ಲೋಕದರ್ಶನ ವರದಿ
ಹೊನ್ನಾವರ, 14: ಕೆಲವು ದಿನಗಳ ಹಿಂದೆ ಉದ್ಘಾಟನೆಗೊಂಡ ಕನರ್ಾಟಕ ಕ್ರಾಂತಿರಂಗ ಬಳ್ಕೂರ ಘಟಕ ಗ್ರಾಮದ ಸ್ವಚತೆಗೆ ಮುಂದಾಗಿದೆ ಇಂದು ಸೋಮವಾರ ಬೆಳಿಗ್ಗೆ ಕನರ್ಾಟಕ ಕ್ರಾಂತಿರಂಗ ಬಳ್ಕೂರ ಘಟಕ ಹಾಗೂ ಗ್ರಾಮ ಪಂಚಾಯತ ಆಶ್ರಯದಲ್ಲಿ ಬಳ್ಕೂರ ಬ್ರಿಜ್ ದೇವಿ ಮನೆ ದೇವಸ್ಥಾನದ ಆವರಣವನ್ನ ಸ್ವಚ್ ಗೋಳ್ಳಿಸಿ ಬ್ರಿಜ್ನಿಂದ ರಥಬಿದಿಯವರೆಗೆ ಸತತ ಮೂರು ಘಂಟಗಳ ಕಾಲ ಸ್ವಚ್ಛತಾ ಕಾರ್ಯಕ್ರಮ ಹಮ್ಮಿ ಕೋಂಡಿತ್ತು ರಸ್ತೆ ಬದಿಯಲ್ಲಿರುವ ಪ್ಲಾಸ್ಟಿಕ್ ಕಸ ಕಡ್ಡಿಗಳನ್ನು ಸ್ವಚಗೊಳಿಸಿ ಗ್ರಾಮದ ಅಂಗಡಿಕಾರರಿಗೆ ಅರಿವು
ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಕೇಶವ ನಾಯ್ಕ ಮಾದ್ಯಮದವರೊಂದಿಗೆ ಮಾತನಾಡಿ ಇಂದು ಕನರ್ಾಟಕ ಕ್ರಾಂತರಗದ ಎಲ್ಲಾ ಗೆಳೆಯರ ಜೊತೆಗೂಡಿ ಪ್ರಧಾನ ಮಂತ್ರಿ ಕನಸಾದ ಸ್ವಚ್ಛ ಭಾರತ ಅವರ ಕನಸನು ನನಸು ಮಾಡುವುದಕ್ಕೆ ಬಳ್ಕೂರಿನ ಕ್ರಾಂತಿರಂಗದ ಎಲ್ಲಾ ಗೆಳೆಯರ ಜೊತೆಗೆ ಸ್ವಚತಾ ಕಾರ್ಯಕ್ರಮವನ್ನು ಹಂಮ್ಮಿಕೊಂಡಿದ್ದೇವೆ ಜನರಿಗೆ ತಿಳುವಳಿಕೆಯನ್ನು ನೀಡಿದೆವೆ ಇದು ಪ್ರತಿ ಉರಿನಲ್ಲೂ ಆಗಬೇಕು ಇದು ಪ್ರತಿ ಉರಿನ ನಾಗರಿಕರ ಜವಬ್ದಾರಿ ಜನರು ಸಹ ಇಂತಹ ಓಳ್ಳೆಯ ಕಾರ್ಯಕ್ರಮಕ್ಕೆ ಕೈ ಜೋಡಿಸ ಬೇಕಾಗಿದೆ ಎಂದರು.
