ಹಮಾಲಿ ಕಾರ್ಮಿಕರ ಯೋಗ ಕ್ಷೇಮ ವಿಚಾರಿಸಿದ-ನಾಟಿಕರ್
ರಾಣೇಬೆನ್ನೂರು 13: ಇಲ್ಲಿನ ಸದರನ್ ರೈಲ್ವೆ ಗೂಡ್ಸ್ ನಲ್ಲಿ ಹಮಾಲಿ ಕೆಲಸ ಮಾಡುವ ಕಾರ್ಮಿಕರ ಸ್ಥಳಕ್ಕೆ ದೀಡೀರ್ ಭೇಟಿ ನೀಡಿದ ಕಾರ್ಮಿಕ ನೀರೀಕ್ಷಕರಾದ ದೇವೇಂದ್ರ ನಾಟಿಕರ್ ಅವರು, ಹಮಾಲಿ ಕಾರ್ಮಿಕರ ಯೋಗ ಕ್ಷೇಮದ ಕುರಿತು ಅವರೊಂದಿಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದರು. ನೀರೀಕ್ಷಕರ ಭೇಟಿಗೂ ಮುನ್ನಾ ಇತ್ತೀಚಿಗಷ್ಟೇ ಇಲ್ಲಿನ ನೂರಾರು ಹಮಾಲಿ ಕಾರ್ಮಿಕರು, ಹುಬ್ಬಳ್ಳಿಯ ಸಹಾಯಕ ಕಾರ್ಮಿಕ ಆಯುಕ್ತರನ್ನು ಭೇಟಿ ಮಾಡಿ, ತಮ್ಮ ಬಹು ವರ್ಷಗಳ ಅಪೇಕ್ಷೆಯಂತೆ , ಶ್ರಮಜೀವಿ ರೈಲ್ವೆ ಗೋಡ್ಸೆಡ್ ಗುತ್ತಿಗೆ ಹಮಾಲಿ ಕಾರ್ಮಿಕರ ಸಂಘವನ್ನ ನೊಂದಣಿ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದರು. ಪರೀಶೀಲಿಸುವ ಭರವಸೆ ನೀರೀಕ್ಷೆಯ ಬೆನ್ನಲ್ಲೇ ಸ್ಥಳೀಯ ಕಾರ್ಮಿಕ ನಿರಿಕ್ಷಕರು ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಕಾರ್ಮಿಕ ನೀರೀಕ್ಷಕರೊಂದಿಗೆ ಕಾರ್ಮಿಕರ ಸಾಧಕ ಮತ್ತು ಭಾದಕ ಸಂಘಟನೆಯ ಅವಶ್ಯಕತೆ ಕುರಿತಂತೆ ವಿವರಿಸಿ ಮಾತನಾಡಿದ, ಸಂಘದ ಅಧ್ಯಕ್ಷ ಜಗದೀಶ್ ಕೆರೋಡಿ ಅವರು, ಪ್ರತಿ ವರ್ಷ ಕೇಂದ್ರ ಸರ್ಕಾರಕ್ಕೆ 200 ಕೋಟಿಗೂ ಅಧಿಕ ವಿವಿಧ ವಾಣಿಜ್ಯ ಆದಾಯವು ಗೂಡ್ಸ್ ಬಾಡಿಗೆ ಮುಖಾಂತರ ಬರುತ್ತಲ್ಲಿದೆ. ಎಂದರು. ರಾಣೇಬೆನ್ನೂರು ರೈಲ್ವೇ ಗೋಡ್ ಶೇಡನಿಂದ್ ಕರ್ನಾಟಕ ರಾಜ್ಯದಲ್ಲಿಯೇ ಅತಿ ಹೆಚ್ಚು ಮೆಕ್ಕೆಜೋಳ ರವಾನೆಯಾಗುವ ಕೇಂದ್ರ ಪ್ರಮುಖ ಸ್ಥಳವಾಗಿದೆ, ಅಲ್ಲದೆ ಪಡಿತರ ಅಕ್ಕಿ, ರಸ ಗೊಬ್ಬರಗಳು ಲೋಡ್ ಆನ್ ಲೋಡ್ ಇಲ್ಲಿಂದ ಮಾಡಲಾಗುತ್ತಿದೆ. ನಾವುಗಳು ಕಳೆದ 1997 ರಿಂದ ಇಲ್ಲಿಯವರೆಗೂ ಒಟ್ಟು 28 ವರ್ಷಗಳಿಂದ ನಿತ್ಯ, ನಿರಂತರ 