ಸಾಂಸ್ಕೃತಿಕ ಪ್ರಯೋಗಗಳು ನಮ್ಮ ಸಂಸ್ಕತಿಯ ಪ್ರತಿಬಿಂಬಗಳು: ಕುಂಟಿ


ಲೋಕದರ್ಶನ ವರದಿ

ಧಾರವಾಡ 19: ಸಾಂಸ್ಕೃತಿಕ ಪ್ರಯೋಗಗಳು ನಮ್ಮ ಸಂಸ್ಕತಿಯ ಪ್ರತಿಬಿಂಬಗಳು. ನಮ್ಮ ಸಮಾಜದ ನಡೆ-ನುಡಿ-ಆಚಾರ-ವಿಚಾರ-ಯೋಚನೆಗಳೆ ಸಾಂಸ್ಕೃತಿಕ  ಪಯೋಗಗಳ ಮೂಲ ಬೇರು. ನಮ್ಮ ಸಾಂಸ್ಕತಿಕ ರಂಗ ಬಲಿಷ್ಠವಾದದ್ದು, ಹಾಗೆಯೇ ಭವ್ಯ ಇತಿಹಾಸ  ಹೊಂದಿದ್ದು, ಸಾಂಸ್ಕೃತಿಕ ರಂಗದ ಪ್ರಯೋಗಗಳು ಸಾಮಾಜಿಕ ಚಿಂತನೆಗೆ ಮಾರ್ಗದರ್ಶಕವಾಗಿದ್ದು, ಸಮಾಜದ ನಡೆ ಸ್ವಾಸ್ತ್ಯ ಸಮಾಜದ ಸರ್ವ ರೀತಿಯ ಹಿತಕ್ಕಾಗಿ ಹೇಗಿರಬೇಕು ಎಂದು ದಾರಿ ತೋರಿಸುತ್ತವೆ ಎಂದು ಖ್ಯಾತ ಶಿಕ್ಷಕ, ಮಕ್ಕಳ ಸಾಹಿತಿ, ರಂಗಕಮರ್ಿ, ಕ.ವಿ.ವ. ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ(ಇಟಗಿ) ಹೇಳಿದರು. 

ಕನರ್ಾಟಕ ವಿದ್ಯಾವರ್ಧಕ ಸಂಘ 63 ನೇ ಕನರ್ಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇಂದು ಉದ್ಯೋಗ ಪರ್ವ ದೊಡ್ಡಾಟ  ಪ್ರಯೋಗಕ್ಕೆ ಮದ್ದಳೆ ಬಾರಿಸಿ ಚಾಲನೆ ನೀಡಿ ಮಾತನಾಡಿದ ಅವರು ದೊಡ್ಡಾಟ ಉತ್ತರ ಕನರ್ಾಟಕ ಗ್ರಾಮೀಣ ಪ್ರದೇಶದ ಉದರದಿ ಸಹಜವಾಗಿ ಜನಿಸಿದ ಪ್ರಸಿದ್ಧ ರಂಗ ಪ್ರಕಾರಗಳಲ್ಲಿ ಒಂದು. ಇಂತಹ ರಂಗ ಪ್ರಕಾರಗಳು ನಿಧಾನವಾಗಿ ಕಣ್ಮರೆ ಆಗುವ ಆತಂಕ ನಮ್ಮೆದುರು ಇದೆ. ಆದ್ದರಿಂದ ಜನ ಇಂತಹ ವಿಶೇಷ ಪ್ರಕಾರ ಉಳಿಸುವ ಪ್ರಯತ್ನ ಮಾಡಬೇಕಿದೆ. 

ಕನರ್ಾಟಕ ವಿದ್ಯಾವರ್ಧಕ ಸಂಘ ಎಲ್ಲ ಸಾಂಸ್ಕೃತಿಕ ಕಲಾ ಪ್ರಕಾರಗಳನ್ನು ಉಳಿಸುವ ಪ್ರಯತ್ನ ನಿತ್ಯ ನಿರಂತರವಾಗಿ  ಮಾಡುತ್ತಿದೆ. 129 ವರ್ಷಗಳಿಂದ ಸತತವಾಗಿ ಈ ಕಾರ್ಯ ಶ್ರದ್ಧೆಯಿಂದ  ಮಾಡುತ್ತಿರುವ ಸಂಘದ ಕಾರ್ಯ ಶ್ಲಾಘನೀಯ, ಈ ದೊಡ್ಡಾಟ ಪ್ರದರ್ಶನಕ್ಕೆ ಚಾಲನೆಗೆ ಅವಕಾಶ ಸಿಕ್ಕಿರುವುದು ನನ್ನ ಪುಣ್ಯವೇ ಸರಿ, ನಾನು ದೊಡ್ಡಾಟ ಪ್ರದರ್ಶನಕ್ಕೆ ಅತ್ಯಂತ ಪ್ರೀತಿಯಿಂದ ಚಾಲನೆ ನೀಡಿದ್ದೇನೆ. ಮತ್ತು ಮಮ್ಮಿಗಟ್ಟಿಯ ಜನಸಾಗರ ಸಾಹಿತ್ಯ ಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆ ದೊಡ್ಡಾಟ ಕಲೆ ಸಂರಕ್ಷಿಸುವ ಕಾರ್ಯ ಮಾಡುತ್ತಿದ್ದು ಅವರಿಗೆ ಅಭಿನಂದನೆಗಳು ಎಂದರು. 

