ಲೋಕದರ್ಶನ ವರದಿ
ಹರಪನಹಳ್ಳಿ 13; ರಾಜ್ಯ ಮತ್ತು ಕೇಂದ್ರ ಸಕರ್ಾರಗಳು ಈ ಸಾಲಿನ ಆಯವ್ಯಾಯ ಮಂಡನೆಯಲ್ಲಿ ವಕೀಲರಗಳನ್ನು ಕಡೆಗಾಣಿಸಿರುವುದಕ್ಕೆ ಭಾರತೀಯ ವಕೀಲ ಪರಿಷತ್ತಿನಿಂದ ವಕೀಲರ ರಾಷ್ಟ್ರವ್ಯಾಪ್ತಿ ಪ್ರತಿಭಟನೆ ಕರೆ ಕೊಟ್ಟಿದ ಹಿನ್ನಲೆಯಲ್ಲಿ ಹರಪನಹಳ್ಳಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್ ರವರ ಅದ್ಯಕ್ಷತೆಯಲ್ಲಿ ಸರ್ವಸದಸ್ಯರು ಪ್ರತಿಭಟಿಸಿದರು.
ಪಟ್ಟಣದ ನ್ಯಾಯಲಯದ ಅವರಣ ದಿಂದ ನ್ಯಾಯವಾದಿಗಳ ಸಂಘದಿಂದ ಸರ್ವದಸ್ಯರ ನಡಾವಳಿಕೆಯಿಂದ ಏರ್ಪಡಿಸಲಾಗಿದ್ದ ಪ್ರತಿಭಟನೆಯಲ್ಲಿ ಹರಪನಹಳ್ಳಿ ವಕೀಲರ ಸಂಘದ ಸರ್ವಸದಸ್ಯರು ರಾಜ್ಯ ಮತ್ತು ಕೇಂದ್ರ ಸಕರ್ಾರವು ಈ ಸಾಲಿನ ಬಜೆಟ್ ಮಂಡನೆಯಲ್ಲಿ ವಕೀಲರುಗಳನ್ನು ಕಡೆಗಾಣಿಸುವುದ್ದಕ್ಕೆ ಭಾರತೀಯ ವಕೀಲರ ಪರಿಷತ್ತಿನಿಂದ ನ್ಯಾಯಲಯದಿಂದ ಹೋರಟ ನ್ಯಾಯವಾದಿ ಪ್ರತಿಭಟನಕಾರರು ಪಟ್ಟಣದ ಪ್ರವಾಸಿ ಮಂದಿರ ವೃತ್ತದ ಮಾರ್ಗವಾಗಿ ಶಾಂತಿಯುತ ಮೆರವಾಣಿಗೆ ಮೂಲಕ ಮಿನಿ ವಿಧಾನ ಸೌಧಕ್ಕೆ ತೆರಳಿ ಉಪವಿಭಾಗ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಈ ಸಾಲಿನ ಬಜೆಟ್ ಮಂಡನೆಯಲ್ಲಿ ವಕೀಲ ಸಮುದಾಯವನ್ನು ಕಡೆಗಾಣಿಸಿದೆ. ವಕೀಲರ ರಕ್ಷಣೆ ಕಾಯಿದೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರಲು ಕೇಂದ್ರ ಸಕರ್ಾರವನ್ನು ಒತ್ತಾಯಿಸುತ್ತೆವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಕೆ. ಬಸವರಾಜ್, ಕಾರ್ಯದಶರ್ಿ ಎಸ್.ವೇದಮೂತರ್ಿ, ಕೆ.ದಾಕ್ಷಾಯಿಣಿ, ವಿ.ಹೂಲೆಪ್ಪ, ಬಿ. ಗೋಣಿಬಸಪ್ಪ, ಬಿ.ಕರಿಬಸಪ್ಪ, ಓ.ತಿರುಪತಿ, ಜಾಕಿರ್ ಹುಸೇನ್, ರೇಣುಕ ಎಫ್, ಮೇಟಿ, ರುದ್ರಮನಿ, ಬಾಗಳಿ ಮಂಜುನಾಥ್, ನಂದೀಶ್, ಗಂಗಾಧರ್ ಗುರುಮಠ್, ಮಂಜ್ಯಾನಾಯ್ಕ, ಜಗದಪ್ಪ, ಗುಡದಯ್ಯ, ಇದ್ಲಿರಾಮಪ್ಪ, ತಿಪ್ಪೇಶ್, ಹನುಮಂತಪ್ಪ, ಮತ್ತು ಇತರರು ಇದ್ದರು.