ಲೋಕದರ್ಶನವರದಿ
ಮಹಾಲಿಂಗಪೂರ : ಶಿಥಿಲಗೊಂಡು ತೆರವುಗೊಳಿಸಿದ್ದ ಕೇಂದ್ರ ಬಸ್ ನಿಲ್ದಾಣದ ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ತೇರದಾಳ ಮತ ಕ್ಷೇತ್ರದ ಶಾಸಕರಾದ ಸಿದ್ದು ಸವದಿಯವರು ನೆರೆವೇರಿಸಿದರು.
ಬಸ್ ನಿಲ್ದಾಣದ ಆವರಣದಲ್ಲಿ ಶನಿವಾರ ಮಧ್ಯಾಹ್ನ ಭೂಮಿ ಪೂಜೆ ನೆರೆವೇರಿಸಿ ಮಾತನಾಡುತ್ತಿದ್ದ ಅವರು ಸ್ವಚ್ಛ ಸುಂದರವಾದ ಬಸ್ಸ ನಿಲ್ದಾಣದ ಪುನರ್ ನಿಮರ್ಾಣಕ್ಕೆ 02 ಕೋಟಿ ಹಣವನ್ನು ನೀಡಲು ಸರಕಾರಕ್ಕೆ ಕೇಳಲಾಗಿತ್ತು.
ಆದರೆ 01 ಕೋಟಿ ಮಂಜೂರಾಗಿದೆ.ಇನ್ನಷ್ಟು ಅನುದಾನಕ್ಕೆ ಪತ್ರವನ್ನೂ ಬರೆಯಲಾಗಿದೆ ಆ ಹಣ ಬಂದ ತರುವಾಯ ಕಾಮಗಾರಿಗೆ ಬಳಸಿಕ್ಕೊಂಡು ನಿಲ್ದಾಣದ ಅಂದ ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ಈಗಲೇ ಐದಾರು ತಿಂಗಳುಗಳ ಹಿಂದೆ ಶಿಥಿಲಗೊಂಡ ಬಸ್ಸ್ ನಿಲ್ದಾಣದ ಸಂಪೂರ್ಣ ವಿವರವನ್ನು ಲೋಕದರ್ಶನ ಪತ್ರಿಕೆಯಲ್ಲಿ ವರದಿ ಮಾಡಲಾಗಿತ್ತು.
ವರದಿಗೆ ಎಚ್ಚೆತ್ತ ಸಾರಿಗೆ ಇಲಾಖೆ ಅಧಿಕಾರಿಗಳು ಕ್ರಮಕೈಗೊಂಡು ಶಿಥಿಲಗೊಂಡ ಬಸ್ಸ್ ನಿಲ್ದಾಣದ ಕಟ್ಟಡವನ್ನು ತೆರವುಗೊಳಿಸಿದ್ದರು.
ನಮ್ಮೂರಿಗೂ ಎಲ್ಲ ಸೌಲಭ್ಯಗಳನ್ನುಳ್ಳ ಹೊಸ ಬಸ್ಸ್ ನಿಲ್ದಾಣವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಜನ ಬೇಗ ಕಾಮಗಾರಿ ಆರಂಭಗೊಳ್ಳದೆ ಇಲಾಖೆಯ ಕೆಲವೊಂದು ತಾಂತ್ರಿಕ ವಿಷಯಗಳಿಂದ ನೆನೆಗುದಿಗೆ ಬಿದ್ದಿತ್ತು.
ಈ ವಿಳಂಬ ಕಾರಣದಿಂದ ಪ್ರಯಾಣಿಕರು ಮೇಲೆ ಕೆಳಗೆ ಆಸರೆಯಿಲ್ಲದೆ ಗಾಳಿ, ಮಳೆ, ಬಿಸಿಲಿಗೆ ಪರಿತಪಿಸಬೇಕಾಯಿತು.
ಕೊನೆಗೂ ಶಾಸಕರಿಂದ ನಿಲ್ದಾಣದ ಭೂಮಿ ಪೂಜೆ ಮಾಡುವದರೊಂದಿಗೆ ಶಂಕುಸ್ಥಾಪನೆಯನ್ನು ನೆರೆವೇರಿಸಿದ್ದಾರೆ. ಇದರಿಂದ ನಗರದ ಜನತೆ ಹಾಗೂ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿ ಬೇಗ ಕಾಮಗಾರಿ ಮುಗಿಸಲು ಶುಭ ಹಾರೈಸಿ ನೂತನ ಕಟ್ಟಡವನ್ನು ಕಣ್ತುಂಬಿಕ್ಕೊಳ್ಳಲು ಕಾತರರಾಗಿದ್ದಾರೆ.
ಬಿಜೆಪಿ ಗ್ರಾಮೀಣ ಘ.ಅಧ್ಯಕ್ಷ ಬಸನಗೌಡ ಪಾಟೀಲ, ನಗರ ಘಟಕ ಅಧ್ಯಕ್ಷ ಮಹಾಲಿಂಗಪ್ಪ ಕುಳ್ಳೋಳಿ, ಅಶೋಕಗೌಡ ಪಾಟೀಲ, ಪು.ಸದಸ್ಯರಾದ ಮಹಾಲಿಂಗಪ್ಪ ಕೋಳಿಗುಡ್ಡ, ಶೇಖರ ಅಂಗಡಿ,ರವಿ ಜವಳಗಿ, ಚನಬಸು ಯರಗಟ್ಟಿ, ಚನಬಸು ಹುರಕಡ್ಲಿ, ಚನ್ನಪ್ಪ ರಾಮೋಜಿ, ಬಸವರಾಜ ಹಿಟ್ಟಿನಮಠ, ರಾಜು ಚಮಕೇರಿ, ಶಂಕರಗೌಡ ಪಾಟೀಲ, ಮುಖಂಡರಾದ ಜಿ.ಎಸ್.ಗೊಂಬಿ, ಜಮೀರ ಯಕ್ಸಂಬಿ, ಪ್ರಶಾಂತ ಮುಕ್ಖೆನ್ನವರ ಸಿದ್ದಪ್ಪ ಶಿರೋಳ, ಬಸವರಾಜ ಗಿರಿಸಾಗರ, ಹಣ್ಮಂತ ಜಮಾದಾರ, ಹಣ್ಮಂತ ಬುರುಡ, ಗುತ್ತಿಗೇದಾರ ಹಿರೇಮಠ ಮುಂತಾದವರಿದ್ದರು.