ಲೋಕದರ್ಶನ ವರದಿ
ಮೂಡಲಗಿ 26: ಇಲ್ಲಿಯ ಶ್ರೀ ಶ್ರೀನಿವಾಸ ಸ್ಕೂಲ್ಸನಲ್ಲಿ ಇಂದು ಸಂವಿಧಾನ ದಿನಾಚರಣೆಯ ಪ್ರಯುಕ್ತವಾಗಿ ಕಾನೂನು ಸಾಕ್ಷರತಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಜೆಎಮ್ಎಫ್ಸಿ ಮೂಡಲಗಿಯ ಸಿವಿಲ್ ನ್ಯಾಯಾಧೀಶ ಸುರೇಶ ಎಸ್.ಎನ್., ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಕಾನೂನು ಸಾಕ್ಷರತಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಭಾರತದ ಸಂವಿಧಾನ ರಚನೆಯಲ್ಲಿ ತೊಡಗಿಕೊಂಡ ಮಹನೀಯರನ್ನು ಸ್ಮರಿಸಿದರು. ವಿದ್ಯಾರ್ಥಿಗಳಿಗೆ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಕುರಿತು ತಿಳಿಹೇಳಿದರು.
ವಿಶೇಷ ಉಪನ್ಯಾಸ ನೀಡಿದ ವಕೀಲರುಗಳಾದ ಎಮ್ ಐ ಬಡಿಗೇರ ಹಾಗೂ ಬಿ. ಎನ್ ಸಣ್ಣಕ್ಕಿ ವಿದ್ಯಾರ್ಥಿಗಳಿಗೆ ಕಾನೂನು ಹಾಗೂ ಸಂವಿಧಾನದ ಕುರಿತು ವಿವರಿಸಿದರು. ಮೊಬೈಲ್, ಅಂತಜರ್ಾಲ ಹಾಗೂ ಅಪ್ರಾಪ್ತರು ವಾಹನ ಚಾಲನೆ ಮಾಡುವುದರಿಂದಾಗುವ ದುಷ್ಪರಿಣಾಮಗಳನ್ನು ವಿವರಿಸಿದರು.
ವಿದ್ಯಾರ್ಥಿ ರಮೇಶ ಬಡಗನ್ನವರ ಭಾರತದ ಸಂವಿಧಾನದ ಮಹತ್ವವನ್ನು ಕುರಿತು ಮಾತನಾಡಿದರು.
ಕೆ.ಪಿ. ಮಗದುಮ, ಎಸ್.ವೈ. ಹೊಸಟ್ಟಿ, ಡಿ ಎಸ್ ರೊಡ್ಡನ್ನವರ, ವಿ.ಕೆ. ಪಾಟೀಲ, ಕೆ.ಎಲ್ ಹುಣಿಶ್ಯಾಳ, ವಿ.ವಿ. ನಾಯ್ಕ, ಎ.ಎಚ್. ಗೊಡ್ಯಾಗೋಳ ಅತಿಥಿಗಳಾಗಿದ್ದರು. ಶಾಲೆಯ ಪ್ರಾಚಾರ್ಯರಾದ ಮನೋಜ ಭಟ್ ಅಧ್ಯಕ್ಷತೆವಹಿಸಿದ್ದರು. ಶರ್ಮಿಳಾ ಪ್ರಾರ್ಥನಾಗೀತೆ ಹಾಡಿದರು. ಕು. ಕಾವ್ಯಾ ಸ್ವಾಗತಿಸಿದರು. ಕು. ಚಂದ್ರಿಕಾ ನಿರೂಪಿಸಿದರು.
ತಾಲೂಕು ಕಾನೂನು ಸಮಿತಿ, ವಕೀಲರ ಸಂಘದ ವಿವಿಧ ಪದಾಧಿಕಾರಿಗಳು, ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.