ಲೋಕದರ್ಶನ ವರದಿ
ಮೂಡಲಗಿ 22: ಮನುಷ್ಯ ರೋಗದಿಂದ ದೂರವಿರಲು ಸ್ವಚ್ಛತೆ ಕಾಯ್ದುಕೊಳ್ಳಬೇಕು. ದಿನನಿತ್ಯದ ಜೀವನದಲ್ಲಿ ಆರೋಗ್ಯಕರ ಜೀವನ ನಡೆಸಲು ಪ್ರತಿಯೊಬ್ಬರು ತಮ್ಮ ಸುತ್ತ ಮುತ್ತಲು ಸ್ವಚ್ಛ ಪರಿಸರ ನಿಮರ್ಿಸಿಕೊಳ್ಳಬೇಕೆಂದು ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಖೋಣಿ ಹೇಳಿದರು.
ಅವರು ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೆಹರು ಯುವ ಕೇಂದ್ರ ಬೆಳಗಾವಿ, ಗಾರ್ಡನ್ ಅಭಿವೃದ್ದಿ ಸಂಸ್ಥೆ ಮೂಡಲಗಿ, ಜೈ ಕನರ್ಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಘ ಹಳ್ಳೂರ, ಮಂಜುನಾಥ ಸೈನಿಕ ತರಭೇತಿ ಕೇಂದ್ರ ಮೂಡಲಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಜಾಗೃತಿ ಮತ್ತು ಶ್ರಮದಾನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಸ್ವಚ್ಛತೆ ಎನ್ನುವುದು ವಿದ್ಯಾಥರ್ಿ ಜೀವನದಿಂದಲೇ ಪ್ರಾರಂಭವಾಗಬೇಕು. ವಿದ್ಯಾಥರ್ಿಗಳು ಬದಲಾದರೆ ಅವರ ಮನೆ, ಮನೆಯಿಂದ ಗ್ರಾಮ, ನಗರ ಹೀಗೆ ದೇಶವೇ ಸ್ವಚ್ಛತೆಯಾಗುತ್ತದೆ. ಆದ್ದರಿಂದ ವಿದ್ಯಾಥರ್ಿಗಳು ಗ್ರಾಮೀಣ ಜನರಲ್ಲಿ ಸ್ವಚ್ಚತೆ, ಅರೋಗ್ಯ ಮತ್ತು ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು. ಸಂಘ ಸಂಸ್ಥೆಗಳು ಇಂತಹ ಅಭಿಯಾನಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯವಾಗಿದೆ ಎಂದ ಅವರು ಕೇಂದ್ರ ಸಕರ್ಾರ ಮತ್ತು ರಾಜ್ಯ ಸಕರ್ಾರದ ಆಯುಷ್ಮಾನ್ ಭಾರತ್ ಯೋಜನೆಯ ಬಗ್ಗೆ ಹಾಗೂ ಆರೋಗ್ಯದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಸುರಕ್ಷ ಪ್ಯಾರ ಮೆಡಿಕಲ್ ಕಾಲೇಜಿನ ಅಧ್ಯಕ್ಷ ಡಾ. ಎಸ್.ಎಸ್ ಪಾಟೀಲ್ ಮಾತನಾಡಿ, ಕೇಂದ್ರ ಸಕರ್ಾರ ಮತ್ತು ರಾಜ್ಯ ಸಕರ್ಾರ ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಗ್ರಾಮೀಣ ಭಾಗದ ಜನರಿಗೆ ಹಲವಾರು ಸೌಲಭ್ಯಗಳನ್ನು ಮತ್ತು ನಗರ ಪ್ರದೇಶದ ಜನರಿಗೆ ಅನುಗುಣವಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಜುನಾಥ ಸೈನಿಕ ತರಭೇತಿ ಕೇಂದ್ರದ ಸಂಸ್ಥಾಪಕ ಎಲ್.