ಖ್ಯಾತಿ ಪಡೆದ ಟಿವಿ ಕಲಾವಿದರ ಹಾಸ್ಯ ಸಂಜೆ ಕಾರ್ಯಕ್ರಮ

ಲೋಕದರ್ಶನ ವರದಿ

ಚನ್ನಮ್ಮನ ಕಿತ್ತೂರು :  ಐತಿಹಾಸಿಕ ಕಿತ್ತೂರು ಉತ್ಸವದ ಮುಖ್ಯ ಆಕರ್ಷಣೆಯಾದ ವೇದಿಕೆ ಕಾರ್ಯಕ್ರಮಗಳು ಜನ ಮನ ಸೇಳೆದವು, ಕನರ್ಾಟಕದ ಸಂಸ್ಕೃತೀಯ ಶ್ರೀಮಂತಿಕೆಯೂ ರಾಣಿ ಚನ್ನಮ್ಮಾಜಿಯ ಮುಖ್ಯ ವೇದಿಕೆಯ ಮೇಲೆ ತನ್ನ ಶ್ರೀಮಂತಿಕೆಯನ್ನು ಮೆರೆದು ಕಿತ್ತೂರು ಸೇರಿದಂತೆ ಉತ್ಸವಕ್ಕಾಗಮಿಸಿದ ಎಲ್ಲ ಜನರ ಮನವನ್ನು ರಂಜಿಸುವ ಕಾರ್ಯ ಸಾಂಸ್ಕೃತೀಕ ಕಾರ್ಯಕ್ರಮಗಳನ್ನು  ಕಲಾವಿದರು ನೀಡಿದರು.

ಸ್ಥಳೀಯ ಕಲಾವಿದರಾದ ಝೀ ಟೀವಿ ಖ್ಯಾತಿಯ  ನಾಗರಾಜ ಜೋರಾಪೂರ ತಂಡದ ಕಲಾವಿದರು ನೆರೆದ ಜನಸ್ಥೋಮದ ಜನಮನ ಸೆಳೆದರು, ನಾಗರಾಜ ಜೋರಾಪೂರ ಹಾಸ್ಯದ ಜೊತೆಗೆ ಕೆಲವು ಚಲನಚಿತ್ರಗೀತೆಗಳನ್ನು ಹಾಡಿ ಕಲಾವಿದರ ಸ್ಥಾನಕ್ಕೆ ನ್ಯಾಯ ಒದಗಿಸಿದರೆ, ಈ ತಂಡದ ಅಜರ್ುನ ಇಟಗಿ ಇವನ " ಇದು ಹವಿನ ಲೋಕವೇ, ಚುಟು ಚುಟು ಎನ್ನುವ ಹಾಡುಗಳು ಸೇರಿದ ಯುವಕರು ಹೆಜ್ಜೆ ಹಾಕುತ್ತ ಹುಚ್ಚೆದ್ದು ಕುಣಿದು ಕಪ್ಪಳಿಸಿದರು. ಹಾಗೂ ಪೈಲವಾನ ಚಿತ್ರದ ಹಾಸ್ಯ ಕಲಾವಿದ  ರಾಮದುರ್ಗದ ಅಪ್ಪಣ್ಣ ಹಾಗೂ ನಯನಾ ಅವರ ಜೋಡಿ ಹಾಸ್ಯ ಪ್ರೇಕ್ಷಕರನ್ನು ನಗಿಸಿ ಹೊಟ್ಟೆ ಹುಣ್ಣಾಗುವಂತೆ ಮಾಡಿತು. ಸುಹಾನಾ ಸೈಯದ್ ಹಾಡಿದ "ನೀನೇ ರಾಮಾ ನೀನೇ ಶಾಮ" ಹಾಡು ನೆರೆದ ಜನರಲ್ಲಿ ಸೌಹಾರ್ದತೆ ಮೂಡಿಸಿತು. ಹಾಗೂ ಸಾಕ್ಷಿ ಕಲ್ಲೂರ, ವಿಶ್ವ ಪ್ರಸಾದ, ಮಂಗಳೂರಿನ ಅಖಿಲಾ ಇವರ ಹಾಡಿಗೆ ಜನರ ಇಂಪನ್ನು ಹೆಚ್ಚಿಸಿತು.

ನಂತರ ಇಂಚಲದ ಶಿವಾನಂದ ಭಾರತಿ ಭಜನಾ ಮಂಡಳದ ಭಜನಾ ಕಾರ್ಯಕ್ರಮ ಹಳ್ಳಿಗರ ಮನಸೂರೆಗೊಂಡಿತು, ಧಾರವಾಡದ ಜ್ಯೋತಿ ಗಲಗಲಿ ಭರತನಾಟ್ಯ ದೇಶಿಯ ಸಂಸ್ಕೃತೀಯನ್ನು ಅನಾವರಣಗೊಳಿಸಿದರೆ, ಸವದತ್ತಿ ಮೋಹನಗೌಡ ಪಾಟೀಲ ಅವರ ಭಜನೆ, ಬೀಳಗಿಯ ಪುಟ್ಟರಾಜ ಭಜಂತ್ರಿ ಶಹನಾಯಿ ವಾದನ, ಜಕನಾಯ್ಕನಕೊಪ್ಪದ ಚನ್ನವೃಷಬೇಂದ್ರ ಭಜನಾ ಸಂಘದ ತತ್ವಪದಗಳು ಗ್ರಾಮೀಣ ಮಟ್ಟದ ಕಲೆಯನ್ನು ಬಿತ್ತರಿಸಿದವು.