120ಕ್ಕೂ ಹೆಚ್ಚು ಹಮಾಲಿ ಕಾರ್ಮಿಕರು ಇಲ್ಲಿ ತಮ್ಮ ವೃತ್ತಿ ಸೇವೆ ಸಲ್ಲಿಸುತ್ತಿದ್ದೇವೆ ಎಂದು ನಾಟಿಕರ್ ಅವರಿಗೆ ವಿವರಿಸಿದರು. ಅತ್ಯಂತ ಶ್ರಮಿಶ ವರ್ಗವು ತಾವಾಗಿದ್ದು, ತಾಲೂಕಿನ ಕಾಕೋಳ, ಕಜ್ಜರಿ, ಹೂಳಲು, ಹುಲ್ಲತ್ತಿ, ಬುಡಪನಹಳ್ಳಿ, ಆನ್ವೇರಿ, ನಲವಾಗಲ್, ಸೇರಿದಂತೆ , ವಿವಿಧ ಗ್ರಾಮಾಂತರ ಧಾವಿಸುವ ನಾವುಗಳು ಹಮಾಲಿ ಕಾರ್ಮಿಕರಾಗಿದ್ದೇವೆ. ಶ್ರಮವೇ ದೇಶದ ಪ್ರಗತಿಗೆ ಕಾರಣ, ಸರ್ಕಾರ ಕೇವಲ ರೈಲ್ವೇ ಆದಾಯಕ್ಕೆ ಅದ್ಯೇತೆ ನೀಡಲು ಮುಂದಾಗಬೇಕು.ಪ್ರತಿನಿತ್ಯ ಶ್ರಮವಹಿಸಿ ದುಡಿಯುವ ಈ ಹಮಾಲಿ ಕಾರ್ಮಿಕರಿಗೆ ರೈಲ್ವೆ ಇಲಾಖೆ ಕನಿಷ್ಠ ಸೌಲಭ್ಯಗಳನ್ನು ಸಹಾ ಇಲ್ಲಿಯವರೆಗೂ ನೀಡದಿರುವುದು ಕಾರ್ಮಿಕ ವಿರೋಧಿ ನೀತಿ ಯಾಗುತ್ತದೆ. ಕಾರ್ಮಿಕರ ಕನಿಷ್ಠ ಸೌಲಭ್ಯ ಕಾಯ್ದೆ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಮಾಲಿ ಕಾರ್ಮಿಕರ ಸಾಮಾಜಿಕ ಜೀವನದ ಭದ್ರತೆಗೆ ಆದ್ಯತೆ ನೀಡಬೇಕು ಎಂದು ಮನವಿ ಮೂಲಕ ಕಾರ್ಮಿಕ ನೀರೀಕ್ಷಕರಿಗೆ ವಿವರಿಸಿದರು. ಎಲ್ಲ ವಿಚಾರಗಳನ್ನು ಸೂಕ್ಷ್ಮವಾಗಿ ಕೇಳಿದ ಕಾರ್ಮಿಕ ನೀರೀಕ್ಷಕರು ಸಹಕಾರಾತ್ಮಕವಾಗಿ ಸ್ಪಂದಿಸಿ, ಕಾರ್ಮಿಕರ ಹಿತಾಸಕ್ತಿಗೆ ತಮ್ಮ ಇಲಾಖೆ ಸದಾ ಭದ್ದವಿದೆ, ಕಾನೂನು ಪ್ರಕಾರ ಎಲ್ಲ ರೀತಿಯ ಮೂಲಭೂತ ಸವಲತ್ತುಗಳನ್ನು ಕಲ್ಪಿಸುವಲ್ಲಿ ಮುಂದಾಗುವುದಾಗಿ ಅವರು ಕಾರ್ಮಿಕರಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕಾರ್ಮಿಕ ಪ್ರಮುಖರಾದ ಹುಚ್ಚೆಂಗೆಪ್ಪ ಹೂಳಲು, ಮಲ್ಲಪ್ಪ ಕಂಬಳಿ, ರಮೇಶ್ ಮಾಳಗಿ, ಮಂಜಪ್ಪ ಚಲವಾದಿ, ಚೋಳಪ್ಪ ಕಟಿಗಿ, ಬಸಪ್ಪ ಮರಿಯಮ್ಮನವರ, ಮಲ್ಲೇಶಪ್ಪ ಚಳಗೇರಿ, ಗುತ್ಯಪ್ಪ ಗಾಡಿಯವರ, ಕರಿಯಪ್ಪ ಕಜ್ಜರಿ, ನೆಲವಾಗಲ, ಗಣೇಶ್ ಕಂಬಳಿ, ಮತ್ತಿತರರು ಪಾಲ್ಗೊಂಡಿದ್ದರು.