ವಾಯ್. ಅಡಿಹುಡಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ವಾಹನಗಳ ದಟ್ಟನೆಯಿಂದ ಗಿಡಮರಗಳು ನಾಶವಾಗುತ್ತಿವೆ, ಹೀಗೆ ಗಿಡಮರಗಳು ನಾಶವಾಗುತ್ತಾ ಹೋದರೆ ಮುಂದೊಂದು ದಿನ ಹನಿ ಹನಿ ನೀರಿಗೆ ಪರಿತಪಿಸಬೇಕಾಗುತ್ತದೆ. ಆದ್ದರಿಂದ ಗಿಡಮರಗಳನ್ನು ಬೆಳೆಸಿ ಅವುಗಳನ್ನು ಸಂರಕ್ಷಿಸುವ ಮೂಲಕ ಉತ್ತಮ ಪರಿಸರ ಕಾಯ್ದುಕೊಳ್ಳುವುದು ಅತಿ ಅವಶ್ಯವಾಗಿದೆ. ಮಂಜುನಾಥ ಸೈನಿಕ ತರಭೇತಿ ಕೇಂದ್ರದ ವಿದ್ಯಾಥರ್ಿಗಳಿಂದ ಪ್ರತಿ ತಿಂಗಳ ಏರಡನೇ ಶನಿವಾರ ಸಾರ್ವಜನಿಕ ಸ್ಥಳಗಳ ಸ್ವಚ್ಚತಾ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗಾರ್ಡನ್ ಅಭಿವೃದ್ದಿ ಸಂಸ್ಥೆಯಿಂದ ಇತ್ತಿಚಿಗೆ ಮಂಡ್ಯದಲ್ಲಿ ನಡೆದ 2019-20ನೇ ಸಾಲಿನ ರಾಜ್ಯಮಟ್ಟದ ಶಾಲಾ ಮಕ್ಕಳ ಅಟೋಟ ಸ್ಪಧರ್ೆಯಲ್ಲಿ ಭಾಗವಹಿಸಿ 1500ಮೀ ಮತ್ತು 3000ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಉಮಾಬಾಯಿ ಪ್ರೌಢಶಾಲೆಯ ವಿದ್ಯಾಥರ್ಿನಿ ರೇಖಾ ಫೀರೋಜಿ ಇವರನ್ನು ಸತ್ಕಾರಿಸಲಾಯಿತು.
ಕಾರ್ಯಕ್ರಮದಲ್ಲಿ ಅರವಳಿಕೆ ತಜ್ಞೆ ಸುನೀತ ಗೌಡರ, ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್, ಕಾರ್ಯದಶರ್ಿ ಸುಭಾಸ ಗೊಡ್ಯಾಗೋಳ, ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿದ್ದಣ್ಣಾ ದುರದುಂಡಿ, ಉಮೇಶ ಪೂಜೇರಿ, ಸೋಮು ಹಿರೇಮಠ, ವಿಲ್ಸನ್ ಕಾರವಾರ, ಮಂಜುನಾಥ ಕುಂಬಾರ, ಹನುಮಂತ, ಈರಪ್ಪ ಢವಳೆಶ್ವರ, ಜಾನಪದ ಗಾಯಕಿಯರಾದ ಲಕ್ಷ್ಮೀಬಾಯಿ ಎನ್ವಾಯ್ಸಿ, ಅಕ್ಕಮಹಾದೇವಿ ಹಾಗೂ ಮಂಜುನಾಥ ಸೈನಿಕ ತರಭೇತಿ ಕೇಂದ್ರದ ವಿದ್ಯಾಥರ್ಿಗಳು, ಡಿಎಮ್ಎಲ್ಟಿ ಕಾಲೇಜಿನ ವಿದ್ಯಾಥರ್ಿನೀಯರು, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಂಘದ ಸದಸ್ಯರು ಮತ್ತು ಮಂಜುನಾಥ ಸೈನಿಕ ತರಭೇತಿ ಕೇಂದ್ರದ ವಿದ್ಯಾಥರ್ಿಗಳು, ಡಿಎಮ್ಎಲ್ಟಿ ಕಾಲೇಜಿನ ವಿದ್ಯಾಥರ್ಿನೀಯರಿಂದ ಸಮುದಾಯ ಆರೋಗ್ಯ ಕೇಂದ್ರದ ಪರಿಸರವನ್ನು ಸ್ವಚ್ಛಗೊಳಿಸುವುದರ ಜೊತೆಗೆ ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮವನ್ನು ಸುಧೀರ ನಾಯರ್ ನಿರೂಪಿಸಿದರು. ಸಿದ್ದಣ್ಣಾ ದುರದುಂಡಿ ಸ್ವಾಗತಿಸಿ, ವಂದಿಸಿದರು.