ಲೋಕದರ್ಶನವರದಿ
ಬ್ಯಾಡಗಿ೦೭ : ಗಜಾನನೋತ್ಸವದ ಅಂಗವಾಗಿ, ಆಂಜನೇಯ ಯುವಕ ಸಂಘ (ರಿ) ಹಾಗೂ ವಿಶ್ವಾಸ ಫೌಂಡೇಶನ್ (ರಿ) ಬ್ಯಾಡಗಿ ಇವರ ಸಂಯುಕ್ತಾಶ್ರಯದಲ್ಲಿ ಸೆ.08ರಂದು ಅಟಲ್ ಬಿಹಾರಿ ವಾಜಪೇಯಿ ರಂಗಮಂದಿರದಲ್ಲಿ ಮುಂಜಾನೆ 11 ಘಂಟೆಗೆ ಭಾರತದ ಯುವವಿಜ್ಙಾನಿ ದ್ರೋಣ್ ಸಂಶೋಧಕ ಪ್ರತಾಪರಿಂದ ಶಾಲಾ ಮಕ್ಕಳಿಗೆ ಹಾಗೂ ಯುವಶಕ್ತಿಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಆದ ಕಾರಣ ವಿದ್ಯಾಥರ್ಿಗಳು ಮತ್ತು ಯುವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಓಂದು ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಆಂಜನೇಯ ಯುವಕ ಸಂಘ (ರಿ) ಹಾಗೂ ವಿಶ್ವಾಸ ಫೌಂಡೇಶನ್ (ರಿ) ಬ್ಯಾಡಗಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.