ಬೆಟಗೇರಿ 01: ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಗ್ರಾಮದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸ ಕೈಗೊಳ್ಳಲಾಗಿದೆ. ಸ್ಥಳೀಯರಿಗೆ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಪಂ ನೂತನ ಅಧ್ಯಕ್ಷ ಈಶ್ವರ ಬಳಿಗಾರ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಸೋಮವಾರ ಸೆ.30 ರಂದು ಬೆಟಗೇರಿ-ಮಮದಾಪೂರ ಮುಖ್ಯ ರಸ್ತೆಯಿಂದ ಗ್ರಾಮದ ಹಳ್ಳದ ತನಕ ರಸ್ತೆ ಸಮತಟ್ಟು, ಸಿಮೆಂಟ ಕಾಂಕ್ರೇಟ್ ಹಾಕಿ ರಸ್ತೆ ನಿರ್ಮಾಣ ಮಾಡುವ ಕಾಮಗಾರಿ ವಿಕ್ಷೇಣೆ ಮಾಡಿ ಮಾತನಾಡಿ, ಸರಕಾರ ವಿವಿಧ ಯೋಜನೆಗಳ ಅನುದಾನದಡಿಯಲ್ಲಿ ವಿವಿಡಿ ಸರ್ಕಾರಿ ಪ್ರೌಢ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಹೆಣ್ಣು ಮಕ್ಕಳ ಶಾಲೆ ಹಾಗೂ ಬಿಸಿಎಮ್ ಹಾಸ್ಟೆಲ್ ಆವರಣ ಸಮತಟ್ಟು, ಫೇವರ್ಸ್ ಕಲ್ಲು ಜೋಡಣೆ ಸೇರಿದಂತೆ ಗ್ರಾಮದಲ್ಲಿ ಈಗ ಸುಮಾರು 50 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿವೆ ಎಂದರು.
ಸ್ಥಳೀಯ ಗ್ರಾಮ ಪಂಚಾಯತ ಸಹಯೋಗದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುದಾನದಡಿಯಲ್ಲಿ ಸುಮಾರು 4.80 ಲಕ್ಷ ರೂಪಾಯಿಗಳ ಅಧಿಕ ವೆಚ್ಚದಲ್ಲಿ ಇಲ್ಲಿಯ ಬೆಟಗೇರಿ-ಮಮದಾಪೂರ ಮುಖ್ಯ ರಸ್ತೆಯಿಂದ ಗ್ರಾಮದ ಹಳ್ಳದ ತನಕ ರಸ್ತೆ ಸಮತಟ್ಟು, ಸಿಮೆಂಟ ಕಾಂಕ್ರೇಟ್ ಹಾಕಿ ರಸ್ತೆ ನಿರ್ಮಾಣ ಮಾಡುವ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಗ್ರಾಪಂ ಪಿಡಿಒ ಬಿ.ಎಫ್.ದಳವಾಯಿ ತಿಳಿಸಿದರು. ಈ ವೇಳೆ ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ತಾಪಂ ಮಾಜಿ ಸದಸ್ಯ ಬಸವಂತ ಕೋಣಿ, ಪುಂಡಲೀಕಪ್ಪ ಪಾರ್ವತೇರ, ಬಸನಗೌಡ ದೇಯಣ್ಣವರ, ಗ್ರಾಪಂ ಕಾರ್ಯದರ್ಶಿ ಗೌಡಪ್ಪ ಮಾಳೇದ, ಕಾಕ್ರ್ಲ ಸುರೇಶ ಬಾಣಸಿ, ವಿಠಲ ಚಂದರಗಿ, ಮಾರುತಿ ಬಣಜಿಗೇರ ಸೇರಿದಂತೆ ಸ್ಥಳೀಯ ಗ್ರಾಮಸ್ಥರು, ಇತರರು ಇದ್ದರು.