ಲೋಕದರ್ಶನ ವರದಿ
ಮಾಂಜರಿ ದಿ 25: ನಸಿಶಿ ಹೋಗುತ್ತಿರುವ ಭಾರತೀಯ ಪರಂಪರೆ, ಸಂಸ್ಕೃತಿ, ಸಂತ್ಸಂಗವನ್ನು ಪುನರಜೀವಿಸುವು ಉದ್ದೇಶದಿಂದ ನವ್ಹಂಬರ 30 ರಿಂದ ಡಿಸೆಂಬರ್ 2 ವರೆಗೆ ಭಾರತೀಯ ಸಂಸ್ಕೃತಿ ಸಂತ್ಸಂಗ ಕಾರ್ಯಕ್ರಮವನ್ನು ಇಂಗಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಭಕ್ತಿಯೋಗಾಶ್ರಮದ ತಾರದಾಳದ ಮಹೇಶಾನಂದ ಸ್ವಾಮಿಜಿ ತಿಳಿಸಿದರು.
ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಇಂದು ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಾಜದಲ್ಲಿ ಒಗ್ಗಟು ಹಳೆಯ ಪರಂಪರೆಯನ್ನು ಕಾಪಾಡುವುದು. ಬೇರೆ ದಾರಿಯಲ್ಲಿ ಹೋಗುತ್ತಿರುವ ಸಮಾಜವನ್ನು ಸರಿದಾರಿಯಲ್ಲಿ ಒಯ್ಯವುದು. ಎಷ್ಟೋ ಯುವಕರು ದುಶ್ಚಟಕ್ಕೆ ಬಲಿಯಾಗಿ ದೇಹ ಮನೆಯನ್ನು ಹಾಳು ಮಾಡಿಕೋಳ್ಳುತ್ತಿದ್ದಾರೆ.
ಕೆಟ್ಟಂತಹ ಭೂಮಿಯನ್ನು ಆರೋಗ್ಯಕರವಾಗಿ ಕಾಪಾಡಿಕೋಳ್ಳುವುದು ನಿಟ್ಟಿನಲ್ಲಿ ಸಾವಯವ ಕೃಷಿಯ ಕುರಿತು ಉಪನ್ಯಾಸ ಕಾರ್ಯಕ್ರಮ ಮುತ್ತೈದೆಯರಿಗೆ ಅರಿಶಿನ, ಕುಂಕುಮ ಹಾಗೂ ಉಡಿತುಂಬುವುದು, ಗಂಗಪೂಜೆ, ಭವ್ಯವಕುಂಭೋತ್ಸವ, ದೇವರಿಗೆ ಕುಂಭಾಷೀಕ, ಮಕ್ಕಳಿಂದ ತಂದೆ ತಾಯಿಗಳಿಗೆ ಪಾದಪೂಜೆ, ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರದ ಉಪನ್ಯಾಸ ಕಾರ್ಯಕ್ರಮ, ಗೋಪಾಲನೆ, ಸೇರಿದಂತೆ ಯುವಕರಿಗೆ ಉತ್ತಮ ದೇಹವನ್ನು ಕಾಪಾಡುವು ನಿಟ್ಟಿನಲ್ಲಿ ಕಬ್ಬಡಿ ಖೋ ಖೋ ಕಾರ್ಯಕ್ರಮ ಸೇರಿದಂತೆ ಭಾರತೀಯ ಸಂಸ್ಕೃತಿಯ ಹೋಲವು ಅಧ್ಯಾತ್ಮಿಕ ಕಾರ್ಯಕ್ರಮಗಳು ಜರಗುಲಿವೆ ಹಾಗೂ ಮಹಾಜಪಯೊಗ ಗ್ರಾಮದೇವರಿಗೆ ಮಹಾ ಅಭಿಷೇಕ್ ಅದಲ್ಲದೇ ಡಿ2 ರಂದು ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯವನ್ನು ಜ್ಷಾನಯೋಗಿ ರಾಷ್ಟ್ರ ಸಂತ ಸಿದ್ದೇಶ್ವರ ಮಹಾಸ್ವಾಮಿಜಿಯವರು ಪಾಲ್ಗೊಳಿದ್ದಾರೆ. ಅದರ ಜೋತೆಗೆ ಇನ್ನಿತರ ಮಠಾಧಿಶರರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಸಂಜಯ ಕುಡಚೆ, ರಮೇಶ ಮುರ್ಚಟೆ, ರಾಜು ಇಂಗಳೆ ,ಸುಧಿರ ಮುರ್ಚಟೆ, ಸಂತೋಷ ಕೋರೆ, ಅಜೀತ ದಿಗ್ಗಿವಾಡಿ, ರಾಜು ಗುರುವ, ಅಶೋಕ ಡೋಣವಾಡೆ, ವೀರಭದ್ರ ಕೋಕಣೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.