ಕನ್ನಡ ಅನ್ನದ ಭಾಷೆಯಲ್ಲ ಎಂಬ ಸುಳ್ಳು ಗುಲ್ಲನ್ನು ಕೇಳುತ್ತಿದ್ದೇವೆ. ಕನ್ನಡ ಭಾಷೆ ವಿಷಯವನ್ನು ನಾನು ಓದಿದ್ದು ನನಗೆ ಉದ್ಯೋಗ ಸಿಕ್ಕಲು ಆಧಾರವಾಯಿತು. ಕನ್ನಡ ಮಾಧ್ಯಮದಲ್ಲಿ ಓದಿದ ನನ್ನ ಮಕ್ಕಳು ಇಂದು ಉತ್ತಮ ನೌಕರಿ ಗಳಿಸಿ ಸೇವೆ ಮಾಡುತ್ತಿದ್ದಾರೆ, ಆದ್ದರಿಂದ ಇಂತಹ ಅಪಪ್ರಚಾರ ಮಾಡುವುದನ್ನು ಕೈಬಿಡಬೇಕು.  ಸಂಘ ನಾನು ಹಿರಿಯ ಸದಸ್ಯ ಅಂತಾ ಗುರುತಿಸಿ ಸನ್ಮಾನ ಮಾಡಿದ್ದರಿಂದ, ಇಂತಹ ಪ್ರತಿಷ್ಠಿತ ಸಂಸ್ಥೆಯಿಂದ ಸನ್ಮಾನ ಸಿಕ್ಕಿದ್ದರಿಂದ ಈಗ ನನಗೆ ನನ್ನ ತಂದೆ-ತಾಯಿ ಪುಣ್ಯ ಉದರದಿಂದ ನಾನು ಹುಟ್ಟಿದ್ದು ಸಾರ್ಥಕ ಆಯಿತು ಎಂದು ಅತೀವ ಸಂತೋಷ, ಹೆಮ್ಮೆ ಉಂಟಾಗಿದೆ ಎಂದ ಸನ್ಮಾನಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಸಂಘದ ಹಿರಿಯ ಸದಸ್ಯ ಬಸವೇಶ್ವರ ಬಾ. ಕೊಟಬಾಗಿ ಹೇಳಿದರು. ಮತ್ತು ಹಿರಿಯ ಸದಸ್ಯ ಪ್ರಭಾಕರ ನಾಯಕ ಅವರನ್ನು ಸನ್ಮಾನಿಸಲಾಯಿತು. 

ವೇದಿಕೆ ಮೇಲೆ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಗೌರವ ಉಪಸ್ಥಿತರಿದ್ದು, ಗೌರವ ಉಪಾಧ್ಯಕ್ಷ ಸೇತುರಾಮ ಹುನಗುಂದ, ಕಾರ್ಯಾಧ್ಯಕ್ಷ ಶಿವಣ್ಣ ಬೆಲ್ಲದ, ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಸತೀಶ ತುರಮರಿ, ಶಿವಾನಂದ ಭಾವಿಕಟ್ಟಿ ಉಪಸ್ಥಿತರಿದ್ದರು. 

ಸಹಕಾರ್ಯದಶರ್ಿ ಸದಾನಂದ ಶಿವಳ್ಳಿ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರ ಮನೋಜ ಪಾಟೀಲ ವಂದಿಸಿದರು. ಕಾರ್ಯಕ್ರಮ ಸಂಯೋಜಕಿ ವಿಶ್ವೇಶ್ವರಿ ಹಿರೇಮಠ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ವಾಯ್. ಎನ್. ಮಾಳಗಿ ಪ್ರಾಥರ್ಿಸಿದರು. 

ಕಾರ್ಯಕ್ರಮಲ್ಲಿ ಬಿ.ಕೆ. ಹೊಂಗಲ, ಎಂ.ಬಿ.ಹೆಗ್ಗೇರಿ, ವಾಯ್.ಸಿ. ಬಿಜಾಪೂರ, ಡಾ. ಶ್ರೀಧರ ಕುಲಕಣರ್ಿ, ಚನಬಸಪ್ಪ ಅವರಾದಿ, ವೀರಣ್ಣ ಒಡ್ಡೀನ, ಪ್ರಭು ಹಂಚಿನಾಳ, ಎಚ್.ಡಿ. ನದಾಫ್, ಶಂಕರ ರಾಜಗೂಳಿ ಸೇರಿದಂತೆ ಅನೇಕರ ಭಾಗವಹಿಸಿದ್ದರು. 

ನಂತರ ಜನಸಾಗರ ಸಾಹಿತ್ಯ ಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆ, ಮುಮ್ಮಿಗಟ್ಟಿ ಇವರಿಂದ `ಉದ್ಯೋಗ ಪರ್ವ ದೊಡ್ಡಾಟ ಪ್ರದರ್ಶನಗೊಂಡಿತು. 

3