'ರೈತರಿಗಾಗಿ ರಾಜ್ಯಮಟ್ಟದ ಯೋಜನೆಗಳಿಗೆ ವೆಚ್ಚ ಹಂಚಿಕೆಗೆ ಕೇಂದ್ರ ಮುಕ್ತ'

ನವದೆಹಲಿ: ರೈತರಿಗೆ ನೆರವು ನೀಡುವ ವಿವಿಧ ರಾಜ್ಯಮಟ್ಟದ ಯೋಜನೆಗಳಿಗೆ  ರಾಜ್ಯಗಳೊಂದಿಗೆ ವೆಚ್ಚವನ್ನು ಹಂಚಿಕೊಳ್ಳುವ ಆಲೋಚನೆಗೆ ಕೇಂದ್ರ ಮುಕ್ತವಾಗಿದೆ ಎಂದು  ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಇಲ್ಲಿ ಹೇಳಿದ್ದಾರೆ. 

 ಲೋಕಸಭೆಯಲ್ಲಿ ಒಡಿಶಾದ ಕಟಕ್ ಸಂಸದ ಬಿಜು ಜನತಾದಳದ ಭಾತ್ರುಹರಿ ಅವರ ನಿದರ್ಿಷ್ಟ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಆಲೋಚನೆ ಹೇಗೆ ಕಾರ್ಯಗತಗೊಳ್ಳುತ್ತದೆ ಎಂಬುದನ್ನು ತಾವು ಇನ್ನೂ ಪರಿಶೀಲಿಸಬೇಕಾಗಿದೆ ಎಂದು ಹೇಳಿದ್ದಾರೆ.  

        ಸದನದಲ್ಲಿ ಬಜೆಟ್ ಮೇಲಿನ ಚಚರ್ೆ ಮತ್ತು ಉತ್ತರದ ಸಂದರ್ಭದಲ್ಲಿ ಸ್ಪಷ್ಟೀಕರಣವನ್ನು ಕೋರಿದ  ಮಹತಾಬ್, 'ರೈತು ಬಂಧು' ಎಂಬ ರೈತರಿಗೆ ಸಹಾಯ ಮಾಡುವ ಯೋಜನೆಯನ್ನು ಪ್ರಾರಂಭಿಸಿದ ಮೊದಲ  ರಾಜ್ಯ ತೆಲಂಗಾಣ ಎಂದು ಪ್ರತಿಪಾದಿಸಿ, ಈ ಯೋಜನೆಯಡಿ ರೈತರಿಗೆ ಪ್ರತಿ ಎಕರೆಗೆ ಎಕರೆಗೆ 10  ಸಾವಿರ ರೂ. ಬೆಂಬಲವಾಗಿ ನೀಡಲಾಗುತ್ತಿದೆ ಎಂದರು.

          ' ಆ ನಂತರದ ರಾಜ್ಯ ಒಡಿಶಾ ಆಗಿದ್ದು, ಅಲ್ಲಿನ ಸಕರ್ಾರ ಕಲಿಯಾ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆ ಭೂಮಿ ಮಾಲಿಕತ್ವ ಹೊಂದಿದ ರೈತರಿಗೆ ಮಾತ್ರವಲ್ಲದೆ, ಕೃಷಿ ಕಾಮರ್ಿಕರಿಗೂ ಅನ್ವಯವಾಗುತ್ತಿದೆ.  ಜಾರ್ಖಂಡ್, ಪಶ್ಚಿಮ ಬಂಗಾಳ, ಕನರ್ಾಟಕ ಮತ್ತು ಆಂಧ್ರಗಳಂತಹ ಇತರ ರಾಜ್ಯಗಳಲ್ಲೂ ಇಂತಹ ಯೋಜನೆಗಳನ್ನು ಆರಂಭಿಸಲಾಗಿದೆ.' ಎಂದು ಅವರು ಹೇಳಿದರು. 

          'ರೈತರು  ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಲವು ರಾಜ್ಯಗಳು ಪ್ರಜ್ಞೆ ಹೊಂದಿವೆ. ಆದ್ದರಿಂದ,  ಈ ರಾಜ್ಯಗಳು ತಮ್ಮ ಸ್ವಂತ ಸಂಪನ್ಮೂಲಗಳಿಂದ ಇಂತಹ ಯೋಜನೆಯನ್ನು ಜಾರಿಗೊಳಿಸುತ್ತಿವೆ.' ಎಂದು ಮಹತಾಬ್ ಹೇಳಿದ್ದಾರೆ. 'ನೀತಿ ಆಯೋಗದ ಸಭೆಯಲ್ಲಿ ಒಡಿಶಾ ಸಕರ್ಾರ ಸಲಹೆಯೊಂದನ್ನು ನೀಡಿದೆ. ಅದು ಹಂಚಿಕೆಯ ಆಧಾರದ ಮೇಲೆ  ಏಕೆ ಇರಬಾರದು? ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್  ಸಲಹೆಯನ್ನು ನೀಡಿದ್ದಾರೆ. 

       ಕೇಂದ್ರ ಸಕರ್ಾರ ಶೇ.70 ರಷ್ಟು ನೀಡಿದರೆ, ರಾಜ್ಯ ಸರ್ಕಾರ್  ಶೇ. 30  ರಷ್ಟು ಹಣವನ್ನು ಒದಗಿಸುತ್ತದೆ.  ರೈತರ ಅನುಕೂಲಕ್ಕಾಗಿ ಕೇಂದ್ರ ಮತ್ತು ರಾಜ್ಯ  ಎರಡೂ ಒಟ್ಟಾಗಿ ಹೋಗಬಹುದಾದ ಕಾರ್ಯಕ್ರಮವನ್ನಾಗಿ ಮಾಡೋಣ.' ಎಂದು ಪಟ್ನಾಯಕ್ ಹೇಳಿರುವುದಾಗಿ ಮಹತಾಬ್ ಹೇಳಿದ್ದಾರೆ. 

ಸರ್ಕಾರ