ಕಾಲೇಜು ಅಧ್ಯಾಪಕರಿಗಾಗಿ ಮೂರು ದಿನಗಳ ಕಾರ್ಯಾಗಾರ ಸಮಾರೋಪ ಕಾರ್ಯಾಗಾರಗಳು ಪರಿಣಾಮಕಾರಿ ಬೋಧನೆಗೆ ಸಹಕಾರಿ: ಹೆಗಡಿ


ಬೆಳಗಾವಿ 30: ತಾಂತ್ರಿಕ ವಿದ್ಯಾಲಯದ ಅಧ್ಯಾಪಕರಿಗೆ ಕಾರ್ಯಾಗಾರಗಳು ಆವಿಷ್ಕಾರಿ ರೀತಿಯ ಬೋಧನೆ ಮಾಡುವುದನ್ನು ಕಲಿಸಿಕೊಡಬಲ್ಲವು.  ಪ್ರಾಯೋಗಿಕ ಹಾಗೂ ವಿದ್ಯಾಥರ್ಿಗಳನ್ನು ಒಳಗೊಳ್ಳುವಿಕೆ ಮೂಲಕ ಪರಿಣಾಮಕಾರಿ ಬೋಧನೆ ಸಾಧ್ಯವಾಗುತ್ತದೆ ಎಂದು ಧಾರವಾಡದ ಇಂಡಿಯನ್ ಇನ್ಸಿಟಿಟ್ಯೂಟ್ ಆಪ್ ಇನ್ಪಾರ್ಮೆಷೆನ್ ಟಿಕ್ನಾಲಜಿಯ ಸಹ ಪ್ರಾಧ್ಯಾಪಕ ಡಾ.ರಾಜೇಂದ್ರ ಹೆಗಡಿ ಅಭಿಪ್ರಾಯ ಪಟ್ಟರು.

ನಗರದ ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನೀಯರಿಂಗ್ ಕಾಲೇಜು ಅಧ್ಯಾಪಕರಿಗಾಗಿ ನಡೆದ ಮೂರು ದಿನಗಳ ರಾಷ್ಟ್ರೀಯ ಮಟ್ಟದ ಕಾರ್ಯಾಗಾರದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಸ್.ಎಸ್. ಸಾಲಿಮಠರು ಮಾತನಾಡುತ್ತ ಇಂದು ವಿದ್ಯಾಥರ್ಿಗಳಷ್ಟೆ ಅಲ್ಲದೆ  ಶಿಕ್ಷಕರು ಸಹ ನಿರಂತರ ಕಲಿಕೆಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು. ಆವಿಷ್ಕಾರಿ ಪದ್ಧತಿಗಳನ್ನು ಬೋಧನೆಯಲ್ಲಿ ಬಳಸುವುದರಿಂದ ವಿದ್ಯಾಥರ್ಿಗಳೀಗೆ ಪರಿಣಾಮಕಾರಿಯಾಗಿ ಬೋಧಿಸಬಹುದಾಗಿದೆ ಎಂದರು.

ಈ ಮೂರು ದಿನಗಳ ಕಾರ್ಯಾಗಾರದಲ್ಲಿ ವಿದ್ಯಾಥರ್ಿ-ಶಿಕ್ಷಕರ ಸಂಬಂಧಗಳು, ಬೌದ್ಧಿಕ ಆಸ್ತಿ ಹಕ್ಕು, ಫಲಿತಾಂಶ ಆಧಾರಿತ ಶಿಕ್ಷಣ, ಎಐಸಿಟಿಯ ಹೊಸ  ಶಿಕ್ಷಣ ಕಾರ್ಯಕ್ರಮ ವಿದ್ಯಾಥರ್ಿಗಳೊಂದಿಗೆ ಸಂವಹನ, ಪ್ರೊಜೆಕ್ಟ   ಮ್ಯಾನೆಜಮೆಂಟ್ ಶಿಕ್ಷಣ ಇತ್ಯಾದಿ ವಿಷಯಗಳನ್ನು ಚಚರ್ಿಸಲಾಯಿತು. 

ಕಾರ್ಯಕ್ರಮವನ್ನು ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಯು.ಸಿ.ಕಪಾಳೆ ಸ್ವಾಗತಿಸಿದರು. ಡಾ.ಕೆ.ಬಿ.ಜಗದೀಶಗೌಡ ಆಯೋಜಿಸಿದ್ದರು. ಪ್ರೋ.ಎಸ್.ಸಿ.ಜಂಪಾ ನಿರೂಪಿಸಿದರು. ಪ್ರೋ.ಪ್ರಸಾದ ಕಲ್ಲೋಳಿಮಠ ವಂದಿಸಿದರು.  ಎಲ್ಲ ವಿಭಾಗದ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

01