ಗುರಿ ಸಾಧನೆಗಾಗಿ ಸತತ ಪ್ರಯತ್ನ ಅವಶ್ಯಕ

ಲೋಕದರ್ಶನ ವರದಿ

ಚನ್ನಮ್ಮನ ಕಿತ್ತೂರು 17: ಪ್ರಸ್ತುತ ದಿನಗಳಲ್ಲಿ ಬಾಲಾಪರಾಧಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿರುವದು ಕಳವಳಕಾರಿಯಾಗಿದೆ.ಇದಕ್ಕೆ ಪ್ರಮುಖ ಕಾರಣ ಅವರಿಗೆ ಕಾನೂನುಗಳ ತಿಳುವಳಿಕೆಗಳ ಕೊರತೆ. ಆದ್ದರಿಂದ ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಕಾನೂಗಳ ಪಾಲನೆಯ ಮಹತ್ವ ತಿಳಿಸಿಕೊಡಬೇಕೆಂದು ಹುಬ್ಬಳ್ಳಿಯ ಸಿವಿಲ್ ನ್ಯಾಯಾಧೀಶರಾದ  ಸಂಜಯ ಗುಡಗುಡಿ ಮನವಿ ಮಾಡಿದರು.

ಸ್ಥಳೀಯ ಕಲ್ಮಠದ ರಾಜಗುರು ಕಾನ್ವೆಂಟ್ ಶಾಲೆಯ ವಾರ್ಷಿಕ ದಿನಾಚರಣೆಯ ನಿಮಿತ್ತವಾಗಿ ರವಿವಾರ ನಡೆದ ಮಕ್ಕಳ ಹಬ್ಬವನ್ನು ದೀಪ ಬೆಳಗಿಸುವದರ ಮೂಲಕ ಉದ್ಘಾಟಿಸಿ ಮಾತನಾಡಿ ಪೂಜ್ಯರ ನೇತೃತ್ವದಲ್ಲಿ ನಡೆಯುತ್ತಿರುವ ಈ ಶಾಲೆಯು ಮಕ್ಕಳಲ್ಲಿ ಉತ್ತಮ ಸಂಸ್ಕೃತಿ, ಆಧ್ಯಾತ್ಮಿಕತೆ, ನೈತಿಕತೆ ಬೆಳೆಸುವದರ ಮೂಲಕ ಶಿಕ್ಷಣ ನೀಡಲು ಗಮನ ಹರಿಸಬೇಕೆಂದು ತಿಳಿಸಿದರು.     

  ರಾಜಗುರು ಸಂಸ್ಥಾನ ಕಲ್ಮಠದ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಮಕ್ಕಳು ನಿರ್ಧಿಷ್ಟ ಗುರಿ ಹೊಂದಿ ಆ ಗುರಿ ಸಾಧನೆಗಾಗಿ ಸತತ ಪ್ರಯತ್ನ ಮತ್ತು ಪರಿಶ್ರಮ ಗಳನ್ನು ಮಾಡುವದಾಗಬೇಕೆಂದು ಹಾರೈಸಿದರು. 

    ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಆಧ್ಯಕ್ಷ  ಮುಖ್ತಾರಹುಸೇನ್ ಪಠಾಣ  ಮಾತನಾಡಿ ವಾಷರ್ಿಕ ದಿನಾಚರಣೆಯನ್ನು ಮಕ್ಕಳ ಹಬ್ಬವನ್ನಾಗಿ ಆಚರಿಸುತ್ತಿರುವದಕ್ಕೆ ಹರ್ಷ ವ್ಯಕ್ತ ಪಡಿಸಿದರು. ವಿಶ್ರಾಂತ ಪ್ರಾಚಾರ್ಯರಾದ ಡಾ.ಎಸ್.ಬಿ.ದಳವಾಯಿ ಆದರ್ಶ ವಿದ್ಯಾಥರ್ಿ ಮತ್ತು ಆದರ್ಶ ವಿದ್ಯಾರ್ಥಿನಿ ಗಳಿಗೆ ನಗದು ಬಹುಮಾನ ನೀಡಿ ಶುಭ ಕೋರುವದರ ಜೊತೆಗೆ ಆದರ್ಶ ಶಿಕ್ಷಕರನ್ನು ವಿದ್ಯಾರ್ಥಿಗಳ ಮೂಲಕ ಆಯ್ಕೆ ಮಾಡಿರುವದಕ್ಕೆ ಶಾಲಾ ಮುಖ್ಯಸ್ಥರನ್ನು ಅಭಿನಂದಿಸಿದರು. ಪಠ್ಯ ಮತ್ತು ಸಹ ಪಠ್ಯ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಇಕ್ರಾ ಹೊನ್ನಾಪೂರ ಮತ್ತು ಸಾಗರ ಹೊಸಮನಿ ಆದರ್ಶ ವಿದ್ಯಾರ್ಥಿಗಳಾಗಿ, ಲಕ್ಷ್ಮೀ ಸುಗಂಧಿ ಮತ್ತು ಮಹಾದೇವಿ ಬೆಳವಡಿ ಆದರ್ಶ ಶಿಕ್ಷಕಿಯರಾಗಿ ಸನ್ಮಾನ ಸ್ವೀಕರಿಸಿದರು.

  ನ್ಯಾಯಾಧೀಶರಾದ  ಸಂಜಯ ಗುಡಗುಡಿ,ಕಿತ್ತೂರ ನ್ಯಾಯಧೀಶರಾದ  ಆಕರ್ಷ ಎಂ, ನಿಗಮ ಮಂಡಳಿ ಅಧ್ಯಕ್ಷ ರಾದ  ಮುಖ್ತಾರಹುಸೇನ್ ಪಠಾಣ. ನಿವೃತ್ತ ಹೆಚ್ಚುವರಿ ಜಿಲ್ಲಾಧಿಕಾರಿ  ಬಡಬಡೆ, ಚಲನಚಿತ್ರ ನಟಿ ಶ್ವೇತಾ ಕಲ್ಮಠ  ಮತ್ತು ಆಡಳಿತ ಮಂಡಳಿಯವರನ್ನು ಶ್ರೀಗಳು ಸನ್ಮಾನಿಸಿದರು.ವೇದಿಕೆಯ ಮೇಲೆ  ಗಂಗಣ್ಣ ಕರೀಕಟ್ಟಿ, ಎಸ್.ಎಸ್.ನರಸಣ್ಣವರ, ಡಾ.ಎಸ್.ಬಿ.ದಳವಾಯಿ, ಎಲ್.ಜಿ.ಪಾಟೀಲ ಮತ್ತು ವಿಜಯ ಮಹಾಂತ ದೇವರು ಉಪಸ್ಥಿತರಿದ್ದರು.

  ಶಾಲಾ ಮಕ್ಕಳು ತಮ್ಮ ಅಜ್ಜ ಅಜ್ಜಿಯರ ಜೊತೆ "ಅಜ್ಜ ಆಲದ ಮರ, ಅಜ್ಜಿ ಮಾವಿನ ಮರ" ಎಂಬ ನೃತ್ಯ ಮಾಡಿದ್ದು ಎಲ್ಲರಿಂದ ಪ್ರಶಂಸಿಸಲ್ಪಟ್ಟಿತು. 

  ಮುಖ್ಯಾಧ್ಯಾಪಕಿ ಲಕ್ಷ್ಮೀ ಲಂಗೋಟಿ ಸ್ವಾಗತಿಸಿದರು. ಲಕ್ಷ್ಮೀ ತುರಮಂದಿ ವಂದಿಸಿದರು. ರಾಜೇಶ್ವರಿ ಕಳಸಣ್ಣವರ ನಿರೂಪಿಸಿದರು. ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮಗಳು ಜರುಗಿದವು.