ಬೆಳಗಾವಿ:
2013ರಲ್ಲಿ ವಿದ್ಯುತ್ ಅವಘಡದ ಗಾಯಾಳುಗಳಾದ ಏಳು ಜನರಿಗೆ ಪರಿಹಾರ
ಒದಗಿಸಲು ಆಗ್ರಹಿಸಿ ಸಮಾಜಸೇವಕಿ ಸರಳಾ ಹೇರೆಕರ ಇಂದು
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗುರುವಾರ
ಅವರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕೇಲವು ವರ್ಷಗಳ ಹಿಂದೆ ಸದಾಶಿವ ನಗರ ವಾರ್ಡ ನಂ.
41ರಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ವಿದ್ಯುತ್
ಅವಘಡಕ್ಕೆ ನಾಲ್ವರು ಅಸುನೀಗಿದ್ದು, ಉಳಿದವರು ಮಾರಣಾಂತಿಕ ಗಾಯಗಳಿಂದ ನರಳುತ್ತಿದ್ದಾರೆ ಅವರಿಗೆ ಐದು ವರ್ಷ ಕಳೆದರೂ
ಸರಕಾರ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿ
ಪರವಾಗಿ ಮನವಿ ಸ್ವೀಕರಿಸಿದ ಬೆಳಗಾವಿ
ಎಸಿ ಕವಿತಾ ಯೋಗಪ್ಪನವರ ಅವರಿಗೆ ಆದ ಗಾಯಗಳ ಬಗ್ಗೆ
ಇದೇ ಸಂದರ್ಭ ಮನವರಿಕೆ ಮಾಡಿಸಿದರು.
ಸಂಬಂಧಿಸಿದ
ಇಲಾಖೆಗೆ ಸೂಕ್ತ ನಿದರ್ೇಶನ ನೀಡಲಾಗುವುದು ಎಂದು ಎಸಿ ಕವಿತಾ
ಯೋಗಪ್ಪನವರ ಭರವಸೆ ನೀಡಿದರು.