ಕಂಪ್ಲಿ: ಪೌರ ಕಾಮರ್ಿಕರ ದಿನಾಚರಣೆ

ಲೋಕದರ್ಶನ ವರದಿ

ಕಂಪ್ಲಿ: ಪೌರ ಕಾಮರ್ಿಕರ ದಿನಾಚರಣೆ ಪ್ರಯುಕ್ತ ತಾಲೂಕಿನಲ್ಲಿ ಪೌರ ಕಾಮರ್ಿಕರ ಮೆರವಣಿಗೆ ಮೂಲಕ ಪಟ್ಟಣದಲ್ಲಿ ಸಾಗಿ, ಪುರಸಭೆ ಆವರಣದಲ್ಲಿ ಸಮಾವೇಶಗೊಂಡ ನಂತರ ಕಾರ್ಯಕ್ರಮ ಸೋಮವಾರ ನಡೆಸಲಾಯಿತು.  

   ಪುರಸಭೆ ಅಧ್ಯಕ್ಷ ಎಂ.ಸುಧೀರ್ ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಮಾತನಾಡಿ, ಪೌರ ಕಾಮರ್ಿಕರ ಶ್ರಮದಿಂದ ಕಂಪ್ಲಿಯಲ್ಲಿ ಸ್ವಚ್ಚತೆ ಕಾಣಲಾಗಿದೆ. ಪೌರ ಕಾಮರ್ಿಕರು ಸ್ವಚ್ಚತೆ ಮಾಡುವ ಸಂದರ್ಭದಲ್ಲಿ ಸ್ವಚ್ಚತಾ ಸಾಮಾಗ್ರಿಗಳನ್ನು ಅಳವಡಿಸಿಕೊಳ್ಳಬೇಕು. ಪೌರ ಕಾಮರ್ಿಕರಿಗೆ ನಿವೇಶನ ರಹಿತ ಮನೆ ನೀಡುವ ಭರವಸೆ ನೀಡಿದರು. 

     ಮುಖ್ಯಾಧಿಕಾರಿ ವೆಂಕಟೇಶ್ ಮಾತನಾಡಿ, ಪೌರ ಕಾಮರ್ಿಕರು ಸಕರ್ಾರದ ಸೌಲಭ್ಯಗಳೊಂದಿಗೆ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ಕೊಡಿಸಬೇಕು. ಬಾಕಿ ವೇತನ ಮುಂಜೂರಾತಿಯ ಭರವಸೆ ವ್ಯಕ್ತಪಡಿಸಿದರು.

       ಇದೇ ಸಂದರ್ಭದಲ್ಲಿ ಪೌರ ಕಾಮರ್ಿಕರಾದ ಯಂಕಮ್ಮ, ನಾಗಮ್ಮ, ಕುಲಯಪ್ಪ, ಗಂಗಪ್ಪಗೆ ಸನ್ಮಾನಿಸಿ ಗೌರವಿಸಲಾಯಿತು. ಕ್ರೀಡೆಗಳಲ್ಲಿ ವಿಜೇತರಾದ ಪೌರ ಕಾಮರ್ಿಕರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪೌರ ಕಾಮರ್ಿಕರಿಗೆ ಸುರಕ್ಷತೆ ಹಾಗೂ ಸ್ವಚ್ಚತೆ ಕೆಲಸದ ಸಾಮಾಗ್ರಿಗಳನ್ನು ವಿತರಿಸಿದರು.

     ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಭಟ್ಟ ಪ್ರಸಾದ್, ವಿ.ಎಲ್.ಬಾಬು, ಎನ್.ರಾಮಂಜಿನೀಯಲು, ಸಣ್ಣ ಹುಲುಗಪ್ಪ, ಪೌರ ಸೇವಾ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ವೆಂಕೋಬ, ವ್ಯವಸ್ಥಾಪಕಿ ತಿರುಮಲ, ಪರಿಸರ ಅಭಿಯಂತರ ಜಿ.ಆರತಿ, ಆರೋಗ್ಯ ನಿರೀಕ್ಷಕರಾದ ಸಿ.ಫಕೃದ್ದೀನ್, ರಾಧಿಕಾ, ಮುಖಂಡರಾದ ಪಿ.ಬ್ರಹ್ಮಯ್ಯ, ಬೂದಗುಂಪಿ ಹುಸೇನ್ಸಾಬ್ ಸೇರಿ ಸಿಬ್ಬಂದಿಗಳು ಹಾಗೂ ಪೌರ ಕಾಮರ್ಿಕರು ಪಾಲ್ಗೊಂಡಿದ್ದರು.