ಲೋಕದರ್ಶನ ವರದಿ
ಯಲಬುರ್ಗಾ : ಮನಷ್ಯನ ಜೀವಾಳವೆ ಸಂಸ್ಕಾರ, ಮಕ್ಕಳು ಸಂಸ್ಕೃತಿ ಸಂಸ್ಕಾರವಂತರಾಗಬೇಕು ಎಂದು ಕಲ್ಲೂರ ಗ್ರಾಮದಲ್ಲಿ ನ. 16ರಂದು ಶನಿವಾರ ರಾತ್ರಿ 8.30ಕ್ಕೆ ವಿರುಪಾಕ್ಷೇಶ್ವರಮಠದಲ್ಲಿ ಶ್ರೀ ಬೀರಲಿಂಗೇಶ್ವರ ಕುರುಬರ ಸಂಘ ಕಲ್ಲೂರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರುಗಳ ಸಹಕಾರದಲ್ಲಿ ಜರುಗಿದ ಸಾಂಸ್ಕೃತಿಕ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಕಲ್ಲೂರಿನ ವೀರಯ್ಯ ಅಜ್ಜನವರು ಹಿರೇಮಠ ಅವರು ಸಾನಿಧ್ಯವಹಿಸಿ ಮಾತನಾಡಿದರು.
ಸಂಗೀತ ನಮ್ಮೇಲ್ಲರ ಜೀವನ ಪರಿವರ್ತನೆ ಮಾಡುತ್ತದೆ ಅಲ್ಲದೆ ಆಧ್ಯಾತ್ಮ, ಜ್ಞಾನ ಸಿಗುತ್ತದೆ ಎಂದರು. ಸಂಸಾರದ ಸಾಗರದಲ್ಲಿ ಸಿಲುಕಿಕೊಂಡು ಹಲವಾರು ಚಿಂತೆಗಳಿಗೆ ಒಳಗಾಗಿ ನೆಮ್ಮದಿಯ ಬದುಕನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಬೇಕಾದರೆ ನಮ್ಮ ಸುಂದರ ಆನಂದಮಯ ಬದುಕಿಗಾಗಿ ಸುಗಮ ಸಂಗೀತ ಕಾರ್ಯಕ್ರಮವನ್ನು ಆಲಿಸಬೇಕು ಎಂದು ಸಾಹಿತಿ ಶರಣಬಸಪ್ಪ ಕೆ. ದಾನಕೈ ಅವರು ಜ್ಯೋತಿಬೆಳಗಿಸಿದ ನಂತರ ಮಾತನಾಡಿದರು.
ಕಲ್ಲೂರಿನ ವೆ.ಮೂ. ರಾಚಯ್ಯ ಸ್ವಾಮಿ.ಕೆ.ಗುರುಮಠ ಅವರು ಸಾಂಸ್ಕೃತಿಕ ಸುಗಮ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದರು. ಸಹಕಲಾವಿದರಾದ ಉಮಾಪತಿ ಶಾಸ್ತ್ರೀ ಹಾರ್ಮೋನಿಯಂ ಸಾಥ್ ನಿಡಿದರು, ಕಲ್ಯಾಣ ಕುಮಾರ ತಬಲಾ ಸಾಥ್ ನೀಡಿದರು.
ಗ್ರಾ.ಪಂ.ಅಧ್ಯಕ್ಷ ಈರಪ್ಪ ಗುಡಸಲದ ಅಧ್ಯಕ್ಷೆತೆ ವಹಿಸಿ ಮಾತನಾಡಿ ಸಂಗೀತವನ್ನು ಕೇಳಿದಾಗ ನಾವು ಆರೋಗ್ಯದಿಂದ ಇರುವದಕ್ಕೆ ಸಾಧ್ಯವಾಗುತ್ತದೆ ಇಂತಹ ಕಾರ್ಯಕ್ರಮಕ್ಕೆ ತಾವುಗಳು ಭಾಗವಹಿಸುವದು ಮುಖ್ಯವಾದದು ಎಂದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಕಲ್ಲಪ್ಪ ಕೊಟೆಪ್ಪನವರ ಮಾತನಾಡಿರು. ಗ್ರಾ.ಪಂ.ಸದಸ್ಯರಾದ ಶಾರದ ಕಟಗಿಹಳ್ಳಿ, ಕಲ್ಲಪ್ಪ ತೋಂಡಿಹಾಳ, ಗ್ರಾ.ಪಂ.ಮಾಜಿ ಅಧ್ಯಕ್ಷ ಯಲ್ಲಪ್ಪ ಅಗಸಿಮನಿ, ಮುಖಂಡರಾದ ವರದಯ್ಯ ಹೊಸಮನಿ, ಶಿವಪ್ಪ ಸೊಂಪೂರ ಇತರರು ಇದ್ದರು. ಮಂಜುನಾಥ ಕುರಿ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಾಮದ ಗುರುಹಿರಿಯರು ಭಾಗವಹಿಸಿದ್ದರು.