ಲೋಕದರ್ಶನ ವರದಿ
ಗದಗ 17: ಪೌರಕಾಮರ್ಿಕರು ಸ್ವಚ್ಛತಾ ಕಾರ್ಯವನ್ನು ದೇವರ ಕಾರ್ಯವೆಂದು ಭಾವಿಸಿ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನುಡಿದರು.
ಗದಗ ಜಿಲ್ಲಾಡಳಿತ ಭವನದ ಅಡಿಟೋರಿಯಂದಲ್ಲಿ ಜಿಲ್ಲಾಡಳಿತ, ನಗರಾಭಿವೃದ್ಧಿ ಕೋಶ ಹಾಗೂ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿಂದು ಪೌರಕಾಮರ್ಿಕರಿಗಾಗಿ ಏರ್ಪಡಿಸಲಾಗಿದ್ದ ಸ್ವಚ್ಛತಾ ತರಬೇತಿ ಮತ್ತು ಸ್ವಚ್ಛ ಸವರ್ೆಕ್ಷಣೆ-2019 ರ ಪೂರ್ವ ತಯಾರಿ ತರಬೇತಿ ಕಾಯರ್ಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಾತ್ಮಾ ಗಾಂಧೀಜಿಯವರು ಸ್ವಚ್ಛತೆ ದೇವರ ಪೂಜೆಗೆ ಸಮಾನವಾಗಿದೆ ಎಂದು ಹೇಳುತ್ತಿದ್ದರು ಅವರ ಆಶಯದಂತೆ ಹಾಗೂ ನಮ್ಮ ಆರೋಗ್ಯಕರ ಜೀವನಕ್ಕಾಗಿ ಪ್ರತಿಯೊಬ್ಬರು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ನಗರದ ಸ್ವಚ್ಛತೆ ಜೊತೆಗೆ ತಮ್ಮ ಆರೋಗ್ಯದ ಕಡೆಗೂ ಪೌರಕಾಮರ್ಿಕರು ಗಮನ ಹರಿಸಬೇಕು ಎಂದರು. ಸ್ವಚ್ಛತಾ ಕಾರ್ಯ ಕೇವಲ ಪೌರಕಾಮರ್ಿಕರಿಗೆ ಸೀಮಿತವಾಗದೆ ಸಾರ್ವಜನಿಕರಲ್ಲೂ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯವಾಗಬೇಕಾಗಿದೆ. ನಗರಗಳು ಸ್ವಚ್ಛವಾಗಿರುವದು ಪೌರಕಾಮರ್ಿಕರ ಕೆಲಸದಿಂದಾಗಿ. ಜಿಲ್ಲೆಯಲ್ಲಿ ಸರಕಾರದ ಆದೇಶದಂತೆ ಈಗಾಗಲೇ 259 ಪೌರಕಾಮಿಕರಿಗೆ ನೇಮಕಾತಿ ಪತ್ರಗಳನ್ನು ನೀಡಲಾಗಿದೆ. ಪೌರಕಾಮರ್ಿಕರ ಸ್ವಚ್ಛತೆ ಕುರಿತ ಈ ತರಬೇತಿ ಕಾಯರ್ಾಗಾರದ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಲು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋನಾ ನಿದರ್ೇಶಕರಾದ ರುದ್ರೇಶ ಎಸ್.ಎನ್ ಮಾತನಾಡಿ ಪೌರ ಕಾಮರ್ಿಕರು ತಾವು ಕರ್ತವ್ಯ ನಿರ್ವಹಿಸುವಾಗ ಕಡ್ಡಾಯವಾಗಿ ಕೈಗವಚ, ಶೂಗಳನ್ನು ಉಪಯೋಗಿಸಿ ತಮ್ಮ ಆರೋಗ್ಯ ರಕ್ಷಣೆಗೂ ಮುಂದಾಗಬೇಕು. ಶೀಘ್ರದಲ್ಲೇ ಗದಗ-ಬೆಟಗೇರಿ ನಗರ ಸಭೆ ವತಿಯಿಂದ ಪ್ರತಿ ಸಾವಿರ ಮನೆಗಳಿಗೆ ಒಂದು ಕಸ ಸಂಗ್ರಹದ ಟಿಪ್ಪರ ಒದಗಿಸಲಾಗುವದು. ಸಾರ್ವಜನಿಕರು ಕಸವನ್ನು ರಸ್ತೆ ಅಥವಾ ಚರಂಡಿಗೆ ಹಾಕದೇ ಈ ವಾಹನಗಳಲ್ಲಿ ಹಾಕುವಂತೆ ಜಾಗೃತಿ ಮೂಡಿಬೇಕು ಎಂದು ಪೌರಕಾಮರ್ಿಕರಿಗೆ ಸೂಚನೆ ನೀಡಿದರು.
ಗದಗ-ಬೆಟಗೇರಿ ನಗರ ಸಭೆ ಪೌರಾಯುಕ್ತ ಮನ್ಸೂರ ಅಲಿ ಪ್ರಾಸ್ತಾವಿಕವಾಗಿ ಮಾತನಾಡಿ ಪೌರಕಾಮರ್ಿಕರ ಸೇವೆಯನ್ನು ಗುರುತಿಸಿ ಸರಕಾರ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಸ್ವಚ್ಛತೆಗೆ ಪೌರಕಾಮರ್ಿಕರ ಜೊತೆಗೆ ಸಾರ್ವಜನಿಕರ ಸಹಭಾಗಿತ್ವವು ತುಂಬಾ ಮಹತ್ವದಾಗಿದೆ. ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತು ಇನ್ನೂ ಹೆಚ್ಚಿನ ಅರಿವು ಮೂಡಿಸುವ ಕಾರ್ಯವಾಗಬೇಕಾಗಿದೆ ಎಂದರು.
ಕಾಯರ್ಾಗಾರದಲ್ಲಿ ಭಾಗವಹಿಸಿದ್ದ ಡಿ.ಎಚ್.ಪರಂಗಿ ಅವರು ಪೌರ ಕಾಮರ್ಿಕರ ಕರ್ತವ್ಯಗಳ ಕುರಿತು ಉಪನ್ಯಾಸ ನೀಡಿದರು. ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಜಿಲ್ಲಾ ಪೌರಕಾಮರ್ಿಕರ ಸಂಘದ ಅಧ್ಯಕ್ಷ ವಿರೂಪಾಕ್ಷಪ್ಪ ರಾಮಗೇರಿ, ಸಫಾಯಿ ಕರ್ಮಚಾರಿ ಸಮೀಕ್ಷೆಯ ಆಡಳಿತಾಧಿಕಾರಿ ರಮೇಶ ಕೊಳೂರ, ಜಿಲ್ಲೆಯ ನಗರ, ಪುರಸಭೆ, ಪಟ್ಟಣ ಪಂಚಾಯತಿಯ ಪೌರಕಾಮರ್ಿಕರು ಈ ಕಾಯರ್ಾಗಾರದಲ್ಲಿ ಭಾಗವಹಿಸಿದ್ದರು.