ವಿಜಯಪುರದಲ್ಲಿ ಮೂರನೇ ಬಲಿ ಪಡೆದ ಕೊರೊನಾ

ವಿಜಯಪುರ,  ಮೇ 5,ರಾಜ್ಯದಲ್ಲಿ  ಮಹಾಮಾರಿ ಕೊರೊನಾ ಮಂಗಳವಾರ ಮತ್ತೊಂದು  ಬಲಿ ಪಡೆದಿದ್ದು, ವಿಜಯಪುರ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ ಮೂರಕ್ಕೆ‌  ಏರಿಕೆ ಆಗಿದೆ. ಮಂಗಳವಾರ 640ನೇ ಕೊರೊನಾ ಪೀಡಿತ 62 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ.ಸೋಂಕಿತರು ಈ ಮೊದಲೇ ಮಧುಮೇಹ, ಹೃದಯ ಸಂಬಂಧಿ‌ ಖಾಯಿಲೆಯಿಂದ ಬಳಲುತ್ತಿದ್ದರು.  ರೋಗಿ ಸಂಖ್ಯೆ 228 ಸಂಪರ್ಕದಿಂದ  ಮೃತ ಮಹಿಳೆಗೆ ಸೋಂಕು ತಗುಲಿತ್ತು.ಆಸ್ಪತ್ರೆಯಲ್ಲಿ  ಕ್ವಾರಂಟೈನ್​ನಲ್ಲಿದ್ದ ಮಹಿಳೆಗೆ ಸೋಮವಾರ ಕೊರೊನಾ ಸೋಂಕು ಇರುವುದು ವೈದ್ಯಕೀಯ  ಪರೀಕ್ಷೆಯಿಂದ  ದೃಢಪಟ್ಟಿತ್ತು. ಇಂದು  ಚಿಕಿತ್ಸೆ ಫಲಕಾರಿಯಾಗದೇ ವೃದ್ಧೆ  ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.