ಕನ್ನಡ ಶಾಲೆಗಳ ದುರಸ್ತಿ ಕಾರ್ಯ ಆರಂಭ

ಲೋಕದರ್ಶನ ವರದಿ

ಸಂಬರಗಿ 14:  ಗಡಿ ಭಾಗದ ಕನ್ನಡ ಪ್ರಾಥಮಿಕ ಶಾಲೆ ಕೊಠಡಿ ದುರಾವಸ್ಥೆ ಕುರಿತು ಗಡಿ ಭಾಗದ ಜನರು ಮೇಲಿಂದ ಮೇಲೆ ಧ್ವನಿ ಎತ್ತಿದ ನಂತರ ತಾಲೂಕಾ ಶಿಕ್ಷಣ ಇಲಾಖೆ ಎಚ್ಚರಿಸಿ ಗಡಿ ಭಾಗದ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ಕನರ್ಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆ ವತಿಯಿಂದ ದುರಸ್ತಿ ಕಾರ್ಯ ಶೀಘ್ರದಲ್ಲಿ ನಡೆಯುತ್ತಿದ್ದು ತಗಡಿನ ಶೀಟ್ಗಳನ್ನು ಆಮದು ಮಾಡಿ ಕೆಲಸ ಕೈಗೊಂಡಿದ್ದಾರೆ.

 ಗಡಿ ಭಾಗದ ಪ್ರಾಥಮಿಕ ಕನ್ನಡ ಶಾಲೆಗಳಲ್ಲಿ 200 ಶಾಲೆಗಳ ಕೊಠಡಿ ದುರಸ್ತಿ ಕಾರ್ಯವನ್ನು ಕೈಗೊಂಡಿದ್ದಾರೆ ಸಂಬರಗಿ, ಅರಳಿಹಟ್ಟಿ, ಶಿರೂರ, ಮದಭಾವಿ, ಜಂಬಗಿ, ಅನಂತಪೂರ ಶಿವನೂರ ಸೇರಿದಂತ ಹಲವಾರು ಶಾಲೆಗಳ ಕೊಠಡಿ ಮೇಲ್ಛಾವಣಿ ತೆಗೆದಿದ್ದಾರೆ ಆಕಾರಣ ಮಕ್ಕಳು ಕೊಠಡಿ ಇಲ್ಲದೆ ಬೀದಿಯಲ್ಲಿ ಕೂತು ಪಾಠ ಕೇಳುವ ಪರಿಸ್ಥಿತಿಯಲ್ಲಿ ಇದ್ದಾಗ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಕಾರ್ಯ ಕೈಗೊಂಡಿದ್ದಾರೆ.  ಶಾಲಾ ಕೊಠಡಿಯ ದುರಸ್ತಿ ಕೆಲಸವನ್ನು ಕೈಗೊಂಡಿದ್ದಾರೆ. 

ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಎಮ್ ಬಿ ಮುರಟಗಿ ಕೊಠಡಿಗೆ ಮೇಲ್ಛಾವಣಿ ಇಲ್ಲದ ಶಾಲೆಗಳು ಹಾಗೂ ಶೀತಿಲ ಗೊಂಡಿರುವ ಕೊಠಡಿಗಳ ಪರಿಶೀಲನೆ ಮಾಡಿ ಶೀತಿಲ ಗೊಂಡಿರುವ ಕೊಠಡಿಗಳನ್ನು ನೆಲಸಮ ಮಾಡಲು ಆದೇಶ ಮಾಡಿದ್ದಾರೆ. ಗಡಿ ಭಾಗದ ಕನ್ನಡ ಪ್ರಾಥಮಿಕ ಶಾಲೆಗಳ ದುರಾವಸ್ಥೆ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.