ನವದೆಹಲಿ, ಜೂನ್ 9, ರಾಜಸ್ಥಾನದಲ್ಲಿ ಕಳೆದ 24 ಗಂಟೆಗಳಲ್ಲಿ 144 ಕೊರೊನಾ ವೈರಸ್ ಪ್ರಕರಣ ದಾಖಲಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11,020 ಕ್ಕೆ ಏರಿದೆ.ಇದೇ ಅವಧಿಯಲ್ಲಿ ಇನ್ನೂ ಐದು ಜನರು ಕಾಯಿಲೆಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 251 ಕ್ಕೆ ತಲುಪಿದೆ.ಆರೋಗ್ಯ ಇಲಾಖೆ ಮಂಗಳವಾರ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, 144 ಪ್ರಕರಣಗಳ ಸೇರ್ಪಡೆಯೊಂದಿಗೆ, ರಾಜ್ಯದ ಒಟ್ಟಾರೆ ಪ್ರಕರಣ ಸಂಖ್ಯೆ 11,020 ಕ್ಕೆ ಏರಿದೆ. ಹೊಸ ಪ್ರಕರಣಗಳಲ್ಲಿ ಹೆಚ್ಚಿನವು (61) ಜೈಪುರದಿಂದ ವರದಿಯಾಗಿವೆ, ರಾಜ್ಯ ರಾಜಧಾನಿ ಪ್ರಸ್ತುತ 2321 ಪ್ರಕರಣ ವರದಿಯಾಗಿವೆ. ಭರತ್‌ಪುರ ದಲ್ಲಿ 30, ಅಲ್ವಾರ್ ನಲ್ಲಿ 11 ಪ್ರಕರಣ ಪತ್ತೆಯಾಗಿದೆ. ರಾಜಸ್ಥಾನದಲ್ಲಿ 5,18,350 ಕೊರೊನಾ ಪರೀಕ್ಷೆ ನಡೆಸಲಾಗಿದೆ. 8,182 ಜನರು ರೋಗದಿಂದ ಚೇತರಿಸಿಕೊಂಡಿದ್ದು, 7779 ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ದಾಖಲಾದ ಒಟ್ಟು ಪ್ರಕರಣಗಳಲ್ಲಿ 3,151 ಜನ ಹೊರ ರಾಜ್ಯಗಳಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಂಡಿದೆ.