ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ

 

ಲೋಕದರ್ಶನ ವರದಿ

ವಿಜಯಪುರ 30:  ರೋಟರಿ ಕ್ಲಬ್ ಆಫ್ ಬಿಜಾಪುರ ಉತ್ತರ, ಇನ್ನರ್ವ್ಹಿಲ್ ಕ್ಲಬ್ ಆಫ್ ಬಿಜಾಪುರ ಉತ್ತರ ಹಾಗೂ ಮಹಾನಗರ ಪಾಲಿಕೆಯ ಸದಸ್ಯರಾದ ಉಮೇಶ ವಂದಾಲರವರ  ನೇತೃತ್ವದಲ್ಲಿ ಐತಿಹಾಸಿಕ ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕೇಂದ್ರ ಬಸ್ ನಿಲ್ದಾಣದಲ್ಲಿ ಇರುವ ಕಸ, ಕಡ್ಡಿಗಳನ್ನು ಗುಡಿಸಿ ಅವುಗಳನ್ನು ಮಹಾನಗರ ಪಾಲಿಕೆಯ ಕಸದ ವಾಹನಗಳಲ್ಲಿ ರವಾನಿಸಲಾಯಿತು ಅವಿರತವಾಗಿ ಈ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದೇ ವೇಳೆಯಲ್ಲಿ ಪ್ರಯಾಣಿಕರಿಗೆ ಸ್ವಚ್ಛತೆಯ ಬಗ್ಗೆ ಹಾಗೂ ಕೇಂದ್ರ ಬಸ್ ನಿಲ್ದಾಣದ ಉಳಿವಿನ ಬಗ್ಗೆ ಬ್ಯಾನರ್ ಹಾಗೂ ಫ್ಲೆ ಕಾಡ್ಸರ್್ ಗಳ ಮೂಲಕ ಜಾಗೃತಿ ಮೂಡಿಸುವುದಲ್ಲದೇ ಕೇಂದ್ರ ಬಸ್ ನಿಲ್ದಾಣವು ನಮ್ಮೆಲ್ಲರ ಸ್ವತ್ತು ನಾವೆಲ್ಲರೂ ಸ್ವಚ್ಛತೆಯಿಂದ ಇಡಬೇಕಾಗಿದೆ ಎಂದು ಘೋಷಣೆಗಳನ್ನು ಕೂಗುತ್ತ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷರಾದ ಡಾ.ಅಶೋಕ ವಾಲಿ, ಇನ್ನರ್ವ್ಹಿಲ್ ಕ್ಲಬ್ನ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮೀ ಗಿರಗಾಂವಿ ಅವರು  ಮಾತನಾಡಿದರು.ಈಶಾನ್ಯ ಕನರ್ಾಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂಧಿ ವರ್ಗವು ಕೂಡ ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಾಗೃತಿಯ ಜೊತೆಗೆ ಪ್ರಯಾಣಿಕರಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವಂತೆ ಮನವಿ ಮಾಡಿಕೊಂಡರು. ಕಾರ್ಯಕ್ರಮದಲ್ಲಿ ಹಿರಿಯ ರೋಟರಿ ಸದಸ್ಯರಾದ ಡಾ.ಪ್ರಾಣೇಶ ಜಾಗೀರದಾರ, ವಿಠ್ಠಲ ತೇಲಿ, ಅಮೃತ ತೋಶ್ನಿವಾಲ, ರವಿ ಶಿಲ್ಲೇದಾರ, ರಾಜು ಬಿಜ್ಜರಗಿ, ಮಲ್ಲು ಕಲಾದಗಿ, ಕ್ಲಬ್ ಕಾರ್ಯದಶರ್ಿ, ಸಹರ್ಷ ಶಹಾ, ಶ್ರೀಮತಿ ಶೀಲಾ ಮುರಗೋಡ, ಪ್ರಸನ್ನ ಅಜರೇಕರ, ನವನಾಥ ಕಲ್ಯಾಣಿ, ಬಸವರಾಜ ಕಡಪಟ್ಟಿ, ದಿಲೀಪ ತಾಳಿಕೋಟಿ, ಲಲಿತ ಜೈನ, ಇನ್ನರ್ ವ್ಹಿಲ್ ಕ್ಲಬ್ನ ಸದಸ್ಯರು ಪಾಲಿಕೆ ಸದಸ್ಯರಾದ ಉಮೇಶ ವಂದಾಲ ಅಭಿಮಾನಿ ಬಳಗ ಹಾಗೂ ಈಕರಾರ ಸಂಸ್ಥೆಯ ಸಿಬ್ಬಂಧಿವರ್ಗ ಪಾಲ್ಗೊಂಡಿದ್ದರು.