ಕೊಬ್ಬರಿ ಎಣ್ಣೆ ಬಳಕೆ: ಅದರಿಂದಾಗುವ ಉತ್ತಮ ಪರಿಣಾಮಗಳು

ನವದೆಹಲಿ: ತೆಂಗಿನ ಕಾಯಿ ಎಣ್ಣೆಯ ಉಪಯೋಗದಿಂದ ಹತ್ತು ಹಲವು ಲಾಭಗಳಿವೆ. ವಿವಿಧ ಕಾರಣಗಳಿಗಾಗಿ ಭಾರತದಲ್ಲಿ ತಲೆ ಮಾರುಗಳಿಂದ ಬಳಸಲಾಗುತ್ತಿದೆ.

ಆಯುರ್ವೇದ ತಜ್ಞೆ ಡಾ. ಪ್ರಿಯಾಂಕಾ ಸಂಪತ್  ತೆಂಗಿನ ಕಾಯಿ ಎಣ್ಣೆಯ ಉಪಯೋಗಗಳ ಬಗ್ಗೆ ತಿಳಿಸಿದ್ದಾರೆ.

ನೈಸರ್ಗಿಕ ಆರ್ದ್ರತೆ: ತೆಂಗಿನಕಾಯಿ ಎಣ್ಣೆ ಬಳಸುವುದರರಿಂದ ದೇಹದಲ್ಲಿನ ಸತ್ತ ಚರ್ಮವನ್ನು ತೆಗೆದು ಹಾಕಿ ಚರ್ಮ ಹೊಳೆಯುವಂತೆ ಮಾಡುತ್ತದೆ. ಸೋರಿಯಾಸಿಸ್, ಡರ್ಮಟಿಟಿಸ್ ಮತ್ತು ಎಕ್ಸಿಮಾ, ಸುಟ್ಟ ಚರ್ಮಕ್ಕೆ ಉತ್ತಮವಾಗಿದೆ, ತೆಂಗಿನಕಾಯಿ ಎಣ್ಣೆ ಯಿಂದ ಸ್ಟ್ರೆಚ್ ಮಾರ್ಕ್ ಗಳು ಕೂಡ ಮಾಯವಾಗುತ್ತವೆ. ದಿನ ನಿತ್ಯ ಒಂದು ಚಿಟಿಕೆ ಎಣ್ಣೆಯನ್ನು ತುಟಿಗಳಿಗೆ ಹಚ್ಚುತ್ತಿದರೆ ತುಟಿ ಒಡೆಯುವ ಸಮಸ್ಯೆಯಿಂದ ದೂರ ಉಳಿಯಬಹುದಾಗಿದೆ,

ಕೂದಲು ಬೆಳೆಯುವುದಕ್ಕೆ ತೆಂಗಿನ ಎಣ್ಣೆ ಅತ್ಯಂತ ಸಹಕಾರಿಯಾಗಿದೆ, ತೆಂಗಿನ ಎಣ್ಣೆ ನಿಯಮಿತವಾಗಿ ಹಚ್ಚಿ ಮಸಾಜ್ ಮಾಡುವುದರಿಂದ ದೇಹದ ರಕ್ತ ಚಲಸನೆ ಹೆಚ್ಚಿಸುವುದರ ಜೊತೆಗೆ, ಕಳೆದುಹೋದ ಪೋಷಕಾಂಶಗಳನ್ನು ನೀಡುತ್ತದೆ, ಪ್ರತಿದಿವನ ಎಣ್ಣೆ ಹಚ್ಚಿ ತಲೆಗೆ ಮಸಾಜ್ ಮಾಡುವುದರಿಂದ ಕೂದಲು ಉದರುವುದನ್ನು ನಿಯಂತ್ರಿಸುವುದರ ಜೊತೆಗೆ,  ತಲೆಹೊಟ್ಟು ನಿವಾರಿಸುತ್ತದೆ.

ಬಾಯಿಯ ಆರೋಗ್ಯಕ್ಕೂ ಕೂಡ ಕೊಬ್ಬರಿ ಎಣ್ಣೆ ಉತ್ತಮ ಆಯುರ್ವೇದ ಔಷಧಿಯಾಗಿದೆ. ಬಾಯಿಗೆ ಎಣ್ಣೆ ಹಚ್ಚಿ ನಂತರ ಅದನ್ನು ಹೊರಹಾಕುವುದರಿಂದ ವಸಡಿನ ಸಮಸ್ಯೆ ತಪ್ಪಿಸಬಹುದು, 

ಆಯುರ್ವೇದದಲ್ಲಿ ಪಿತ್ತ ವಿರುದ್ಧಿ ಎಂದು ಕೊಬ್ಬರಿ ಎಣ್ಣೆ ಬಳಸಲಾಗುತ್ತದೆ, ಇದರಿಂದ ಅರ್ಥಿರಿಟಿಸ್ ಸಮಸ್ಯೆ ಹೋಗಲಾಡಿಸಬಹುದು ಎಂದು ಹಿಂದೂಜಾ ಹೆಲ್ತ್ ಕೇರ್ ಡಯಟಿಶಿನ್  ಇಂದ್ರಯಾಣಿ ಪವಾರ್ ತಿಳಿಸಿದ್ದಾರೆ.

ಇನ್ನೂ ತೆಂಗಿನ ಕಾಯಿ ಎಣ್ಣೆಯನ್ನು ಅಡುಗೆಯಲ್ಲಿ ಬಳಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ, ಜೊತೆಗೆ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಜೊತೆಗೆ ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ, 

ಕೊಬ್ಬರಿ ಎಣ್ಣೆಯನ್ನು ಹಲವು ಗಿಡ ಮೂಲಿಕ ಔಷಧಗಳಿಗಾಗಿಯೂ ಬಳಸಲಾಗುತ್ತದೆ. ಕೊಬ್ಬರಿಎಣ್ಣೆಯನ್ನು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಯಾವುದೇ ತೊಂದರೆಯಿಲ್ಲದೇ ಬಳಸಬಹುದಾಗಿದೆ