ಕಂಪ್ಲಿ: ಮತದಾರರ ಪಟ್ಟಿ ಪರಿಷ್ಕರಣೆ ಸಭೆ

ಲೋಕದರ್ಶನ ವರದಿ

ಕಂಪ್ಲಿ 18: ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಸೇರಿ ಯಾವುದೇ ತಪ್ಪಿಲ್ಲದಂತೆ ಸೂಕ್ತ ನಿಗಾವಹಿಸುವಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು(ಬಿಎಲ್ಒ)ಜಾಗೃತಿ ತೋರಬೇಕು. ಚುನಾವಣಾ ಕಾರ್ಯಗಳನ್ನು ಉದಾಸೀನಾ ತೋರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಚುನಾವಣಾಧಿಕಾರಿ ಸಿ.ಶ್ರೀಧರ ಎಚ್ಚರಿಕೆ ನೀಡಿದರು. 

ಪುರಸಭೆ ಮತ್ತು ಎಪಿಎಂಸಿಯ ಗಾಯತ್ರಿ ಯೋಗಾ ಕೇಂದ್ರದ ಕಟ್ಟೆಯ ಮೇಲೆ ಹಮ್ಮಿಕೊಂಡ ಮತದಾರರ ಪಟ್ಟಿ ಪರಿಷ್ಕರಣೆ ಸಭೆಯ ನೇತೃತ್ವವಹಿಸಿ ಮಾತನಾಡಿ, ಮತಗಟ್ಟೆ ಮಟ್ಟದ ಅಧಿಕಾರಿಗಳು ಮತದಾರರ ಪಟ್ಟಿ ಪರಿಷ್ಕರಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಶಿಸ್ತು ಮತ್ತು ಸಮಯಪ್ರಜ್ಞೆಯಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಮತಗಟ್ಟೆಯಲ್ಲಿ ಚುನಾವಣಾ ಆಯೋಗ ಸೂಚಿಸಿದ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಯಾವುದೇ ಸಂಶಯ, ಗೊಂದಲಗಳಿದ್ದಲ್ಲಿ ಕೂಡಲೇ ಮೇಲಾಧಿಕಾರಿಗಳ ಜೊತೆ ಚಚರ್ಿಸಿ ಸರಿಪಡಿಸಿಕೊಳ್ಳಬೇಕು ಎಂದು ಮತಗಟ್ಟೆ ಮಟ್ಟದ ಅಧಿಕಾರಿಗಳು, ಗ್ರಾಲೆಗಳಿಗೆ ಸೂಕ್ತ ಸಲಹೆ ಸೂಚನೆ ನೀಡಿದರು.

          ತಹಶೀಲ್ದಾರ ಶ್ರೀಶೈಲಾ ವೈ.ತಳವಾರ, ಮುಖ್ಯಾಧಿಕಾರಿ ಕೆ.ದುರುಗಣ್ಣ, ಚುನಾವಣಾ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಚಿದಾನಂದಪ್ಪ, ಶಿರಸ್ತದಾರ ಶ್ರೀಧರ ಸೇರಿ ಪುರಸಭೆಯ ಎಸ್.ಚಿದಾನಂದ, ಮಲ್ಲಿಕಾರ್ಜುನ, ಪುರಸಭೆ, ಕಂದಾಯ ಸಿಬ್ಬಂದಿ, ತಾಲೂಕು ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಎಪಿಎಂಸಿಯಲ್ಲಿ ಕಂಪ್ಲಿ ತಾಲೂಕು ವ್ಯಾಪ್ತಿಯ ಗ್ರಾಮೀಣ ಭಾಗದ 54ಜನ ಮತಗಟ್ಟೆ ಮಟ್ಟದ ಅಧಿಕಾರಿಗಳು, ಗ್ರಾಲೆಗಳು, ಪುರಸಭಾಂಗಣದಲ್ಲಿ ಕಂಪ್ಲಿ ತಾಲೂಕು ಮಟ್ಟದ ನಗರ ಪ್ರದೇಶ 31 ಮತಗಟ್ಟೆ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.