ಸಾಮೂಹಿಕ ಸಹಭಾಗಿತ್ವದಲ್ಲಿ ಸ್ವಚ್ಛ ಮೇವ ಜಯತೆ ಕಾರ್ಯಕ್ರಮ

ಬ್ಯಾಡಗಿ12: ಸಾಮೂಹಿಕ ಸಹಭಾಗಿತ್ವದಲ್ಲಿ ಸ್ವಚ್ಛಮೇವ ಜಯತೆ ಹಾಗೂ ಜಲಾಮೃತ ರಕ್ಷಣೆಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು ಸಾರ್ವಜನಿಕರು ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ತಾಲೂಕಿನ ಕಾಗಿನೆಲೆ ಗ್ರಾಮ ಪಂಚಾಯತ ವ್ಯಾಪ್ತಿಯ ಇಂಗಳಗೊಂದಿ ಗ್ರಾಮದಲ್ಲಿ  ಸ್ವಚ್ಚ ಮೇವ ಜಯತೆ ಕಾರ್ಯಕ್ರಮದ ಅಂಗವಾಗಿ ಘನ ತಾಜ್ಯ ಮತ್ತು ದ್ರವ ತಾಜ್ಯ ವಿಲೇವಾರಿ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಗ್ರಾಮ ಪಂಚಾಯತ ಅಧ್ಯಕ್ಷೆ ಹಯಾತಬಿ ಮತ್ತಿಹಳ್ಳಿ ಹೇಳಿದರು.

   ಗ್ರಾಮೀಣ ನೈರ್ಮಲ್ಯ ಹಾಗೂ ಜಲ ರಕ್ಷಣೆಗಾಗಿ ಜಾಗೃತಿ ಮೂಡಿಸಲು ಜೂನ್ 11 ರಿಂದ   ಜುಲೈ 10 ರವರೆಗೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸ್ವಚ್ಛಮೇವ ಜಯತೆ ಹಾಗೂ ಜಲಾಮೃತ ಕಾರ್ಯಕ್ರಮದಡಿ ಜಾಗೃತಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು, ಜಲಸಾಕ್ಷರತೆ, ಜಲಸಂರಕ್ಷಣೆ, ಜಲಪ್ರಜ್ಞೆ ಹಾಗೂ ಹಸರೀಕರಣದ ಮಹತ್ವ ಹಾಗೂ ಗ್ರಾಮದ ಸ್ವಚ್ಛತೆ, ಕಸಮುಕ್ತಗ್ರಾಮ, ಶೌಚಾಲಯ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

     ಪಿಡಿಓ ವಿಶ್ವನಾಥ ಕಟ್ಟೆಗೌಡ್ರ ಮಾತನಾಡಿ ನಗರ ಮಾದರಿಯಲ್ಲಿ ಗ್ರಾಮೀಣ ಪ್ರದೇಶದಲ್ಲೂ ಹಸಿ ಮತ್ತು ಒಣ ಕಸಗಳ ವಿಲೇವಾರಿಯನ್ನು ವೈಜ್ಞಾನಿಕ ಮಾದರಿಯಲ್ಲಿ ನಡೆಸಲು ತ್ಯಾಜ್ಯ ವಿಲೇವಾರಿ ಘಟಕವನ್ನು ಪ್ರಾರಂಭಿಸಲಾಗಿದ್ದು ಈ ಘಟಕಕ್ಕೆ ಕೇಂದ್ರ ಸರಕಾರದಿಂದ 20 ಲಕ್ಷ ರೂ.ಗಳು ಮಂಜೂರಿಯಾಗಲಿದೆ. ಗ್ರಾಮಗಳಲ್ಲಿ ಬಯಲು ಮುಕ್ತ ಶೌಚವನ್ನು ನಿಷೇಧಿಸಿ ಪ್ರತಿಯೊಬ್ಬರೂ ಶೌಚಾಲಯ ಬಳಸುವಂತೆ ಜಾಗೃತಿ ಮೂಡಿಸಲು ಗುಡ್ಮಾನರ್ಿಂಗ್ ಟೀಮ್ಗಳನ್ನು ರಚಿಸಲಾಗಿದ್ದು, ಸಾರ್ವಜನಿಕರು ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಿದೆ.

  ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯರಾದ ಹುಸೇನಮಿಯಾ ರಾಜೇಬಾಯಿ, ನೂರುಲ್ಲಾ ದಿಡಗೂರ, ಗ್ರಾಮಸ್ಥರಾದ ವೆಂಕಟೇಶ ಕಟ್ಟಿಮನಿ, ರಾಮನಗೌಡ್ರ ಪಾಟೀಲ, ಮುನಾಜಿಲ್ಲಾ ಮತ್ತಿಹಳ್ಳಿ, ಗ್ರಾ.ಪಂ.ಅಕೌಂಟೆಂಟ್ ಗದಿಗೆಪ್ಪ ಕೊಪ್ಪದ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪೂರ್ವದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ನಟ ಗಿರೀಶ ಕಾನರ್ಾಡ್ ಅವರ ನಿಧನಕ್ಕೆ ಒಂದು ನಿಮಿಷ ಮೌನಾಚರಿಸಿ ನಮನ ಸಲ್ಲಿಸಲಾಯಿತು.