ನಂತರ ಗ್ರಾಮ ಪಂಚಾಯತ ಸದಸ್ಯರಾದ ಗಣಪತಿ ನಾಯ್ಕ ಬಿಟಿ ಮಾತನಾಡಿ ನಮ್ಮ ಬಳ್ಕೂರಿನಲ್ಲಿ ಕ್ರಾಂತಿರಂಗ ಉದ್ಘಾಟನೆ ಯಾಗಿದಾಗಿನಿಂದ ಅನೇಕ ಕಾರ್ಯದಲ್ಲಿ ತೊಡಗಿಕೊಳ್ಳುತಿದೆ ಇಂದು ಸ್ವಚತಾ ಕಾರ್ಯಕ್ರಮವನ್ನು ಹಂಮ್ಮಿ ಕೋಂಡಿದಾರೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸು ಇದು ಎಲ್ಲಾ ಗ್ರಾಮದಲ್ಲಿ ಯುವಕರು ಪ್ರೇರಣೆ ನೀಡಬೇಕಾಗಿದೆ ನಮ್ಮ ಗ್ರಾಮ ನಮ್ಮ ಉರು ಸ್ವಚ ವಾಗಿದ್ದರೆ ಆರೋಗ್ಯದಿಂದ ಇರಲೂ ಸಾದ್ಯ ಎಂದರು.
ನಂತರ ಕನರ್ಾಟಕ ಕ್ರಾಂತಿರಂಗದ ಬಳ್ಕೂರ ಘಟಕದ ಅಧ್ಯಕ್ಷರಾದ ದೇವೆಂದ್ರ ನಾಯ್ಕ ಮಾತನಾಡಿ ಗ್ರಾಮ ಪಂಚಾಯತ ಅಧ್ಯಕ್ಷರು ಸದಸ್ಯರುಸೇರಿ ನಮ್ಮ ಸಂಘದ ಸದಸ್ಯರು ಸೇರಿ ಸ್ವಚತಾ ಕಾರ್ಯಕ್ರಮವನ್ನು ನಡೆಸಿ ಕೋಟ್ಟಿದಾರೆ ಎಲ್ಲರಿಗು ದನ್ಯವಾದಗಳು ಮುಂದಿನ ದಿನಗಳಲ್ಲಿ ಸ್ವಚತಾ ಕಾರ್ಯಕ್ರಮ ಹಾಗೂ ಹಲವಾರು ಕಾರ್ಯಕ್ರಮ ಹಮ್ಮಿ ಕೋಳ್ಳಲಿದ್ದೆವೆ ನಮ್ಮ ಪಂಚಾಯತನವರು ವಾಹನ ಸೌಕರ್ಯ ಸ್ವಚತಾ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ಪರಿಕರವನ್ನು ಒದಗಿಸಿದ್ದಾರೆ ಅವರಿಗೆ ಸಂಘದ ಪರವಾಗಿ ದನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಕನರ್ಾಟಕ ಕ್ರಾಂತಿರಂಗದ ಜಿಲ್ಲಾದ್ಯಕ್ಷ ಮಂಗಲದಾಸ ನಾಯ್ಕ, ಜಿಲ್ಲಾ ಯುವ ಅಧ್ಯಕ್ಷ ಸಚಿನ್ ನಾಯ್ಕ, ತಾಲೂಕಾ ಅಧ್ಯಕ್ಷರಾದ ಎಸ್ ಡಿ ಹೆಗಡೆ, ಬಳ್ಕೂರ ಘಟಕದ ಅಧ್ಯಕ್ಷರಾದ ದೇವೆಂದ್ರ ನಾಯ್ಕ, ಗ್ರಾಮ ಪಂಚಾಯತ ಸಹಾಯಕ ವಿಷ್ಣು ನಾಯ್ಕ, ಉಪಾದ್ಯಕ್ಷ ಶೇಖರ ನಾಯ್ಕ, ಕಾರ್ಯದಶರ್ಿ ಅನಂತ ನಾಯ್ಕ, ವಿನೋದ ಆಚಾರಿ, ಗಂಗಾಧರ ಅಂಬಿಗ. ಹರೀಶ ನಾಯ್ಕ, ಗೋಪಾಲ ನಾಯ್ಕ, ಪ್ರಮೋದ ನಾಯ್ಕ, ಪುನಿತ್ ಆಚಾರಿ, ಶ್ರೀಕಾಂತ ನಾಯ್ಕ, ಸಚಿನ್, ಚಂದ್ರಶೇಖರ, ಸಂದಿಪ್, ಮುಂತಾದ ಸದಸ್ಯರು ಇದ್ದರು.