ಕ್ಷೇತ್ರದ ಪರಿಶಿಷ್ಟ ಕಾಲೋನಿಗಳ ಅಭಿವೃದ್ಧಿಗೆ ಬದ್ಧ: ಗಣೇಶ ಹುಕ್ಕೇರಿ

ಚಿಕ್ಕೋಡಿ 09: ಚಿಕ್ಕೋಡಿ-ಸದಲಗಾ ಕ್ಷೇತ್ರದ ಪರಿಶಿಷ್ಟ ಕಾಲೋನಿಗಳ ಅಭಿವೃದ್ಧಿಗೆ ಬದ್ಧವಿದ್ದು, ಸಕರ್ಾರದ ಪ್ರತಿ ಯೋಜನೆ ಸಾರ್ವಜನಿಕರಿಗೆ ತಲುಪಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಲಾಗುತ್ತದೆ ಎಂದು ಸಕರ್ಾರಿ ಮುಖ್ಯ ಸಚೇತಕ ಗಣೇಶ ಹುಕ್ಕೇರಿ ಹೇಳಿದರು.

ತಾಲೂಕಿನ ಕೇರೂರ ಗ್ರಾಮದಲ್ಲಿ ಮಂಗಳವಾರ ಲೋಕೋಪಯೋಗಿ ಇಲಾಖೆ ಎಸ್ಇಪಿ ಯೋಜನೆಯಡಿಲ್ಲಿ ಜಗಜೀವನರಾಮ ಕಾಲೋನಿಯಲ್ಲಿ ರಸ್ತೆ ನಿಮರ್ಾಣ ಕಾಮಗಾರಿ, ಅನಿಲ ಭಾಗ್ಯ ಯೋಜನೆಯಡಿ ಗ್ಯಾಸ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೇರೂರ ಗ್ರಾಮದ ಪರಿಶಿಷ್ಟ ಕಾಲೋನಿಗಳಲ್ಲಿ ಈಗಾಗಲೇ ರಸ್ತೆ, ಗಟಾರ ಮತ್ತು ಶೌಚಾಲಯ ನಿಮರ್ಾಣ ಮಾಡಲಾಗಿದೆ. ಮುಂದೆಯೂ ಸಹ ಅಭಿವೃದ್ಧಿ ಕೆಲಸ ಮಾಡಲಾಗುತ್ತದೆ ಎಂದರು.

ಸಂಸದ ಪ್ರಕಾಶ ಹುಕ್ಕೇರಿ ಕೂಡಾ ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಸಾಕಷ್ಟು ಅನುದಾನ ನೀಡಿದ್ದಾರೆ. ರೈತರು ಆಥರ್ಿಕವಾಗಿ ಪ್ರಗತಿ ಹೊಂದಲು 16 ಏತ ನೀರಾವರಿ ಯೋಜನೆ ರೂಪಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ಇನ್ನು ಅನೇಕ ರೈತರಿಗೆ ಏತ ನೀರಾವರಿ ಯೋಜನೆ ರೂಪಿಸಿ ಕೊಡಲಾಗುತ್ತದೆಂದು ಭರವಸೆ ನೀಡಿದರು.

ದುರೀಣ ಮಲ್ಲಿಕಾಜರ್ುನ ಪಾಟೀಲ ಮಾತನಾಡಿ, ಸಂಸದ ಪ್ರಕಾಶ ಹುಕ್ಕೇರಿ ಮತ್ತು ಶಾಸಕ ಗಣೇಶ ಹುಕ್ಕೇರಿ ನೇತೃತ್ವದಲ್ಲಿ ಕೇರೂರ ಗ್ರಾಮದಲ್ಲಿ ನೂರಾರು ಕೋಟಿ ರೂ ಅನುದಾನ ವ್ಯಯ ಮಾಡಿ ಅಭಿವೃದ್ಧಿ ಪಡಿಸಿದ್ದಾರೆ. ಅವರ ಜೊತೆ ಗ್ರಾಮದ ಜನತೆ ಸದಾ ಬೆನ್ನೆಲುಬಾಗಿ ಇರುತ್ತದೆ ಎಂದರು.

ಮಾಜಿ ಕಾಡಾ ಅಧ್ಯಕ್ಷ ಸುರೇಶ ಕೋರೆ, ಚನಗೌಡ ಪಾಟೀಲ, ವಿರೇಂದ್ರ ಪಾಟೀಲ, ಮಲ್ಲಪ್ಪ ಭಾಗಿ, ವಿಠ್ಠಲ ವಾಳಕೆ, ಪ್ರಕಾಶ ಬ್ಯಾಳಿ, ಸುರೇಶ ಬಾಡ್ಕರ, ಸಿದ್ದಪ್ಪ ಪವಾರ, ಮಹೇಶ ಪಾಟೀಲ, ಧರಿಗೌಡ ಪಾಟೀಲ, ದುಂಡಪ್ಪ ಕಿನ್ನವರ, ಬಿ.ಐ.ಪಾಟೀಲ, ವಿರೇಶ ಟೆಂಗಿನಕಾಯಿ, ರವಿ ಪಾಟೀಲ, ಸಿದ್ದು ನಾವಿ, ಲಕ್ಷ್ಮಣ ಜಾಯಗೋನಿ ಇದ್ದರು.