ನಿರಂತರ ಪ್ರಯತ್ನವೇ ಗೆಲುವಿಗೆ ದಾರಿ: ಕಿರಣ ಕಮತೆ

ನಿರಂತರ ಪ್ರಯತ್ನವೇ ಗೆಲುವಿಗೆ ದಾರಿ: ಕಿರಣ ಕಮತೆ Continuous effort is the way to victory: Kiran Kamath

ಲೋಕದರ್ಶನ ವರದಿ 

ಬೆಳಗಾವಿ 16: ಜೀವನದಲ್ಲಿ ಪ್ರತಿ ಸೋಲು ಒಂದು ಪಾಠವನ್ನು ಕಲಿಸುತ್ತದೆ. ಅದಕ್ಕಾಗಿ ಸೋಲಿನಿಂದ ಹಿಂದೆ ಸರಿಯದೇ ಗೆಲುವಿಗಾಗಿ ನಿರಂತರ ಪ್ರಯತ್ನ ಮಾಡುತ್ತಾ ಗೆಲುವಿದೆ ದಾರಿ ಕಂಡುಕೊಳ್ಳಬೇಕು ಎಂದು ಐ.ಎ.ಎಸ್ ಅಧಿಕಾರಿ ಕಿರಣ ಕಮತೆ ಅವರು ನುಡಿದರು. 

     ಬೆಳಗಾವಿ ನಗರದ ಎಸ್‌.ಕೆ.ಇ ಸಂಸ್ಥೆಯ ಆರ್‌.ಪಿ.ಡಿ ಮಹಾವಿದ್ಯಾಲಯದ 2025-26 ನೇ ಸಾಲಿನ ವಾರ್ಷಿಕ ದಿನಾಚರಣೆ ಹಾಗೂ ಬಹುಮಾನ ವಿತರಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಆರ್‌.ಪಿ.ಡಿ. ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ  ಭರತ ಶಾನಭಾಗ ಅವರು ವಹಿಸಿದ್ದರು.  

      ಶೈಕ್ಷಣಿಕ ಸಾಧನೆ, ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕು. ಸ್ವಾತಿ ಪಾಟೀಲ ಹಾಗೂ ಕು. ಸಕ್ಷಮ ಜಾಧವ ಕಲಾ ವಿಭಾಗದಿಂದ, ಕು. ಚೇತನ ಅಡ್ಡನಗಿ ಹಾಗೂ ವಿಶ್ರಾಂತಿ ನಾಯಕ ವಾಣಿಜ್ಯ ವಿಭಾಗದಿಂದ, ಕು. ಲಕ್ಷಿತಾ ಜಂಗಿದ ಬಿ.ಬಿ.ಎ ವಿಭಾಗದಿಂದ ವರ್ಷದ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಗಳನ್ನು ಪಡೆದುಕೊಂಡರು. ಬಿ.ಡಿ. ಸಬ್ನೀಸ್ ಅವರ ಹೆಸರಿನಲ್ಲಿ ಕೊಡಮಾಡುವ ಸರ್ವಾಗ್ರಣಿ ಪ್ರಶಸ್ತಿಯನ್ನು ಅನುಷ್ಕಾ ಜಾಧವ ಅವರು ಪಡೆದುಕೊಂಡರು.  

       ಕಾರ‌್ಯಕ್ರಮದ ಪಾರಂಭದಲ್ಲಿ ಪ್ರೊ. ಅಕ್ಷಯ ಹಿರೇಮಠ ಪಾರ್ಥನಾ ಗೀತೆ ಹಾಡಿದರು. ಪ್ರಾಚಾರ್ಯರಾದ ಡಾ. ಅಭಯ ಪಾಟೀಲ ಅವರು ಸ್ವಾಗತ ಕೋರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ. ಶೃತಿ ಅವರು ಅತಿಥಿ-ಅಧ್ಯಕ್ಷರನ್ನು ಪರಿಚಯಿಸಿದರು. ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷರಾದ ಪ್ರೊ. ಸುಭಾಷ ಪಾಟೀಲ ವಾರ್ಷಿಕ ವರದಿ ವಾಚನ ಮಾಡಿದರು. ಪ್ರೊ. ರೀಟಾ ಬಣಗಾರ ಅವರು  ಬಹುಮಾನ ವಿತರಣಾ ಕಾರ‌್ಯಕ್ರಮ ನಡೆಸಿಕೊಟ್ಟರು . ಪ್ರೊ. ಶರ್ಮಿಳಾ ಸಂಭಾಜಿ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ‌್ಯಕ್ರಮ ಮುಕ್ತಾಯಗೊಂಡಿತು. ಸಮಾರಂಭದಲ್ಲಿ ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.