ಕಮ್ಮಿನ್ಸ್ ಬದಲಿಗೆ ಕೀಮೊ ಪಾಲ್ ಗೆ ವೆಸ್ಟ್ ಇಂಡೀಸ್ ತಂಡದಲ್ಲಿ ಅವಕಾಶ

ನವದೆಹಲಿ,  ಭಾರತ ವಿರುದ್ಧ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ವೆಸ್ಟ್ ಇಂಡೀಸ್ ಕ್ರಿಕೆಟ್ ಸಂಸ್ಥೆ 13 ಜನರ ತಂಡವನ್ನು ಪ್ರಕಟಿಸಿದ್ದು, ಸ್ನಾಯು ಸೆಳೆತದಿಂದ ಮೊದಲ ಟೆಸ್ಟ್ ನಿಂದ ಹೊರಗಿದ್ದ ಆಲ್ ರೌಂಡರ್ ಕೀಮೊ ಪಾಲ್ ಅವರಿಗೆ ಅವಕಾಶ ನೀಡಲಾಗಿದೆ.  

ವೆಸ್ಟ್ ಇಂಡೀಸ್ ನಾರ್ಥ ಸೌಂಡ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತದ ವಿರುದ್ಧ 318 ರನ್ ಗಳಿಂದ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಮಿಗುಯೆಲ್ಲಾ ಕಮ್ಮಿನ್ಸ್ ವಿಕೆಟ್ ಪಡೆಯುವಲ್ಲಿ ವಿಫಲರಾದರು. ಇವರು 20 ಓವರ್ ಬೌಲಿಂಗ್ ನಡೆಸಿದ್ದು, 69 ರನ್ ನೀಡಿದ್ದಾರೆ.  

ಜಮೈಕಾ ಟೆಸ್ಟ್ ಗೆ ಪ್ರಕಟಗೊಂಡ ತಂಡದಲ್ಲಿ ಕೀಮೊ ಅವರನ್ನು ಬಿಟ್ಟರೆ ಯಾವುದೇ ಬದಲಾವಣೆ ಮಾಡಲಾಗಿಲ್ಲ.  

ವೆಸ್ಟ್ ಇಂಡೀಸ್ ತಂಡ: ಜೇಸನ್ ಹೋಲ್ಡರ್ (ನಾಯಕ), ಕ್ರೇಗ್ ಬ್ರಾಥ್ವೈಟ್, ಡ್ಯಾರೆನ್ ಬ್ರಾವೋ, ಶಮರ್ ಬ್ರೂಕ್ಸ್, ಜಾನ್ ಕ್ಯಾಂಪ್ಬೆಲ್, ರೋಸ್ಟನ್ ಚೇಸ್, ರಹಕೀಮ್ ಕಾನರ್್ವಾಲ್, ಜಹಮರ್ ಹ್ಯಾಮಿಲ್ಟನ್, ಶಿಮ್ರಾನ್ ಹೆಟ್ಮಿಯರ್, ಶೈ ಹೋಪ್, ಶಾನನ್ ಗ್ಯಾಬ್ರಿಯಲ್, ಕೀಮೊ ಪಾಲ್, ಕೆಮರ್ ರೋಚ್.