ಕೊಪ್ಪಳ: ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮ ಪಂಚಾಯತ್ ಕಾಯರ್ಾಲಯ ಆವರಣದಲ್ಲಿ "ಸ್ವಚ್ಛತಾ ಸಪ್ತಾಹ ಕಾರ್ಯಕ್ರಮ"ದ ಅಂಗವಾಗಿ ಕಾಯರ್ಾಗಾರ ಹಾಗೂ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ಜರುಗಿತು.
ಸ್ವಚ್ಛ ಸವರ್ೇಕ್ಷಣಾ ಗ್ರಾಮೀಣ ಕಾರ್ಯಕ್ರಮವು ಜಿ.ಪಂ. ಯೋಜನಾ ನಿದರ್ೇಶಕ ರವಿ ಬಸರಳ್ಳಿ ಹಾಗೂ ತಾ.ಪಂ. ಕಾರ್ಯನಿವರ್ಾಹಕ ಅಧಿಕಾರಿ ಟಿ. ಕೃಷ್ಣಮೂತರ್ಿ ಅವರ ನೇತೃತ್ವದಲ್ಲಿ ಜರುಗಿತು. ಶಾಲಾ ಮಕ್ಕಳಿಂದ ಗ್ರಾಮದ ವಿವಿಧ ಬೀದಿಗಳಲ್ಲಿ ಸ್ವಚ್ಛತೆ ಜಾಗೃತಿಗಾಗಿ ಜಾಥಾ ಕಾರ್ಯಕ್ರಮವು ಸಹ ನಡೆಯಿತು. ಕಿನ್ನಾಳ ಗ್ರಾ.ಪಂ. ಅಧ್ಯಕ್ಷೆ ಚನ್ನಮ್ಮ ವಾಲ್ಮೀಕಿ, ಉಪಾಧ್ಯಕ್ಷೆ ಗೀತಾ ಬಿದನೂರ, ಅಭಿವೃದ್ಧಿ ಅಧಿಕಾರಿ ವೀರನಗೌಡ್ರ ಚನ್ನವೀರನಗೌಡ್ರ ಸೇರಿದಂತೆ ಸರ್ವ ಸದಸ್ಯರು, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು, ಅಂಗನವಾಡಿ ಆಶಾ ಕಾರ್ಯಕತರ್ೆಯರು ಹಾಗೂ ಶಾಲಾ ವಿದ್ಯಾಥರ್ಿಗಳು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗ್ರಾಮವನ್ನು ಸ್ವಚ್ಛವಾಗಿರಿಸಿಕೊಳ್ಳುವ ಕುರಿತು ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ಇದೇ ಸಂದರ್ಭದಲ್ಲಿ ಜರುಗಿತು.