ಸತತ ಸುರಿಯುತ್ತಿರುವ ಮಳೆ: ಕೋಳಿವಾಡ ಭೇಟಿ, ಸಾಂತ್ವನ

ಲೋಕದರ್ಶನವರದಿ

ರಾಣೇಬೆನ್ನೂರು09: ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ವಿವಿಧ ಗ್ರಾಮಗಳಿಗೆ ತುಂಗಭದ್ರ ಹಾಗೂ ಕುಮದ್ವತಿ ನದಿಗಳು ಅಪಾಯ ಮಟ್ಟ ಮೀರಿ ಹರಿದು ಕೆಲುವ ಗ್ರಾಮಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ಥಗೊಂಡಂತಾಗಿದೆ. ಪ್ರವಾಹದ ಭೀತಿಯಿಂದಾಗಿ ಜನರು ಆತಂಕಕ್ಕೀಡಾಗಿದ್ದಾರೆ. ಅವರಿಗೆ ಧೈರ್ಯ ತುಂಬಬೇಕಾಗಿದೆ ಎಂದು ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದರು.

     ಶುಕ್ರವಾರ ತಾಲೂಕಿನ ಲಿಂಗದಹಳ್ಳಿ ಗ್ರಾಮದ ಕುಮದ್ವತಿ ನದಿಯ ನೀರು ಬೆಳೆಗೆ ನುಗ್ಗಿ ಜಮೀನು ಜಲಾವೃತಗೊಂಡ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ರೈತರಂತೂ ಬೆಳೆಯ ಹಾನಿಯಿಂದ ದಿಕ್ಕುತೋಚದಂತಾಗಿ ಸಂಕಷ್ಟವನ್ನು ಎದುರಿಸುವಂತಾಗಿದೆ ಎಂದರು.

    ನದಿ ನೀರಿನ ಪ್ರವಾಹದಿಂದಾಗಿ ಸಾವಿರಾರು ಹೆಕ್ಟರನಷ್ಟು ಜಮೀನು ಜಲಾವೃತಗೊಂಡಿವೆ. ಅಲ್ಲದೆ ನೂರಾರು ಮನೆಗಳು ಭಾಗಶಃ ಹಾಗೂ ಸಂಪೂರ್ಣ ಹಾನಿಯಾಗಿವೆ. ಸಕರ್ಾರ ಸಂತ್ರಸ್ತರ ನೆರವಿಗೆ ಬರಬೇಕು, ಅವರಿಗೆ ಪರಿಹಾರವನ್ನು ತಕ್ಷಣ ನೀಡಬೇಕು ಎಂದು ಒತ್ತಾಯಿಸುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ತಾಲೂಕಿನ ತುಂಗಭದ್ರ ಹಾಗೂ ಕುಮದ್ವತಿ ನದಿ ತೀರದ ಗ್ರಾಮಗಳಾದ ನಂದೀಹಳ್ಳಿ, ಯಲಬಡಗಿ, ಗೋಡಿಹಾಳ, ನಿಟ್ಟೂರು, ಕುಪ್ಪೇಲೂರು, ತುಮ್ಮಿನಕಟ್ಟಿ, ಕುಸಗಟ್ಟಿ, ಪತ್ತೇಪುರ, ನಿಟುವಳ್ಳಿ, ಕೋಟಿಹಾಳ, ಹೊಳೆಆನ್ವೇರಿ, ಮುಷ್ಟೂರು, ಮುದೇನೂರು, ನಾಗೇನಹಳ್ಳಿ, ಮಾಕನೂರು ಗ್ರಾಮಗಳಿಗೆ ಬೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಸ್ಯೆಗಳ ಕುರಿತು ಚಚರ್ೆ ನಡೆಸಿದ ಅವರು ಯಾವುದೇ ಕಾರಣಕ್ಕೂ ಎದೆಗುಂದಬಾರದು.        ಸಮಸ್ಯೆಗಳಿಗೆ ಪರಿಹಾರ ಇದ್ದೇ ಇರುತ್ತದೆ. ಪ್ರಕೃತಿಯ ಮುಂದೆ ಯಾರೂ ದೊಡ್ಡವರಲ್ಲ. ಜಿಲ್ಲಾ ಮತ್ತು ತಾಲೂಕಾಡಳಿತವು ನಿಮ್ಮ ಜೊತೆ ಇರುತ್ತದೆ.

   ನಿರಾಶ್ರಿತ ಜನರಿಗೆ ಗಂಜಿ ಕೇಂದ್ರಗಳನ್ನು ತೆರೆದು ತಾತ್ಕಾಲಿಕ ವ್ಯವಸ್ಥೆ ಮಾಡಲು ಅಧಿಕಾರಿಗಳಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದರು.