ನನ್ನನ್ನು ನಗೆ ಮಾತುಗಾರನನ್ನಾಗಿ ನಿರ್ಮಿ ಸಿದ್ದೇ ಹಾಸ್ಯಕೂಟ: ಹೊಸಳ್ಳಿ

ಬೆಳಗಾವಿ 16- ನನ್ನಲ್ಲಿರುವ ಹಾಸ್ಯಪ್ರತಿಭೆಯನ್ನು ಹಂಚಿಕೊಳ್ಳಲು ವೇದಿಕೆಯೊಂದು ಹುಡುಕುತ್ತಿದ್ದಾಗ ನನಗ ಸಂಜೀವಿನಿಯಾಗಿ ಸಿಕ್ಕದ್ದು ಈ ಬೆಳಗಾವಿಯ  ಹಾಸ್ಯಕೂಟ. ಉದಯೋನ್ಮುಖ ಹಾಸ್ಯ ಕಲಾವಿದರಿಗೊಂದು ಹಾಸ್ಯಕೂಟ ಪ್ರಯೋಗಾಲಯವಿದ್ದಂತೆ. ನಮ್ಮನ್ನು ನಾವು ತಿದ್ದಿತೀಡಿಕೊಂಡು ಕಲಾವಿದರಾಗಿ ರೂಪಗೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ. ನಾನು ನಗೆಭಾಷಣಕಾರನೆಂದು ಗುರುತಿಸಿಕೊಳ್ಳುವಂತೆ ಮಾಡಿದ್ದೇ ಹಾಸ್ಯಕೂಟ ಅದರಂತೆ ಗುಂಡೇನಟ್ಟಿ ಮಧುಕರ ತಮ್ಮ ಮಾತುಗಳಿಂದ ನನ್ನಲ್ಲಿ ಆತ್ಮವಿಶ್ವಾಸ ತುಂಬುತ್ತ ಬಂದರು ಎಂದು ಬೈಲಹೊಂಗಲದ ನಗೆಮಾತುಗಾರ ಎಂ. ಬಿ .ಹೊಸಳ್ಳಿ ಇಂದಿಲ್ಲಿ ಹೇಳಿದರು.

ನಗರದ ಹಾಸ್ಯಕೂಟ ಹಾಗೂ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲಿ ಹಮಿಕೊಳ್ಳಲಾಗಿದ್ದ "ಯುವನಗೆ ಹಾಗೂ ಸನ್ಮಾನ" ಕಾರ್ಯಕ್ರಮದಲ್ಲಿ ಇತ್ತೀಚೆಗೆ ಪವರ ಸ್ಟಾರ್ ಪುನಿತ ರಾಜಕುಮಾರ ನಡೆಸಿಕೊಡುವ "ಕನ್ನಡ ಕೋಟ್ಯಾಧಿಪತಿ' ಯಲ್ಲಿ ಭಾಗವಹಿಸಿರುವ ಹಾಸ್ಯಕೂಟ ಕಲಾವಿದ ಎಂ.ಬಿ. ಹೊಸಳ್ಳಿ ದಂಪತಿಯನ್ನು ಶಾಲು ಹೊದಿಸಿ, ಫಲಪುಷ್ಪ, ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಹೊಸಳ್ಳಿಯವರು ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದ ಅವರು ಮುಂದೆ ಮಾತನಾಡುತ್ತ ತಮಗೆ ಬಂದ ಅವಕಾಶಗಳನ್ನು ಬಿಟ್ಟು ನನಗೆ ಕೊಟ್ಟ ಪ್ರೊ. ಜಿ.ಕೆ. ಕುಲಕಣರ್ಿ, ಜಿ. ಎಸ್ .ಸೋನಾರ, ತಮ್ಮ ಮಾತುಗಳಿಂದ ನನಗೆ ಪ್ರೋತ್ಸಾಹ ನೀಡುತ್ತಿರುವ ಅರವಿಂದ ಹುನಗುಂದ, ಅಶೋಕ ಮಳಗಲಿ, ಬಸವರಾಜ ಸಸಾಲಟ್ಟಿ ಎಲ್ಲರೂ ನನ್ನ ಬೆಳವಣಿಗೆಯಲ್ಲಿ ಪಾಲುದಾರರಾಗಿದ್ದಾರೆ ಎಂದು ಹೇಳಿದರು.

