ಶಿಗ್ಗಾವಿ07 ಃ ಹಿಂದೂ-ಮುಸ್ಲಿಂ ಕೋಮು ಸೌಹಾರ್ಧ ಮತ್ತು ಶಾಂತಿ ಸಂದೇಶ ಸಾರಲು ಬೆಂಗಳೂರಿನಿಂದ ಮೆಕ್ಕಾ-ಮದೀನಾಗೆ ಸೈಕಲ್ ಯಾತ್ರೆ ಕೈಗೊಂಡ ಬೆಂಗಳೂರಿನ ಮೊಹಮ್ಮದ್ ಹಬೀಬ್ ಖಾನ್ ಅವರನ್ನು ಶಿಗ್ಗಾವಿ ಪಟ್ಟಣದ ಹಜರತ್ ಮೌಲಾನಾ ಮಹಮ್ಮದ್ ತಖ್ಯದೀನ್ ಜಮಾತ್ ನವರು ಸನ್ಮಾನಿಸಿ ಶುಭ ಕೋರಿದರು.
ಒಟ್ಟು 2836 ಕಿಮೀ ದೂರ ಚಲಿಸಲಿರುವ ಹಭೀಬ್ ಅವರು ಹಿಂದೂ ಮುಸ್ಲಿಂ ಬಾಂಧವರ ಶಾಂತಿ ಸೌಹಾರ್ದತೆಗೆ ಈ ಯಾತ್ರೆ ಕೈಗೊಂಡಿದ್ದಾರೆ, ಇವರ ಈ ಯಾತ್ರೆಗೆ ಹಿಂದೂ ಬಾಂಧವರಿಂದಲೂ ಸ್ವಾಗತ ಮತ್ತು ಶುಭವನ್ನು ಕೋರಲಾಗುತ್ತಿದೆ.
ಈ ಸಂದರ್ಭದಲ್ಲಿ ಸಾಧಿಕ್ ಮಲ್ಲೂರ, ಅದ್ಬುಲ್ ಮಜೀದ್ ಅದ್ದುಮಿಯಾನವರ, ಸತ್ತಾರ ಸೌದಾಗರ್, ಅನೀಸ್ ಫಿರಾಂಖಾನವರ, ಶಫಿ ನಧಾಫ್, ಮೈನು ಕೋಲಕಾರ ಸೇರಿದಂತೆ ಮುಸ್ಲಿಂ ಬಾಂಧವರು ಇದ್ದರು.