ಕಾಗರ್ಿಲ್ ವಿಜಯೋತ್ಸವ ಹಾಗೂ ಶಾಸಕರಿಗೆ ಸತ್ಕಾರ.

ತಾಲೂಕಾ ಅಂಜುನ್ ಪ್ರೌಢಶಾಲೆಯ ಕಾಗರ್ಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಸತ್ಕರಿಸಲಾಯಿ


ರಾಮದುರ್ಗ: ಪ್ರತಿಯೊಂದು ಮಗುವಿನಲ್ಲಿ ದೇಶಾಭಿಮಾನ ಬೆಳೆಸಿ, ಪೋಷಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಅದನ್ನರಿತು ಶಿಕ್ಷಕರು ಮಕ್ಕಳಲ್ಲಿ ಸುಸಂಸ್ಕೃತಿ ಬೆಳೆಸುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಶಾಸಕ ಮಹಾದೇವಪ್ಪ ಯಾದವಾಡ ಕರೆ ನೀಡಿದರು.

ಪಟ್ಟಣದ ತಾಲೂಕಾ ಅಂಜುಮನ್ ಪ್ರೌಢಶಾಲೆಯಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡ ಕಾಗರ್ಿಲ್ ವಿಜಯೋತ್ಸವ ಹಾಗೂ ಸತ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರತಿಯೊಂದು ಮಗು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪಾಲಕರು ಹಾಗೂ ಶಿಕ್ಷಕ ಮೇಲಿದೆ. ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ಶಾಲೆಯ ಪ್ರಗತಿಗೆ ಪೂರಕವಾದ ಯೋಜನೆಗಳನ್ನು ಹಾಕಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುಂತಾಗಲು ಶ್ರಮಿಸಿದಾಗ ಮಾತ್ರ ಸಂಸ್ಥೆಯ ಪ್ರಗತಿ ಸಾಧ್ಯವೆಂದರು.

ಶಾಲಾ ಮುಖ್ಯೋಪಾಧ್ಯಾಯ ಡಿ. ಬಿ. ಬಾಣಿ ಮಾತನಾಡಿ, ದೇಶ ಕಾಯುವ ಸೈನಿಕರಿಂದಲೇ ಇಂದು ನಾವೆಲ್ಲರೂ ನೆಮ್ಮದಿಯಿಂದ ಬದುಕುವಂತಾಗಿದೆ. ಅವರಿಗೆ ಗೌರವ ಸಮಪರ್ಿಸುವುದು ಪ್ರತಿಯೊಬ್ಬರ ಕರ್ತವ್ಯ. ಆ ನಿಟ್ಟಿನಲ್ಲಿ ವಿದ್ಯಾಥರ್ಿಗಳು ದೇಶಾಭಿಮಾನ ಬೆಳೆಸಿಕೊಳ್ಳಬೇಕೆಂದರು.

ಇದೇ ಸಂದರ್ಭದಲ್ಲಿ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಸಂಸ್ಥೆಯ ಪರವಾಗಿ ಸತ್ಕರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಎಂ. ಐ. ಶಿರಗಾಪೂರ ಕಾರ್ಯದಶರ್ಿ ಬಿ. ಆರ್. ಬೈರಕದಾರ ಸೇರಿದಂತೆ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ಶಿಕ್ಷಕಿ ಎಸ್. ವ್ಹಿ. ಸರಕಾಜಿ ನಿರೂಪಿಸಿದರು. ಶಿಕ್ಷಕ ಎಚ್. ಎಚ್. ಧಾರವಾಡ ವಂದಿಸಿದರು.