ಯುವ ನಗೆ ಮಾತುಗಾರರಾದ ರಾಜು ಹಿರೇಮಠ ಹಾಗೂ  ಕೆ. ತಾನಾಜಿ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ  ಪ್ರೊ. ಜಿ .ಕೆ. ಕುಲಕಣರ್ಿಯವರು ಈ ಕಲಾವಿದರ ಮಾತುಗಳನ್ನು ಕೇಳಿದಾಗ ನುರಿತ ನಗೆಭಾಷಣಕಾರರ ಸಾಲಿನಲ್ಲಿ ನಿಲ್ಲುವ ಎಲ್ಲ ಗುಣಗಳನ್ನು ಹೊಂದಿದ್ದಾರೆ. ಕಲೆಗೆ ತಕ್ಕ ಪರಿಶ್ರಮ ಪಟ್ಟಲ್ಲ್ಲಿ ಇವರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಇವರು ಮಿಂಚುವುದರಲ್ಲಿ ಸಂಶಯವಿಲ್ಲ ಎಂದು ಹೇಳಿ ನಗೆ ಪ್ರಸಂಗಗಳನ್ನು ಹಂಚಿಕೊಂಡು ನಗೆಗಡಲಲ್ಲಿ ತೇಲಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬೆಳಗಾವಿ ಜಿಲ್ಲಾ ಲೇಖಕಿಯರ  ಸಂಘದ ಅಧ್ಯಕ್ಷೆ ಜ್ಯೋತಿ ಬದಾಮಿ ಮಾತನಾಡುತ್ತ ಹಾಸ್ಯಕೂಟ ಮಹಿಳೆಯರಿಗಾಗಿಯೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ  ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಎಂದು ಹೇಳಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಗುಂಡೇನಟ್ಟಿ ಮಧುಕರ ಉದಯೋನ್ಮುಖ ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಯುವನಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.  ನಗೆಭಾಷಣದಲ್ಲಿ ಮಹಿಳೆಯರ ಕೊರತೆ ಎದ್ದು ಕಾಣುತ್ತದೆ. ಮಹಿಳೆಯರೂ ಹಾಸ್ಯಭಾಷಣಗಳತ್ತ ಒಲವು ತೋರಿಸಿಕೊಳ್ಳಬೇಕು ಎಂದು ಹೇಳಿದರು. 

ಯಮಕನಮರಡಿಯ ರಾಜು ಹಿರೇಮಠ, ಬೆಳಗಾವಿಯ ಕೆ. ತಾನಾಜಿ ಇಬ್ಬರೂ ಸುಮಾರು ಅರ್ಧಗಂಟೆಗಳ ಕಾಲ ತಮ್ಮ ನಗೆಮಾತುಗಳಿಂದ ಎಲ್ಲರನ್ನೂ ರಂಜಿಸಿದರು. ಪ್ರಾಯೋಜಕತ್ವವನ್ನು  ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದವರು ವಹಿಸಿಕೊಂಡಿದ್ದರು.

ಬಿ. ಎ. ಪಾಟೀಲ, ಆಶಾ ಕಡಪಟ್ಟ, ದೀಪಿಕಾ ಚಾಟೆ, ಡಾ. ಹೇಮಾ ಸೊನೊಳ್ಳಿ, ಮದನ ಕಣಬೂರ, ವಿನಯಾ ತೆಂಡಲೂಕರ, ವಿಜಯೀಂದ್ರ ಕುಲಕಣರ್ಿ, ಕೆ. ಮಲ್ಲಿಕಾಜರ್ು, ದುರದುಂಡಯ್ಯ ಬಾವಿಮನಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು  ಡಾ. ಸಿದ್ದನಗೌಡ  ಪಾಟೀಲ ವಹಿಸಿದ್ದರು. ಜಿ. ಎಸ್ .ಸೋನಾರ ನಿರೂಪಿಸಿದರು ಸುನಿತಾ ಪಾಟೀಲ ವಂದಿಸಿದರು.