ಕಣ್ಣೀರು ಸಹ ಕೊರೊನಾ ತರಿಸಬಲ್ಲದು: ಬಿಎಂ‌ಸಿಆರ್‌ಐ ಮಹತ್ವದ ಸಂಶೋಧನೆ

ಬೆಂಗಳೂರು,ಜೂನ್.14,ಕೊರೋನಾ ಸೋಂಕಿನ ವೈರಸ್‌ ಹರಡಲು  ಕಣ್ಣು, ಕಿವಿ, ಮೂಗು, ಬಾಯಿ ಜೀವಕೊಡುವ ಅಂಗಗಳು‌. ಪದೇಪದೇ ಇವುಗಳನ್ನು ಮುಟ್ಟುತ್ತಿರಬಾರದು ಎಂದೂ ಸಲಹೆ ವಿಶ್ವ ವ್ಯಾಪಿಯಾಗಿಯೇ ಇದೆ. ಆದರೆ ಈಗ  ಕಣ್ಣೀರಿನಿಂದಲೂ ಕೊರೊನಾ ಹರಡುತ್ತದೆ ಎಂದು .ಬೆಂಗಳೂರು ಮೆಡಿಕಲ್ ಕಾಲೇಜ್ ಅಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ -ಬಿಎಂಸಿಆರ್‌ಐ ಸಂಶೋಧನೆ ಹೇಳಿದೆ. ಕಣ್ಣಿಗೆ ಕಾಂಟ್ಯಾಕ್ಟ್ ಲೆನ್ಸ್ ಬಳಸುವವರಲ್ಲಿ ಸೋಂಕು ಸುಲಭವಾಗಿ ಹರಡುತ್ತದೆ. ಕನ್ನಡಕ ಧರಿಸುವವರಲ್ಲಿ ಸೋಂಕು ಹರಡುವ ಪ್ರಮಾಣ ಕಡಿಮೆ ಎಂದು ಅಮೆರಿಕದ ತಜ್ಞರು ನಡೆಸಿದ್ದ ಸಂಶೋಧನೆಯಿಂದ ಬಹಿರಂಗಗೊಂಡಿತ್ತು. ಇದೀಗ ಕಣ್ಣೀರು ಸಹ ಸೋಂಕು ತರಬಹುದು ಎನ್ನುವುದನ್ನು ಬೆಂಗಳೂರು ತಜ್ಞ ವೈದ್ಯರು ಪತ್ತೆ ಮಾಡಿದ್ದಾರೆ.

ಮಿಂಟೋ ಆಸ್ಪತ್ರೆಯಲ್ಲಿ 45 ಸೋಂಕಿತರ ಕಣ್ಣೀರನ್ನು ಪರೀಕ್ಷಿಸಿದ ತಜ್ಞರ ತಂಡಕ್ಕೆ ಎಲ್ಲಾ ಸೋಂಕಿತರ ಕಣ್ಣೀರಿನಲ್ಲೂ ಕೊರೋನಾ ವೈರಸ್ ಪತ್ತೆಯಾಗಿದೆ. ಇದುವರೆಗೆ ಕೇವಲ ಎಂಜಲು ಮತ್ತು ಮೂಗಿನ ದ್ರವದಿಂದ ಕೊರೋನಾ ಸೋಂಕು ಹರಡುವುದು ತಿಳಿದಿತ್ತು. ಆದರೆ ಇದೇ ಮೊದಲ ಬಾರಿಗೆ ಕಣ್ಣೀರಿನಿಂದಲೂ ಕೋವಿಡ್ ಹರಡುವುದು ದೃಢಪಟ್ಟಿದೆ‌.ಇದೇ ಮೊದಲ ಬಾರಿಗೆ ಇಂತಹ ವಿನೂತನ ಸಂಶೋಧನೆ ನಡೆದಿದ್ದು, ಬೆಂಗಳೂರು ಮೆಡಿಕಲ್ ಕಾಲೇಜ್ ಅಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ ನ ತಜ್ಞರ ತಂಡ ನಡೆಸಿದ ಸಂಶೋಧನೆಯಲ್ಲಿ ಈ ಮಾಹಿತಿ ಪತ್ತೆಯಾಗಿದೆ.ಕಣ್ಣೀರಿನಿಂದ ಸೋಂಕು ಹರಡದಂತೆ ವಹಿಸಬೇಕಾದ ಎಚ್ಚರಿಕಾ ಕ್ರಮಗಳು ಹೀಗಿವೆ.  ಕೊಳಕಾದ ಬರಿಗೈನಿಂದ ಕಣ್ಣನ್ನು ಮುಟ್ಟಬೇಡಿ. ಸಾರ್ವಜನಿಕ ಸ್ಥಳಗಳಲ್ಲಿ ಇದ್ದಾಗ ಯಾವಾಗಲೂ ಪ್ಲೇನ್ ಗಾಗಲ್ಸ್ ಧರಿಸಿ. ಕಣ್ಣೀರ ಕಣಗಳು ಗಾಳಿಯ ಮೂಲಕ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರವರಗೆ ಹರಡಬಲ್ಲದು* ಗಾಗಲ್ಸ್ ಇದನ್ನು ತಡೆಯುತ್ತದೆ *ಕಂಜಂಕ್ಟಿವೈಟಿಸ್, ಕಣ್ಣು ಉರಿ, ಕಣ್ಣು ಕೆಂಪಾಗುವಿಕೆ ಮುಂತಾದ ಕಣ್ಣಿನ ಯಾವುದೇ ಸಮಸ್ಯೆ ಕಂಡುಬಂದರೂ ಕೂಡಲೇ ವೈದ್ಯರನ್ನು ಕಾಣಬೇಕು ಎಂದು ಸಲಹೆ ನೀಡಲಾಗಿದೆ.