ಬೆಂಗಳೂರು, ಜ ೨೯ ಮಾರಣಾಂತಿಕ ಕೊರೊನಾ ವೈರಸ್ ಸೋಂಕಿನ ಶಂಕೆಯ ಮೇಲೆ ರಾಜ್ಯದಲ್ಲಿ ನಾಲ್ವರನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಾಂಕ್ರಾಮಿಕ ರೋಗಗಳ ವಿಭಾಗದ ಜಂಟಿ ಕಾರ್ಯದರ್ಶಿ ಬಿ.ಟಿ. ಪ್ರಕಾಶ್ ಕುಮಾರ್ ಹೇಳಿದ್ದಾರೆ ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಆರೋಗ್ಯ ಇಲಾಖೆ ಜನವರಿ ೨೮ ರವರೆಗೆ ೧೧ ಮಂದಿಯನ್ನು ನಿರ್ಬಂಧಿಸಿಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ೩೦೦೦ಕ್ಕೂ ಹೆಚ್ಚು ಮಂದಿಯನ್ನು ಧರ್ಮಲ್ ಸ್ಕಾನಿಂಗ್ ಒಳಪಡಿಸಲಾಗಿದ್ದರೂ, ಯಾವುದೇ ವ್ಯಕ್ತಿಗೆ ವೈರಸ್ ತಗುಲಿರುವ ಪ್ರಕರಣ ಪತ್ತೆಯಾಗಿಲ್ಲ ಕಳೆದ ವಾರ ಕೊರೊನೊ ವೈರಸ್ ಉಗಮ ಕೇಂದ್ರ ವಾಗಿರುವ ವುಹಾನ್ ಗೆ ಭೇಟಿ ನೀಡಿದ್ದ ಮೂವರು ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಪತ್ತೆ ಹಚ್ಚಲಾಗಿತ್ತು. ಆದರೆ, ಕಳೆದ ೧೪ ದಿನಗಳಲ್ಲಿ ರಾಜ್ಯದಲ್ಲಿ ಯಾವುದೇ ಕೋರೊನಾ ವೈರಸ್ ಸೋಂಕು ಪ್ರಕರಣ ಪತ್ತೆಯಾಗಿಲ್ಲ ರಾಜ್ಯಕ್ಕೂ ಮಾರಣಾಂತಿಕ ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಚೀನಾದಿಂದ ಬರುವ ಎಲ್ಲಾ ಪ್ರಯಾಣಿಕರಿಗೆ ಥರ್ಮಲ್ ಸ್ಕಾನಿಂಗ್ ಗೆ ಒಳಪಡಿಸಲಾಗುತ್ತಿದೆ. ನಿತ್ಯವೂ ಪ್ರಯಾಣಿಕರನ್ನು ಆರೋಗ್ಯಧಿಕಾರಿಗಳು ತಪಾಸಣೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
-