ಕರೋನ ವೈರಸ್ ಬೀತಿ ಹಿನ್ನೆಲೆ; ಶಿಲುಬೆ ಬೆಟ್ಟದಲ್ಲಿ 200 ವರ್ಷಗಳ ಪವಿತ್ರ ಜಾತ್ರೆ ರದ್ದು

ಬೆಂಗಳೂರು,ಮಾ 21, ಬೆಂಗಳೂರಿನ ಉತ್ತರಹಳ್ಳಿ ಹೋಬಳಿಯ ಹರಹಳ್ಳಿ ಶಿಲುಬೆ ಬೆಟ್ಟದಲ್ಲಿ (ಅನ್ನಮ್ಮ ಬೆಟ್ಟ) ಮಾರ್ಚ್  29 ರಂದು  ನಡೆಯಬೇಕಿದ್ದ  ತಪಸ್ಸು ಕಾಲದ 5ನೇ ಭಾನುವಾರದ ಕ್ರಿಸ್ತನ ಯಾತನೆಯ ಪವಿತ್ರ ಯಾತ್ರೆ ಕುರಿತ ಧಾರ್ಮಿಕ ಕಾರ್ಯಕ್ರಮವನ್ನು ಕರೋನ  ವೈರಸ್  ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ.  ಶಿಲುಬೆ ಬೆಟ್ಟದಲ್ಲಿ   ಮಾರ್ಚ್ 29 ರ  ಭಾನುವಾರದಂದು ಬೆಳಗ್ಗೆ 10 ಗಂಟೆಗೆ  ಬೆಂಗಳೂರು ಮಹಾಧರ್ಮಾಧ್ಯಕ್ಷ ಡಾ. ಪೀಟರ್ ಮಚಾದೋ ಮತ್ತು 11.30 ಕ್ಕೆ ಚೆಂಗಲ್ಪೇಟೆ ಧರ್ಮಾಧ್ಯಕ್ಷರಾದ ಪೂಜ್ಯ ನೀತಿನಾದನ್ ಅವರಿಂದ ತಮಿಳಿನಲ್ಲಿ ದಿವ್ಯ ಬಲಿ ಪೂಜೆ, ವಿವಿಧ ಶಿಲುಬೆ ಹಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಇವುಗಳನ್ನು ರದ್ದುಪಡಿಸಲಾಗಿದೆ ಎಂದು ಸೆಂಟ್ ಆ್ಯಂಟೋನಿ ಚರ್ಚ್ ನ ಪಾದರ್ ಎಸ್. ಬಾರ್ತೋಲೊಮಿಯೊ  ತಿಳಿಸಿದ್ದಾರೆ.   ಶಿಲುಬೆ ಬೆಟ್ಟದಲ್ಲಿ ನಡೆಯುವ ಪವಿತ್ರ ಜಾತ್ರೆ ಪ್ರಖ್ಯಾತಿ ಪಡೆದಿದೆ ಈ ಜಾತ್ರೆಗೆ 200 ವರ್ಷಗಳ ಇತಿಹಾಸವಿದ್ದು, ಕರೋನ ವೈರಸ್ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ, ಸಾರ್ವಜನಿಕರು ಸಹಕರಿಸಬೇಕೆಂದು ಸಮಿತಿಯ ಸದಸ್ಯ ಎ. ಮೈಕೆಲ್ ರಾಜ್ ತಿಳಿಸಿದ್ದಾರೆ.