ಕಪ್ಪಲಗುದ್ದಿಯ ಕುಮಾರ ಬಡಿಗೇರ ಸುಗಮ ಸಂಗೀತ, ಗಿರಿಯಾಲದ ಸಿದ್ದು ಇಟಗಿಯ ಚಿತ್ರ ಸಂಭಾಷಣೆ ನೆರದ ಜನರನ್ನು ಮಂತ್ರಮುಗ್ದರನ್ನಾಗಿಸಿದರೆ ಬೆಳಗಾವಿಯ ಯಾದವೇಂದ್ರ ಪ್ರಜೇರ ಶಾಸ್ತ್ರೀಯ ಸಂಗೀತ, ಬಾಗಲಕೋಟೆಯ ಮಂಜುಳಾ ಸಂಬಾಳಮಠ ವಚನಗಾಯನ ಸೈ ಎನಿಸಿಕೊಂಡರೆ ಬೆಳಗಾವಿಯ ರವಿ ಭಜಂತ್ರಿ ನೇತೃತ್ವದ ಹಾಸ್ಯ ಕಲಾವಿದರ ತಂಡದ ಹಾಸ್ಯ ಸಂಜೆ ಕಾರ್ಯಕ್ರಮ ನೆರೆದ ಜನರಲ್ಲಿ ನಗೆಗಡಲಲ್ಲಿ ತೆಲಿಸಿತು.

ಧಾರವಾಡದ ಬಸಲಿಂಗಯ್ಯಾ ಹಿರೇಮಠ ಅವರು ಪ್ರಸ್ತುತ ಪಡಿಸಿದ ಜಾನಪದ ಗೀತೆ " ಹುಲಿಯು ಹುಟ್ಟಿತು ಕಿತ್ತೂರು ನಾಡಾಗ" ಹಾಡು ನೆರದ ಜನಮನ ಗೆಲ್ಲುವುದರ ಜೊತಗೆ ಮನದಲ್ಲಿದ್ದ ಸ್ವಾಭಿಮಾನದ ಕಿಚ್ಚನ್ನು ಬಡೆದೆಬ್ಬಿಸಿತು, ಬೆಂಗಳೂರಿನ ಚೇತನಾ ತಂಡದವರಿಂದ ಕಥಕ್ ನೃತ್ಯ ರೂಪಕ ಮೈ ಜುಮ್ಮೆನ್ನುವಂತಿತ್ತು, ಮೈಸೂರಿನ ಸುಮಾ ರಾಜಕುಮಾರ ಮಾತನಾಡುವ ಗೊಂಬೆ ಕಾರ್ಯಕ್ರಮ ನಗೆಯ ಮೂಲಕ ವಾಸ್ತವ ಸ್ಥಿತಿಯನ್ನು ಯಥಾವತ್ತಾಗಿ ಬಿಡಿಸಿಟ್ಟಿತು. 

ಬೆಳಗಾವಿಯ ಬಿಟ್ ಬ್ರೇಕರ್ಸ ರಾವಣ ಸಂಹಾರ ನೃತ್ಯ ರಾಮಾಯಣದ ನೆನಪನ್ನು ಮೆಲಕುಹಾಕುವಂತೆ ಮಾಡಿತು, ಬೈಲಹೊಂಗಲದ ಆನಂದ ಬಡಿಗೇರ ಅವರ ಕಾವ್ಯ ಕುಂಚ ಕಲೆ, ಬೆಳಗಾವಿಯ ಅರುಣ ಶಿರಗಾಪೂರ ಸಂಗೀತ ಸುಧೆ ನೊಡುಗರ ಮನಸೂರೆಗೊಂಡಿತು.

ದಾವಣಗೇರೆಯ ಚಿಂದೋಡಿ ಶಂಬುಲಿಂಗಪ್ಪನವರ ಕಿವುಡ ಮಾಡಿದ ಕಿತಾಪತಿ ನಾಟಕ ನೊಡುಗರ ಹೊಟ್ಟೆ ಹುಣ್ಣಾಗುವಂತೆ ನಗೆಗಡಲಲ್ಲಿ ತೆಲಿಸುವ ಮೂಲಕ ಚಳಿ ಓಡಿಸಲು ಯಶಸ್ವಿಯಾಯಿತು ಈ ನಾಟಕ ಪ್ರೀಯರ ವಲಯದಲ್ಲಿ ಈ ಹಿಂದೆ ನಡೆಯುತ್ತಿದ್ದ ಬಯಲು ನಾಟಕ, ರಂಗಭೂಮಿಯ ಕಲೆಯನ್ನು ಮೆಲಕು ಹಾಕುವಂತಿತ್ತು