ಪದವಿ, ಸ್ನಾತಕೋತ್ತರ ಪದವಿಯಲ್ಲಿ ಬಯಲಾಟ ಮತ್ತು ಪಾತ್ರಧಾರಿಗಳ ಕುರಿತ ಪಠ್ಯ ಅಳವಡಿಕೆ

Coursework on exposure and role-playing in undergraduate, postgraduate

ಪದವಿ, ಸ್ನಾತಕೋತ್ತರ ಪದವಿಯಲ್ಲಿ ಬಯಲಾಟ ಮತ್ತು ಪಾತ್ರಧಾರಿಗಳ ಕುರಿತ ಪಠ್ಯ ಅಳವಡಿಕೆ  

ಬಳ್ಳಾರಿ 14 : ಬಯಲಾಟಕ್ಕೆ ಸಂಬಂಧಿಸಿದ ರೆಪಾರ್ಟರಿಯನ್ನು ಬಳ್ಳಾರಿಯಲ್ಲಿ ತೆರೆಯಬೇಕು. ಪದವಿ, ಸ್ನಾತಕೋತ್ತರ ಪದವಿಯಲ್ಲಿ ಬಯಲಾಟ ಮತ್ತು ಪಾತ್ರಧಾರಿಗಳ ಕುರಿತ ಪಠ್ಯ ಅಳವಡಿಸಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಡಾ.ಕುಂವೀರಭದ್ರ​‍್ಪ ಹೇಳಿದರು. ಇಂದು ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗ ಮಂದಿರದಲ್ಲಿ. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಸಹಯೋಗದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿಯು ಆಯೋಜಿಸಿದ್ದ. ಕರ್ನಾಟಕ- ಆಂದ್ರ ಗಡಿ ಪ್ರದೇಶದ ಕನ್ನಡ ಬಯಲಾಟಗಳು ಕುರಿತ ವಿಚಾರ ಸಂಕಿರಣ ಮತ್ತು ಬಯಲಾಟ ಪ್ರದರ್ಶನ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.ದೊಡ್ಡಾಟ ಆಡುವವರು ಯಾವುದೇ ಇನ್ಸ್ಟಿಟ್ಯೂಟ್ ನಲ್ಲಿ ಓದಿದವರಲ್ಲ. ಕೂಡ್ಲಿಗಿಯಲ್ಲಿನ ಬಯಲಾಟ ಕಲಾವಿದರು ಯಾವುದೇ ಪ್ರೊಫೆಸರ್ ಗೆ ಕಮ್ಮಿ ಇಲ್ಲ.ಅನಕ್ಷರಸ್ಥರು ಈ ಕಲೆಯಲ್ಲಿ ಪ್ರದರ್ಶನ ಮಾಡುತ್ತಾರೆ. ನೆರೆಯ ಆಂದ್ರ ಪ್ರದೇಶದಲ್ಲಿಯೂ ಕನ್ನಡ ಭಾಷೆಯಲ್ಲುಯೇ ಈ ಬಯಲಾಟ ಪ್ರದರ್ಶನ ನಡೆಸುತ್ತಿದೆ. ಇಲ್ಲಿನ ಪಾತ್ರಧಾರಿಗಳಿಗೆ ಕಂಠ(ಧ್ವನಿ) ಮುಖ್ಯ ಎಂದ. ಯಕ್ಷಗಾನದಂತೆ ಬಯಲಾಟವನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯಲು ಪ್ರದರ್ಶನಗಳನ್ನು ಆಯೋಜಿಸಬೇಕು ಎಂದರು. ಅಕಾಡೆಮಿ ಮೂಲಕ ಈ ಪ್ರಕಾರದ ಕಲಾಕಾರರಿಗೆಪ್ರಶ್ತಿಗಳು ನೀಡಬೇಕು. ಹಿರಿಯ ರಂಗ ಕಲಾವಿದರಾದ ಸುಭದ್ರಮ್ಮ ಮನ್ಸೂರು, ಬೆಳಗಲ್ಲು ವೀರಣ್ಣ ಅವರ ಹೆಸರನ್ನು ಸರ್ಕಲ್ ಇಲ್ಲ ರಸ್ತೆಗಳಿಗೆ ಇಡಬೇಕೆಂದರು.ಬಯಲಾಟಗಳು ಎರೆಡು ವಿಧ ಒಂದು ಸಹಜ ರಂಗ ಭೂಮಿಯದು, ಇನ್ನೊಂದು ರಾಜಕಾರಣಿಗಳು ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ವಿಧ ಎಂದು ನೆರೆದ ಜನರಲ್ಲಿ ನಗೆ ತರಿಸಿದರು.