ಕೊಡಗು ಸಂತ್ರಸ್ತರಿಗೆ ವಿದ್ಯಾಥರ್ಿನಿಯರ ಕೊಡುಗೆ

ಧಾರವಾಡದ ಶ್ರೀಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ ಮಹಿಳಾ ಕಾಲೇಜಿನ ವಿದ್ಯಾಥ ರ್ಿನಿಯರು ಎನ್.ಎಸ್.ಎಸ್. ಘಟಕದ ಮಾರ್ಗದರ್ಶನದ

ಧಾರವಾಡ 17: ಇಲ್ಲಿಯ ಶ್ರೀಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ ಕೆ.ಎಸ್. ಜಿಗಳೂರು ಕಲಾ ಹಾಗೂ ಎಸ್.ಎಂ. ಶೇಷಗಿರಿ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ವಿದ್ಯಾಥರ್ಿನಿಯರು ತಮ್ಮ ಕಾಣಿಕೆಯ ಜೊತೆಗೆ ಕಾಲೇಜಿನ ಬೋಧಕ ಬಳಗ ಹಾಗೂ ಸಾರ್ವಜನಿಕರಿಂದ ಕೊಡಗು ಸಂತ್ರಸ್ತರಿಗೆ ಪರಿಹಾರ ಒದಗಿಸಲು ಒಟ್ಟು 33,571 ರೂ.ಗಳ ನಿಧಿ ಸಂಗ್ರಹಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಮಾ ಮಾಡಿದ್ದಾರೆ.  

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕದ ನೇತೃತ್ವದಲ್ಲಿ ಸಭೆ ಸೇರಿದ ವಿದ್ಯಾಥರ್ಿನಿಯರು ಕಾಲೇಜಿನ ಪ್ರಾಚಾರ್ಯರು ಹಾಗೂ ಎಲ್ಲ ಬೋಧಕ ಬಳಗದ ಮಾರ್ಗದರ್ಶನದಲ್ಲಿ ವಿವಿಧ ತಂಡಗಳನ್ನು ರಚಿಸಿಕೊಂಡು ತಾವೇ ತಯಾರಿಸಿಕೊಂಡ ನಿಧಿ ಸಂಗ್ರಹ ಡಬ್ಬಗಳನ್ನು ಹಿಡಿದುಕೊಂಡು ನಗರವನ್ನು ಸುತ್ತಿದ ವಿದ್ಯಾಥರ್ಿನಿಯರು ಈ ನಿಧಿ ಸಂಗ್ರಹಿಸಿ ತಮ್ಮದೇ ಆದ ಕೊಡುಗೆಯನ್ನು ಕೊಡಗು ಸಂತ್ರಸ್ತರಿಗೆ ನೀಡಿದ್ದಾರೆ.