ಹಾರೂಗೇರಿಯಿಂದ ಶ್ರೀಶೈಲ ಮಲ್ಲಿಕಾರ್ಜುನ ಯಾತ್ರೆಗೆ ಪಾದಯಾತ್ರೆ
ಹಾರೂಗೇರಿ 13 : ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸುಮಾರು 250ಕ್ಕೂ ಹೆಚ್ಚು ಭಕ್ತರು ಇಲ್ಲಿನ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಿಂದ ಶುಕ್ರವಾರ ಶ್ರೀಶೈಲ ಮಲ್ಲಿಕಾರ್ಜುನ ಯಾತ್ರೆಗೆ ಪಾದಯಾತ್ರೆ ಕೈಗೊಂಡರು. ಬೆಳಿಗ್ಗೆ ದೇವಸ್ಥಾನದಲ್ಲಿ ಪರಮೇಶ್ವರ ಲಿಂಗಕ್ಕೆ ಪೂಜೆ ಸಲ್ಲಿಸಿ ಶ್ರೀಶೈಲಕ ಮಲ್ಲಿಕಾರ್ಜುನ ಸ್ವಾಮಿಯ ಕಂಬಿಗೆ ವಿಶೇಷ ಪೂಜೆ, ಮಹಾ ಮಂಗಳಾರತಿ ನೇರವೇರಿಸಲಾಯಿತು. ಶಿವಾನಂದ ಮಠಪತಿ ಕಂಬಿ ಸ್ವಾಮಿ ವಿರೂಪಾಕ್ಷಿ ಮಠಪತಿ, ದಾನಯ್ಯ ಮಠಪತಿ ಮಲ್ಲಿಕಾರ್ಜುನ ಮಠಪತಿ ಸೋಮಯ್ಯ ಮಠಪತಿ ಪೂಜಾರಿಗಳು ಹಾಗೂ ಭಕ್ತರು ಸಾಮೂಹಿಕವಾಗಿ ಮಲ್ಲಿಕಾರ್ಜುನ ಸ್ವಾಮಿ ಕಂಬಿಗೆ ಭಜನೆ ಶಿವನಾಮಸ್ಮರಣೆ ಭಕ್ತಿ ಗೀತೆಗಳನ್ನು ಹಾಡಿದರು. ಜನತಾ ಬ್ಯಾಂಕ್ ಅಧ್ಯಕ್ಷ ರಾಜಶೇಖರ ಪಾಟೀಲ ಅವರು ಮಲ್ಲಯ್ಯನ ಕಂಬಿಗೆ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಿದರು. ನಂತರ ಇಂಗಳಿ ಬಸವಬ್ಯಾಕೂಡ ಅಲಖನೂರ ಹಿಡಕಲ್ಲ ಉಗಾರ ಗ್ರಾಮಗಳ ಮಲ್ಲಯ್ಯನ ಕಂಬಿಗಳಿಗೆ ಪೂಜೆ ಸಲ್ಲಿಸಲಾಯಿತು. ದಾರಿಯುದ್ದಕ್ಕೂ ಭಕ್ತಾಧಿಗಳಿಗೆ ರಾಗಿ ಅಂಬಲಿ ದ್ರಾಕ್ಷಿ, ಪಾನಕ ಮತ್ತು ಸಿಹಿ ಹಂಚಲಾಯಿತು. ಭಾವೈಕ್ಯತೆ ಮೆರೆದ ಮುಸ್ಲಿಂ ಬಾಂಧವರು : ಪಟ್ಟಣದ ಮಸೀದಿ ಹತ್ತಿರ ಜಾಮೀಯಾ ಮಸೀದಿಯ ಹಿರಿಯರು ಮಲ್ಲಯ್ಯನ ಕಂಬಿಗೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ನಂತರ ಪಾದಯಾತ್ರಿಕರಿಗೆ ತಂಪು ಪಾನೀಯ, ನೀರು ವಿತರಿಸಿ ಭಾವೈಕ್ಯತೆ ಮೆರೆದರು. ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಮಲ್ಲನಗೌಡ ಪಾಟೀಲ ಬಾಳಗೊಂಡ ಪಾಟೀಲ ಕಾಂತು ಬಾಡಗಿ ವಿನಾಯಕ ಮೂಡಸಿ ಶಿವಾನಂದ ಚಿಂಚಲಿ ಪ್ರಕಾಶ ಪಾಟೀಲ ಶಂಕರ ಮಾನಶೆಟ್ಟಿ ಕೆಂಪಣ್ಣ ಗಾಳಿ ಶಿವಲಿಂಗ ಲುಡಬುಡೆ ಈರ್ಪ ಗಾಳಿ ಶಂಕರ ಅಥಣಿ ಪರಗೌಡ ಉಮರಾಣಿ ಶ್ರೀಶೈಲ ಉಮರಾಣಿ ಮಲ್ಲಪ್ಪ ಸವದಿ ಬಾಪುಸಾಬ ಜಮಾದಾರ ದಾನಯ್ಯ ಮಠಪತಿ ವಿಠ್ಠಲ ಚಿಂಚಲಿ ಪರಮೇಶ ಬಾಡಗಿ ಹಾಗೂ ಇನ್ನೂರಕ್ಕೂ ಹೆಚ್ಚು ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.