ಎಡ ಪಂಥೀಯ ಹೋರಾಟಗಾರ ಸಿದ್ದನಗೌಡ ಪಾಟೀಲ್ ಅವರು ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಮಾಡುವ ಸಂಸ್ಕೃತಿಯಿಂದ ದುಯರವಸಗಿ ಈ ಮೊಬೈಲ್ ಗಳಿಂದ ಬರೀನೋಡುಗ ಸಂಸ್ಕೃತಿಯವರಾಗಿದ್ದಾರೆ.ಬಳ್ಳಾರಿ ಬರೀ ಗಣಿಕಳ್ಳರಿಮನದ ಪ್ರಸಿದ್ದ ಅಲ್ಲ, ಇಲ್ಲಿನ ಸಾಂಸ್ಕೃತಿಕ ಸಂಪತ್ತು ಸಹ ಪ್ರಸಿದ್ದವಾಗಿದೆಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಚೋರನೂರು ಕೊಟ್ರ​‍್ಪ ಮಾತನಾಡಿ, ಬಯಲಾಟ ಈ ಭಾಗದಲ್ಲಿ ಹೇಗೆ ಬೆಳೆದು ಬಂತು, ಯಕ್ಷಗಾನದಂತೆ ಪ್ರಸಿದ್ದಿ ಪಡೆಯಲು ಏನು ಮಾಡಬೇಕು ಎಂದು ಹೇಳಿದರು.ಪತ್ರಕರ್ತ ಕೆ.ಎಂ.ಮಂಜುನಾಥ ಮಾತನಾಡಿ ಬಯಲಾಟದ ವೇಷಭೂಷಣ ಮತ್ತು ಪ್ರದರ್ಶನ ಪರಿಷ್ಕರಣೆ ಆಗಬೇಕು ಎಂದು. ಬಯಲಾಟದ ದ್ರೋಣಾಚಾರ್ಯರ ಮಾತು ಹೇಳಿನೆರೆದ ವಿದ್ಯಾರ್ಥಿಗಳು ಕೇಕೆ ಹಾಕಯವಮನತೆ ಮಾಡಿದರು.ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ.ಕೆ.ಆರ್‌.ದುರ್ಗಾದಾಸ್ ಅಧ್ಯಕ್ಷತೆವಹಿಸಿದ್ದರು. ಕುಡುತಿನಿಯ ನರಸಿಂಗರಾಯರ ದ್ರೋಪದಿ ವಸ್ತ್ರಾಪಹರಣ ಕಥೆ ಹೆಚ್ಚು ಪ್ರಸಿದ್ದೆ ಪಡೆಯಿತು. ಈ ಭಾಗದಲ್ಲಿ 50 ಕ್ಕೂ ಹೆಚ್ಚು ಕೃತಿಗಲಕ ರಚನೆಯಾಗಿದೆಂದರು. ಮೊದಲು ಬಯಲಾಟದ ಸ್ರೀಪಾತ್ರಗಳನ್ನು ಪುರುಷರೇ ಮಾಡುತ್ತಿದ್ದರು. ಬಳ್ಳಾರಿ ಬಯಲಾಟಕ್ಕೆ ಖ್ಯಾತಿ ಪಡೆದಿದೆಂದರು.ಮುಮ್ಮೇಳ ಮತ್ತು ಮದ್ದಲೆ ಬಾರಿಸುವವರ ಸಂಖ್ಯೆ ಕಡೆಮಿಯಾಗಿದೆ. ಬಯಲಾಟದ ಹಾಡುಗಳನ್ನು ವೇದಿಕೆ ಮೇಲೆ ಹಾಡುವ ಪದ್ದತಿ ಬರಬೇಕು. ಅದಕ್ಕೆ ವಿದ್ಯಾರ್ಥಿಗಳಿಗೆ ಅಗತ್ಯವಾದ ನೆರವನ್ನು ಅಕಾಡೆಮಿ ನೀಡಲಿದೆಂದರು.ಕಾರ್ಯಕ್ರಮದ ಸಂಚಾಲಕ ಡಾ. ಜಾಜಿ ದೇವೇಂದ್ರ​‍್ಪ ಪ್ರಾಸ್ತಾವಿಕವಾಗಿ ಮಾತನಾಡಿ ಆರು ತಂಡಗಳು ಇಲ್ಲಿ ಬಯಲಾಟ ಪ್ರದರ್ಶನ ನಡೆಸಲಿವೆ. ಬಯಲಾಟದ ಪಠ್ಯಗಳು ಶಿಕ್ಷಣದಲ್ಲಿ ಆಗಬೇಕಿದೆಂದರು.ಅಕಾಡೆಮಿ ಸದಸ್ಯ ಭೀಮಪ್ಪ ಹುದ್ದಾರ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ನಿಷ್ಠಿ ರುದ್ರ​‍್ಪ, ಪತ್ರಕರ್ತ ಕೆ.ಎಂ.ಮಂಜುನಾಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್, ನಿವೃತ್ತ ಉಪನಿರ್ದೇಶಕ ಚೋರನೂರು ಕೊಟ್ರ​‍್ಪ, ಲೇಖಕ ಡಾ.ಶಿವಲಿಂಗಪ್ಪ ಹಂದ್ಯಾಳ್ ಮೊದಲಾದವರು ಹಾಗೂ  ಎಮ್ಮಿಗನೂರು ಜಡೇಶ್ ನಾಡಗೀತೆ ಹಾಡಿದರು.