ಸರಕಾರಿ ಸೌಲಭ್ಯಗಳನ್ನು ಒದಗಿಸಲು ಬದ್ಧ: ಆಚಾರ

ಲೋಕದರ್ಶನ ವರದಿ

ಯಲಬುರ್ಗಾ  07: ನಮ್ಮ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಬರುವ ಅನುಧಾನವನ್ನು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುವದರ ಮೂಲಕ ಜನತೆಗೆ ಅನುಕೂಲ ಕಲ್ಪಿಸಲಾಗುವದು  ಎಂದು ಹಾಲಪ್ಪ ಆಚಾರ್ ಹೇಳಿದರು.

ತಾಲೂಕಿನ ಕುದರಿಕೊಟಗಿ, ಗೆದಗೇರಿ(ತಾಂಡಾ) ಚಿಕ್ಕ ಬನ್ನಿಗೋಳ(ತಾಂಡ) ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೇರವೇರಿಸಿ ಅವರು ಮಾತನಾಡಿದರು. ರೈತರಿಗಾಗಿ ಪ್ರತಿ ವರ್ಷ ಅವರ ಖಾತೆಗಳಿಗೆ ನೇರವಾಗಿ ರೂ 6000 ಹಣವನ್ನು ಕೇಂದ್ರ ಸರಕಾರ ನೀಡುತ್ತಿದೆ, ಅದರ ಜೋತೆಗೆ ನಮ್ಮ ರಾಜ್ಯ ಸರಕಾರ 4000 ರೂ ಹಣವನ್ನು ನೀಡುತ್ತಿದ್ದೇವೆ, ಕೊಪ್ಪಳ ಏತನೀರಾವರಿ ಯೋಜನೆಗಳ 3ನೇ ಹಂತದ ಕಾಮಗಾರಿಗೆ 1780 ಕೋಟಿ ಹಣ ಬಿಡುಗಡೆಗೋಳಿಸಿ ಇನ್ನೂ ಮೂರು ತಿಂಗಳಲ್ಲಿ ಕಾಮಗಾರಿ ಪ್ರಾರಂಬಿಸಲಾಗುವದು ಮತ್ತು ಅದರ ಜೋತೆಗೆ ಕೃಷ್ಣಾ ಬಿ ಸ್ಕಿಂ ಯೋಜನೆಯನ್ನು ಇನ್ನೂ ಒಂದು ವರ್ಷದಲ್ಲಿ ಪ್ರಾರಂಭಿಸಲಾಗುವದು ಮತ್ತು  ಪ್ರತಿ ಕಾಮಗಾರಿಯಲ್ಲಿ ಗುಣಮಟ್ಟದ ಕೆಲಸಕ್ಕೆ ಆದ್ಯತೆ ನೀಡಬೇಕು, ಅಧಿಕಾರಿಗಳು ಕಾಮಗಾರಿಯ ಗುಣಮಟ್ಟದ ಬಗ್ಗೆ ನಿಗಾ ವಹಿಸಬೇಕು. ಈ ಹಿಂದೆ ನಮ್ಮ ತಾಲೂಕಿನಲ್ಲಿ ನಡೆದ ಹಲವಾರು ಕಾಮಗಾರಿಗಳು ಕಳಪೆಯಿಂದ ಕೂಡಿದ್ದು ಯಾವುದೇ ಉಪಯೋಗಕ್ಕೂ ಮುನ್ನವೆ ಕುಸಿಯುವ ಹಂತಕ್ಕೆ ಬಂದಿದ್ದಾವೆ ಆದರೆ ನನ್ನ ಅವದಿಯಲ್ಲಿ ಕಳಪೆ ಕಾಮಗಾರಿಗೆ ಅವಕಾಶ ನೀಡುವದಿಲ್ಲಾ ಅಂತಹ ಸಂದರ್ಭ ಬಂದರೆ ಸಂಬಂದಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಲಾಗುವದು ಎಂದರು. 

ಈ ಸಂದರ್ಭದಲ್ಲಿ ತಾಪಂ ಸದಸ್ಯರಾದ ಶರಣಪ್ಪ ಈಳಗೇರ್,  ರಾಮಣ್ಣ ಹೊಸಮನಿ, ಸಾವಿತ್ರಿ ಗೊಲ್ಲರ, ಮುಖಂಡರಾದ ಸಿ ಎಚ್ ಪೋಲಿಸ್ಪಾಟೀಲ, ಬಸವಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ರತನ್ ದೇಸಾಯಿ, ಪ್ರಭುರಾಜ ಕಲಬುಗರ್ಿ, ನೀಲನಗೌಡ ತಳುವಗೇರಿ, ಶಿವಶಂಕರ ದೇಸಾಯಿ,  ಮುದಕಪ್ಪ ಆಡಿನ್, ಶಿವಣ್ಣ ವಾದಿ, ತಹಸೀಲ್ದಾರ ರಮೇಶ ಅಳವಂಡಿಕರ್, ತಾಪಂ ಇಓ ಡಾ. ಡಿ. ಮೋಹನ್ ಬಿಇಓ ಶರಣಪ್ಪ ವಟಗಲ್, ಪಿಡಬ್ಲೂಡಿ ಎಇಇ ಹೆಮಂತರಾಜ್, ಪಂಚಾಯತ ರಾಜ್ ಇಲಾಖೆಯ ತಿರಕನಗೌಡ,  ಸೇರಿದಂತೆ ಅನೇಕರು ಹಾಜರಿದ್ದರು.