನಗಾ ಅವರು ಮನವಿ
ಸ್ವೀಕರಿಸಿದರು.
ಕನರ್ಾಟಕ ಜರ್ನಲಿಸ್ಟ ಯುನಿಯನ್ ಕುಮಟಾ ಘಟಕದ ಅಧ್ಯಕ್ಷ ಅನ್ಸಾರ್ ಶೇಖ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಭಟ್, ಪತ್ರಕರ್ತರಾದ ಎಂ ಜಿ ನಾಯ್ಕ, ಶಂಕರ ಶಮರ್ಾ, ರಾಘವೇಂದ್ರ ದಿವಾಕರ್, ಚರಣರಾಜ್ ನಾಯ್ಕ, ಪ್ರವೀಣ ಹೆಗಡೆ, ನಾಗರಾಜ ಪಟಗಾರ, ಜಿ ಡಿ ಶಾನಭಾಗ, ಅಮರನಾಥ ಭಟ್, ದಿನೇಶ ಗಾಂವ್ಕರ್, ಮಯೂರ ಪಟಗಾರ, ವಿನೋದ ಹರಿಕಂತ್ರ, ಅನಿಲ ಆಚಾರಿ, ಸಂತೋಷ ನಾಯ್ಕ, ನಟರಾಜ ಮುಕ್ರಿ, ವಿಶ್ವನಾಥ ನಾಯ್ಕ, ಯೋಗೇಶ ಮಡಿವಾಳ ಹಾಗೂ ಇತರರು ಉಪಸ್ಥಿತರಿದ್ದರು