ಲೋಕದರ್ಸನ ವರದಿ
ಕಂಪ್ಲಿ 17: ಅಶ್ರಯಮನೆ ಫಲಾನುಭವಿಗಳ ಅನುಕೂಲಕ್ಕಾಗಿ ಒನ್ ಟೈಮ್ ಸೆಟ್ಲಮೆಂಟ್ ಅಡಿಯಲ್ಲಿ ನಮ್ಮ ಮನೆ, ಆಶ್ರಯ ಸೇರಿ ವಸತಿ ಯೋಜನೆಯ ಸಾಲಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಇಲ್ಲಿನ ಸಿಂಡಿಕೇಟ್ ಬ್ಯಾಂಕ್ ಕಂಪ್ಲಿ ಶಾಖೆಯ ವ್ಯವಸ್ಥಾಪಕ ಸಿದ್ದರಾಮ ಹೌಡೆ ಹೇಳಿದರು.
ಸಿಂಡಿಕೇಟ್ ಬ್ಯಾಂಕ್ ಕಂಪ್ಲಿ ಶಾಖೆಯ ಆವರಣದಲ್ಲಿ ಒನ್ ಟೈಮ್ ಸೆಟ್ಲಮೆಂಟ್ ಅಡಿಯಲ್ಲಿ ಪೂರ್ಣಗೊಳಿಸಿದ ಸಾಲಗಾರರಿಗೆ ಋಣಪಾವತಿ ಪ್ರಮಾಣ ಪತ್ರಹಾಗೂ ಸಲ್ಲಿಸಿದ ದಾಖಲೆಗಳನ್ನು ಮರುಪಾವತಿಸಿ ಮಾತನಾಡಿ, 2011-12ರಲ್ಲಿ ಐಎಸ್ಎಚ್ಯು ಅಡಿಯಲ್ಲಿ, ವಸತಿ ನಿರ್ಮಾಣಕ್ಕಾಗಿ ರಾಜೀವ್ಗಾಂಧಿ ವಸತಿ ನಿಗಮದಿಂದ 50ಸಾವಿರ, ಶೇ.24.10, ಶೇ.,7.25ರಡಿಯಲ್ಲಿ 30ಸಾವಿರ ಹಾಗೂ ಸಿಂಡಿಕೇಟ್ ಬ್ಯಾಂಕ್ನಿಂದ 50ಸಾವಿರ ರೂಪಾಯಿಗಳ ಸಾಲವನ್ನು 54ಜನರಿಗೆ ನೀಡಲಾಗಿತ್ತು. ಕೆಲವರು ಬ್ಯಾಂಕ್ ನೀಡಿದ 50ಸಾವಿರ ರೂಪಾಯಿಗಳ ಸಾಲದ ಕಂತು ಮತ್ತು ಬಡ್ಡಿಯನ್ನು ಕಟ್ಟುತ್ತಿದ್ದು, ಇನ್ನು ಕೆಲವರು ಕಟ್ಟಿಲ್ಲ. ಒಟ್ಟು 33ಜನರಿಗೆ ಒನ್ ಟೈಮ್ ಸೆಟ್ಲಮೆಂಟ್ ಅಡಿಯಲ್ಲಿ ಸಾಲ ಇತ್ಯರ್ಥಗೊಳಿಸಿ ಅವರ ದಾಖಲೆಗಳನ್ನು ಮರುಪಾವತಿಸಲಾಗಿದೆ. ಇನ್ನುಳಿದ 21 ಸಾಲಗಾರರಿಗೂ ಒನ್ ಟೈಮ್ ಸೆಟ್ಲಮೆಂಟ್ನಲ್ಲಿ ಸಾಲ ಮರುಪಾವತಿಸಿ ಋಣಮುಕ್ತರಾಗುವಂತೆ ಮನವೊಲಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಂಡಿಕೇಟ್ಬ್ಯಾಂಕಿನ ಕ್ಷೇತ್ರ ಅಧಿಕಾರಿ ಕಿರಣ್ಕುಮಾರ್ ಬಾಗಡೆ, ಪುರಸಭೆಯ ಸಮುದಾಯ ಸಂಘಟಕಿ ಎಂ.ವಸಂತಮ್ಮ, ಒನ್ ಟೈಮ್ ಸೆಟ್ಲಮೆಂಟ್ನಲ್ಲಿ ಸಾಲ ಋಣಮುಕ್ತರಾದ ಬಿ.ಟಿ.ರಾಜಸಾಬ್, ಎಂ.ಖಾದರ್ಭಾಷ, ಸಿ.ಹುಲುಗಪ್ಪ, ಕೆ.ಶೇಖರ್, ಕೆ.ಲಕ್ಷ್ಮಿದೇವಿ, ಕಮಲಮ್ಮ, ಮಮ್ತಾಜ್, ವಡ್ಡರ ಲಕ್ಷ್ಮಮ್ಮ, ತಾಯಮ್ಮ, ವಡ್ಡಿನ ದುರುಗಮ್ಮ, ಮಮತಾ, ಭಾರತಿ, ಮಾಳಮ್ಮ, ರಜಿಯಾ ಸೇರಿ ಬ್ಯಾಂಕ್ ಸಿಬ್ಬಂದಿ, ಮತ್ತಿತರರು ಉಪಸ್ಥಿತರಿದ್ದರು.