ವಿಜಯಪುರ, 9 : ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಇಲ್ಲಿನ
ಆದರ್ಶ ನಗರ ಬಡಾವಣೆಯ ಶ್ರೀ ಹನುಮಾನ ದೇವಾಲಯದಲ್ಲಿ ಜನಸಂಪರ್ಕ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಶಾಲಾ-ಕಾಲೇಜುಗಳ ವಿದ್ಯಾಥರ್ಿಗಳಿಗೆ ಬೆಳಿಗ್ಗೆ ಗಾಂಧಿವೃತ್ತಕ್ಕೆ ಹೋಗಲು ಬಸ್ ಸೌಕರ್ಯವಿಲ್ಲ. ಬೆಳಿಗ್ಗೆ 6 ಗಂಟೆಗೆ ವಿಶೇಷ ಬಸ್ನ್ನು ಗಾಂಧಿಚೌಕ್ ಮಾರ್ಗವಾಗಿ ಓಡಿಸಿದರೆ ವಿದ್ಯಾಥರ್ಿಗಳಿಗೆ ಅನುಕೂಲವಾಗಲಿದೆ ಎಂಬ ಬೇಡಿಕೆ ಸಾರ್ವಜನಿಕರ ವಲಯದಿಂದ ಕೇಳಿಬಂದಿತು. ಹಲವಾರು ವಿದ್ಯಾಥರ್ಿಗಳು ಸಹ ಈ ಬಗ್ಗೆ ಶಾಸಕರನ್ನು ಒತ್ತಾಯಿಸಿದರು.
ತಕ್ಷಣವೇ ಈ ಬಗ್ಗೆ ಸ್ಪಂದಿಸಿದ ಯತ್ನಾಳರು, ವಿದ್ಯಾಥರ್ಿಗಳ ಅನುಕೂಲಕ್ಕಾಗಿ ಬೆಳಿಗ್ಗೆ 6 ಗಂಟೆಗೆ ಆದರ್ಶನಗರ-ಗಾಂಧಿವೃತ್ತದವರೆಗೆ ಬಸ್ ಓಡಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ, ಬಸ್ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ವಿಜಯಪುರ ನಗರದ ಅಭಿವೃದ್ಧಿಯೇ ನನ್ನ ಗುರಿ. ಸುಂದರ ವಿಜಯಪುರ ನಿಮರ್ಾಣಕ್ಕಾಗಿ ಬದ್ಧನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ, ಜನರ ಸಮಸ್ಯೆಗಳನ್ನು ತಿಳಿದುಕೊಂಡು ಪರಿಹಾರ ಕಲ್ಪಿಸುವ ದೃಷ್ಟಿಯಿಂದ ಈ ಜನಸಂಪರ್ಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಸಂಗಣ್ಣ ಕರಡಿ, ಗುರಣ್ಣ ಅಂಗಡಿ, ಆದರ್ಶನಗರ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಈರಣ್ಣ ಚಿಂಚಲಿ, ಅಶೋಕ ನಡುವಿನಮನಿ, ಎಸ್.ಎಂ. ಹುಂಡೇಕಾರ, ಎಸ್.ಎಸ್. ಹರನಾಳ, ಎಸ್.ಐ. ಪಟ್ಟಣಶೆಟ್ಟಿ, ಎಸ್.ಎಂ. ಚೌಧರಿ ಮೊದಲಾವರು ಪಾಲ್ಗೊಂಡಿದ್ದರು.